ಅಮಿತ್ ಶಾಗೆ ಗೃಹ ಖಾತೆ, ರಾಜನಾಥ್ ಸಿಂಗ್ ಗೆ ರಕ್ಷಣೆ; ಮೋದಿ ಹೊಸ ಸರ್ಕಾರದ ಸಚಿವರ ಖಾತೆ ಹಂಚಿಕೆ ಪಟ್ಟಿ ಇಲ್ಲಿದೆ

Source: ANI | By I.G. Bhatkali | Published on 31st May 2019, 4:29 PM | National News |
ನವದೆಹಲಿ: 2ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ಅಮಿತ್ ಶಾಗೆ ಗೃಹ ಖಾತೆ ಮತ್ತು ರಾಜನಾಥ್ ಸಿಂಗ್ ಅವರಿಗೆ ರಕ್ಷಣಾ ಇಲಾಖೆಯ ಜವಾಬ್ದಾರಿ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ಬಿಜೆಪಿ ಅಧ್ಯಕ್ಷರಾಗಿದ್ದ ಅಮಿತ್ ಶಾ ಅವರಿಗೆ ಮೋದಿ ಕ್ಯಾಬಿನೆಟ್ ನಲ್ಲಿ 2ನೇ ಸ್ಥಾನ ನೀಡಲಾಗಿದ್ದು, ಅವರಿಗೆ ಗೃಹಖಾತೆ ನೀಡಲಾಗಿದೆ. ಅಂತೆಯೇ ಈ ಹಿಂದೆ ಗೃಹಖಾತೆ ನಿರ್ವಹಣೆ ಮಾಡಿದ್ದ ರಾಜನಾಥ್ ಸಿಂಗ್ ಅವರಿಗೆ ರಕ್ಷಣಾ ಇಲಾಖೆಯ ಜವಾಬ್ದಾರಿ ನೀಡಲಾಗಿದ್ದು, ರಕ್ಷಣಾ ಇಲಾಖೆಯನ್ನು ನಿರ್ವಹಿಸಿದ್ದ ನಿರ್ಮಲಾ ಸೀತಾರಾಮನ್ ಅವರಿಗೆ ವಿತ್ತ ಇಲಾಖೆಯ ಜವಾಬ್ದಾರಿ ನೀಡಲಾಗಿದೆ.

ಇದೇ ಮೊದಲ ಬಾರಿಗೆ ಕೇಂದ್ರ ಸಚಿವ ಸಂಪುಟ ಸೇರಿರುವ ಮಾಜಿ ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್ ಅವರಿಗೆ ವಿದೇಶಾಂಗ ಇಲಾಖೆಯ ಜವಾಬ್ದಾರಿ ನೀಡಲಾಗಿದ್ದು, ಉಳಿದಂತೆ ಸಚಿವರ ಖಾತೆ ಹಂಚಿಕೆ ವಿವರ ಇಂತಿದೆ.

ಪ್ರಧಾನಿ ನರೇಂದ್ರ ಮೋದಿ: ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳು, ಪರಮಾಣು ಶಕ್ತಿ ಇಲಾಖೆ, ಬಾಹ್ಯಾಕಾಶ ಇಲಾಖೆ, ಎಲ್ಲ ಪ್ರಮುಖ ನೀತಿಗಳ ನಿರ್ವಹಣೆ ಮತ್ತು ಇತರೆ ಹಂಚಿಕೆಯಾಗದ ಖಾತೆಗಳು

ಅಮಿತ್ ಶಾ: ಗೃಹ ಇಲಾಖೆ

ರಾಜನಾಥ್ ಸಿಂಗ್: ರಕ್ಷಣಾ ಇಲಾಖೆ

ನಿತಿನ್ ಗಡ್ಕರಿ: ಸಾರಿಗೆ ಇಲಾಖೆ, ಹೆದ್ದಾರಿ ಸಚಿವಾಲಯ, ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕಾ ಸಚಿವಾಲಯ

