ಕಿನ್ನರ ಕಾಳಿ ನದಿಯಲ್ಲಿ ಅಪರಿಚಿತ ಶವ ಪತ್ತೆ

Source: sonews | By MV Bhatkal | Published on 19th May 2019, 12:43 PM | Coastal News | Don't Miss |

ಕಾರವಾರ:ಅಪರಿಚಿತ ಗಂಡಸಿನ ಶವ ಕಾಳಿನದಿಯಲ್ಲಿ ಕಿನ್ನರ ಗ್ರಾಮದ ಬಳಿ ಪತ್ತೆಯಾಗಿದೆ ಎಂದು ಗ್ರಾಮೀಣ ಪೊಲೀಸ್ ಠಾಣೆ ಪೊಲೀಸ್ ಪ್ರಕಟಣೆ ತಿಳಿಸಿದೆ.
ಸುಮಾರು 35ರಿಂದ 40 ವರ್ಷದವನಿರಬಹುದದ ವ್ಯಕ್ತಿ ರೈಲಿನಿಂದ ಕಾಳಿನದಿಗೆ ಕಳೆದ ಐದು ದಿನಗಳ ಹಿಂದೆ ಬಿದ್ದಿರಬಹುದು ನಂತರ ಕಾಳಿನದಿಯಲ್ಲಿ ತೇಲುತ್ತಾ ಬಂದು ಕಿನ್ನರ ಅಂಬೆಜೋಗ್‍ದ ಜಾಡಕಿಯ ಹಿನ್ನೀರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಮೃತ ವ್ಯಕ್ತಿಯು ಚೀನ್ಸ್‍ಪ್ಯಾಂಟ್, ಕಪ್ಪು ಬನಿಯನ್ ಧರಿಸಿದ್ದು 5.3 ಅಡಿ ಎತ್ತರ ಇರುತ್ತಾನೆ. ಹೆಸರು ವಿಳಾಸಪತ್ತೆಯಾಗಿರುವುದಿಲ್ಲ. ಯಾವುದಾದರೂ ಪೊಲೀಸ್‍ಠಾಣೆಯಲ್ಲಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿದ್ದರೆ ಅಥವಾ ಮೃತರ ಸಂಬಂಧಿಕರು ಯಾರಾದರೂ ಇದ್ದಲ್ಲಿ ಗ್ರಾಮೀಣ ಪೊಲೀಸ್ ಠಾಣೆ, ಕಾರವಾರ, ದೂರವಾಣಿ ಸಂಖ್ಯೆ 08382 222443, 9480805262 ಅಥವಾ ಉತ್ತರ ಕನ್ನಡ ಜಿಲ್ಲೆ ಪೊಲೀಸ್ ನಿಯಂತ್ರಣ ಕೊಠಡಿ ದೂರವಾಣಿ 08382 226550 ಅನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

Read These Next

ಕಾರವಾರ: ಕುಡಿಯುವ ನೀರು ಸಮಸ್ಯೆ : ಟ್ಯಾಂಕರ್ ಮೂಲಕ ತಕ್ಷಣ ನೀರು ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬರುತ್ತಿರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ತಕ್ಷಣವೇ ಸಾರ್ವಜನಿಕರಿಗೆ ಕುಡಿಯುವ ನೀರು ...

ಕಾರವಾರ: ಮತದಾನ ಜಾಗೃತಿಯ ಬೆಳಕು ಎಲ್ಲೆಡೆ ಪ್ರಕಾಶಿಸಲಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಬೆಳಕು ಕತ್ತಲನ್ನು ದೂರ ಮಾಡಿ, ಎಲ್ಲೆಡೆ ಬೆಳಕು ಮೂಡಿಸುತ್ತದೆ. ಅದೇ ರೀತಿ ಮತದಾನದ ಕುರಿತ ಜಾಗೃತಿಯ ಬೆಳಕನ್ನು ಎಲ್ಲಾ ಮತದಾರರ ...