ಹಂದಿ ಮಾರಾಟದ ಹಣಕ್ಕಾಗಿ ಮಾಲೀಕರು ಮತ್ತು ಚಳ್ಳಕೆರೆ ಸಿಬ್ಬಂದಿ ನಡುವೆ ಕಿತ್ತಾಟ

Source: UNI | By MV Bhatkal | Published on 22nd June 2020, 4:05 PM | State News | Don't Miss |

ಚಳ್ಳಕೆರೆ: ನಗರಸಭೆಯಿಂದ ಶನಿವಾರ ನಗರದಲ್ಲಿ ಇರುವ ಹಂದಿಗಳನ್ನು ಹಿಡಿದು ಹೊರ ಸಾಗಿಸುತ್ತಿದ್ದ ವೇಳೆ ಹಂದಿ ಮಾಲೀಕರು ಮತ್ತು ನಗರಸಭಾ ಸಿಬ್ಬಂದಿ ನಡುವೆ ವಾಗ್ವಾದ ನಡೆಯಿತು.

ಹಂದಿಗಳನ್ನು ತುಂಬಿಕೊಂಡು ಸಾಗಿಸುತ್ತಿದ್ದ ಟೆಂಪೋಗೆ ಅಡ್ಡಲಾಗಿ ನಿಂತುಕೊಂಡ ಹಂದಿ ಸಾಕಾಣಿಕೆದಾರರು, ಹಂದಿಗಳನ್ನು ಮಾರಾಟ ಮಾಡಿ ಬಂದ ಹಣ ನಮಗೆ ಕೊಡಬೇಕು ಎಂದು ಹಂದಿ ಸಾಕಾಣಿಕೆದಾರರಾದ ಸುಂಕಪ್ಪ, ನಾಗರಾಜ, ಹೊನ್ನೂರು ಸ್ವಾಮಿ, ಮಲ್ಲೇಶಿ, ತಮ್ಮಣ್ಣ ಪಟ್ಟುಹಿಡಿದರು.
ಸ್ಥಳೀಯ ಆಡಳಿತದಿಂದ ಊರ ಹೊರಭಾಗದಲ್ಲಿ ಜಾಗ ತೋರಿಸಬೇಕು. ಗೂಡುಗಳನ್ನು ಕಟ್ಟಿಕೊಂಡು ನಗರದ ಹೊರಭಾಗದಲ್ಲಿ ಹಂದಿಗಳನ್ನು ಸಾಕಾಣಿಕೆ ಮಾಡಿಕೊಳ್ಳುತ್ತೇವೆ. ಕರೊನಾ ಸಮಸ್ಯೆಯಿಂದ ಹಂದಿಗಳನ್ನು ಹೊರ ಸಾಗಿಸಲು ತಿಳಿಸಲಾಗಿತ್ತು.
ಸ್ವಲ್ಪ ಹಂದಿಗಳನ್ನು ಹಿಡಿದು ಬೇರೆ ಕಡೆ ಬಿಟ್ಟು ಬರಲಾಗಿತ್ತು. ಗಾಬರಿಯಾಗಿದ್ದ ಹಂದಿಗಳನ್ನು ಮತ್ತೆ ಹಿಡಿಯಲು ಸ್ವಲ್ಪ ಸಮಯಬೇಕೆಂದು ಕೇಳಿಕೊಂಡಿದ್ದರೂ 20 ದಿನಗಳ ಹಿಂದೆ 150 ಹಂದಿಗಳನ್ನು ನಗರಸಭಾ ಸಿಬ್ಬಂದಿ ಹೊರ ಸಾಗಿಸಿ ಮಾರಿಕೊಂಡಿದ್ದಾರೆ ಎಂದು ದೂರಿದರು.
ಇವುಗಳ ಹಣವನ್ನು ಕೊಡಿಸುವ ಕೆಲಸ ಆಗಬೇಕು ಎಂದು ಸಾಕಾಣಿಕೆದಾರರು ಆಗ್ರಹಿಸಿದರು.
ಕೋವಿಡ್-19 ಪರಿಣಾಮ ನಗರದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಹೆಚ್ಚಿನ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಹಂದಿಗಳನ್ನು ಹೊರಸಾಗಿಸುವ ಸಂಬಂಧ ಸಾಕಾಣಿಕೆದಾರರ ಸಭೆ ನಡೆಸಲಾಗಿತ್ತು. ಮೂರು ಬಾರಿ ನೋಟಿಸ್ ನೀಡಿದ್ದರೂ ಎಚ್ಚೆತ್ತುಕೊಂಡಿರಲಿಲ್ಲ. ಆದ್ದರಿಂದ ಹಂದಿ ಹಿಡಿಯುವವರನ್ನು ಕರೆಸಿ ನಗರದಿಂದ ಹೊರ ಸಾಗಿಸಲಾಗಿದೆ.
ಮಹಾಲಿಂಗಪ್ಪ ಆರೋಗ್ಯ ನಿರೀಕ್ಷಕ

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...