ಡಿವಿ ಸದಾನಂದಗೌಡ: ರಸಗೊಬ್ಬರ ಇಲಾಖೆ

ನಿರ್ಮಲಾ ಸೀತಾರಾಮನ್: ವಿತ್ತ ಸಚಿವಾಲಯ, ಕಾರ್ಪೋರೇಟ್ ವ್ಯವಹಾರಗಳು

ರಾಮ್ ವಿಲಾಸ್ ಪಾಸ್ವಾನ್: ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸರಬರಾಜು ಇಲಾಖೆ

ನರೇಂದ್ರ ಸಿಂಗ್ ತೋಮರ್: ಕೃಷಿ ಮತ್ತು ರೈತರ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ರವಿ ಶಂಕರ್ ಪ್ರಸಾದ್: ಕಾನೂನು ಮತ್ತು ನ್ಯಾಯಾಂಗ ಸಚಿವ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಹರ್ಸೀಮ್ರತ್ ಕೌರ್: ಆಹಾರ ಸಂಸ್ಕರಣಾ ಸಚಿವಾಲಯ

ತಾವರ್ ತಂದ್ ಗೆಹ್ಲೂಟ್: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

ಎಸ್ ಜೈಶಂಕರ್: ವಿದೇಶಾಂಗ ಇಲಾಖೆ

ರಮೇಶ್ ಪೋಖ್ರಿಯಲ್: ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ

ಅರ್ಜುನ್ ಮುಂಡಾ: ಬುಡಕಟ್ಟು ವ್ಯವಹಾರ ಇಲಾಖೆ

ಸ್ಮೃತಿ ಇರಾನಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ  ಅಭಿವೃದ್ದಿ ಇಲಾಖೆ, ಜವಳಿ ಇಲಾಖೆ

ಡಾ.ಹರ್ಷವರ್ಧನ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ ಸಚಿವಾಲಯ

ಪ್ರಕಾಶ್ ಜವಡೇಕರ್: ಪರಿಸರ, ಅರಣ್ಯ, ಹವಾಮಾನ ಬದಲಾವಣೆ, ಮಾಹಿತಿ ಮತ್ತು ಪ್ರಸಾರ ಇಲಾಖೆ

ಪಿಯೂಶ್ ಗೋಯಲ್: ರೈಲ್ವೇ, ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ

ಧರ್ಮೇಂದ್ರ ಪ್ರಧಾನ್: ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಉಕ್ಕು

ಮುಖ್ತಾರ್ ಅಬ್ಬಾಸ್ ನಖ್ವಿ: ಅಲ್ಪ ಸಂಖ್ಯಾತ ವ್ಯವಹಾರಗಳು

ಪ್ರಹ್ಲಾದ್ ಜೋಷಿ: ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿಗಾರಿಕೆ

ಮಹೇಂದ್ರ ನಾಥ್ ಪಾಂಡೇ: ಕೌಶಲ್ಯ ಅಭಿವೃದ್ಧಿ, ಹೊಸ ಉದ್ಯಮ

ಅರವಿಂದ ಗಣಪತ್ ಸಾವಂತ್ : ಭಾರೀ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ

ಗಿರಿರಾಜ್ ಸಿಂಗ್ : ಪಶುಸಂಗೋಪನೆ ಮತ್ತು ಮೀನುಗಾರಿಕೆ

ಗಜೇಂದ್ರ ಸಿಂಗ ಶೇಖಾವತ್ : ಜಲಶಕ್ತಿ, ಸ್ವತಂತ್ರ ಖಾತೆ 

ಸಂತೋಷ್ ಕುಮಾರ್ ಗಂಗ್ವಾರ್ : ಕಾರ್ಮಿಕ ಮತ್ತು ಉದ್ಯೋಗ ಖಾತೆ

ರಾವ್ ಇಂದ್ರಜಿತ್ ಸಿಂಗ್ : ಕಾರ್ಯಕ್ರಮ ಅನುಷ್ಠಾನ  ಮತ್ತು ಅಂಕಿ ಅಂಶ

ಶ್ರೀಪಾದ್ ಯೆಸ್ಸೋ ನಾಯಕ್ : ಆಯುರ್ವೇದ, ಯೋಗ, ಯುನಾನಿ, ರಕ್ಷಣಾ ಖಾತೆ ರಾಜ್ಯ ಸಚಿವರ ಹೊಣೆಗಾರಿಕೆ

ಡಾ.ಜಿತೇಂದ್ರ ಸಿಂಗ್ : ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವಾಲಯ ಮತ್ತು ಪ್ರಧಾನಿ ಕಾರ್ಯಾಲಯ ಸಚಿವ; ಬಾಹ್ಯಾಕಾಶ ಮತ್ತು ಪರಮಾಣು ಇಂಧನ

ಕಿರಣ್ ರಿಜುಜು : ಯುವಜನ ಮತ್ತು ಕ್ರೀಡಾ ಇಲಾಖೆ ಮತ್ತು ಅಲ್ಪಸಂಖ್ಯಾತ ವ್ಯವಹಾರ

ಪ್ರಹ್ಲಾದ್ ಸಿಂಗ್ ಪಟೇಲ್ : ಸಂಸ್ಕೃತಿ ಮತ್ತು ಪ್ರವಾಸೋದ್ಯಮ

ರಾಜ್‌ಕುಮಾರ್ ಸಿಂಗ್ : ಇಂಧನ ಖಾತೆ , ಮರುಬಳಕೆ ಇಂಧನ ಮತ್ತು ಕೌಶಲ್ಯಾಭಿವೃದ್ಧಿ 

ಹರ್‌ದೀಪ್ ಸಿಂಗ್ ಪುರಿ : ವಸತಿ ಮತ್ತು ನಗರಾಭಿವೃದ್ಧಿ , ನಾಗರಿಕ ವಿಮಾನಯಾನ, ವಾಣಿಜ್ಯ ಮತ್ತು ಕೈಗಾರಿಕೆ 

ಮನ್ಸುಕ್ ಎಲ್ ಮಾಂಡವೀಯಾ : ಹಡಗು, ರಾಸಯನಿಕ ಮತ್ತು ರಸಗೊಬ್ಬರ ಖಾತೆ 

ರಾಜ್ಯ ಸಚಿವರು 

ಫಗ್ಗನ್ ಸಿಂಗ್ ಕುಲಸ್ತೆ : ಉಕ್ಕು ಖಾತೆ

ಅಶ್ವಿನ್ ಕುಮಾರ್ ಚೌಬೆ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ

ಅರ್ಜುನ್ ರಾಮ್ ಮೇಘ್ವಾಲ್ : ಸಂಸದೀಯ ವ್ಯವಹಾರಗಳು, ಭಾರೀ ಕೈಗಾರಿಕೆ

ನಿವೃತ್ತ ಜನರಲ್ ವಿ.ಕೆ.ಸಿಂಗ್ : ರಾಜ್ಯ ಹೆದ್ದಾರಿ ಮತ್ತು ಸಾರಿಗೆ

ಕೃಷ್ಣನ್ ಪಾಲ್ : ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ

ದಾನ್ವೆ ರಾವ್ ಸಾಹೇಬ್ ದಾದಾ ರಾವ್ : ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ

ಜಿ ಕೃಷ್ಣನ್ ರೆಡ್ಡಿ : ಗೃಹ ಖಾತೆ

ಪರ್ಷೋತ್ತಮ್ ರುಪಾಲಾ : ಕೃಷಿ ಮತ್ತು ರೈತರ ಕಲ್ಯಾಣ

ರಾಮ್‌ದಾಸ್ ಅಠಾವಲೆ : ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ

ಸಾಧ್ವಿ ನಿರಂಜನ್ ಜ್ಯೋತಿ : ಗ್ರಾಮೀಣಾಭಿವೃದ್ಧಿ

ಬಾಬುಲ್ ಸುಪ್ರಿಯೋ : ಪರಿಸರ, ಹವಾಮಾನ ಬದಲಾವಣೆ

ಸಂಜೀವ್ ಕುಮಾರ್ ಬಲ್ಯಾನ್ : ಪಶುಸಂಗೋಪನೆ, ಮೀನುಗಾರಿಕೆ

ಧೋತ್ರೆ ಸಂಜಯ್ ಶಾಮ್‌ರಾವ್ : ಮಾನವ ಸಂಪನ್ಮೂಲ, ಸಂಪರ್ಕ, ಮಾಹಿತಿ ತಂತ್ರಜ್ಞಾನ

ಅನುರಾಗ್ ಸಿಂಗ್ ಠಾಕೂರ್ : ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳು

ಸುರೇಶ್ ಅಂಗಡಿ : ರೈಲ್ವೆ ಖಾತೆ

ನಿತ್ಯಾನಂದ್ ರೈ  : ಗೃಹ ವ್ಯವಹಾರಗಳು

ರತ್ತನ್ ಲಾಲ್ ಕಟಾರಿಯಾ : ಜಲಶಕ್ತಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ

ವಿ.ಮುರಳೀಧರನ್ : ವಿದೇಶಾಂಗ ವ್ಯವಹಾರಗಳು, ಸಂಸದೀಯ ವ್ಯವಹಾರ

ರೇಣುಕಾ ಸಿಂಗ್ ಸರುತಾ : ಬುಡಕಟ್ಟು ವ್ಯವಹಾರ

ಸೋಮ್‌ ಪರ್ಕಾಶ್ : ವಾಣಿಜ್ಯ ಮತ್ತು ಕೈಗಾರಿಕೆ

ರಾಮೇಶ್ವರ್ ತೇಲಿ : ಆಹಾರ ಸಂಸ್ಕರಣೆ

ಪ್ರತಾಪ್ ಚಂದ್ರ ಸಾರಂಗಿ : ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ

ಕೈಲಾಶ್ ಚೌಧರಿ : ಕೃಷಿ ಮತ್ತು ರೈತರ ಕಲ್ಯಾಣ

ಸುಶ್ರಿ ದೆಬಾಶ್ರೀ ಚೌಧರಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ

ಪ್ರಧಾನಿ ಸಲಹೆ ಮೇರೆಗೆ ರಾಷ್ಟ್ರಪತಿ ಅವರು ನೂತನ ಸಚಿವರುಗಳಿಗೆ ಖಾತೆ ಹಂಚಿಕೆ ಮಾಡಿದ್ದಾರೆ.

Read These Next

ಬಾಬರಿ ಮಸಿದಿ ಐತಿಹಾಸಿಕ ತೀರ್ಪಿಗೆ ಕ್ಷಣಗಣನೆ ಆರಂಭ; ಶನಿವಾರ ಬೆಳಿಗ್ಗೆ ೧೦:೩೦ಕ್ಕೆ ಮಹಾತೀರ್ಪು ಪ್ರಕಟ

ಹೊಸದಿಲ್ಲಿ: ದೇಶದಲ್ಲಿ ಅಸಹನೆ, ಕೋಮುಗಲಭೆ, ಅಶಾಂತಿಗೆ ಕಾರಣವಾಗಿದ್ದ ಭೂ ಒಡೆತನಕ್ಕೆ ಸೇರಿದ ೧೩೪ ವರ್ಷಗಳ ಅತ್ಯಂತ ಹಳೆಯ ಹಾಗೂ ...

`ಪಾಕಿಸ್ತಾನಕ್ಕೆ ಕರೆದೊಯ್ಯಲು ಬಂದಿದ್ದ ಆ ಗಾಡಿಯಲ್ಲಿ ನನ್ನ ದೇಹ ಇತ್ತು, ಆದರೆ ಅದಕ್ಕೆ ಜೀವ ಇದ್ದಿರಲಿಲ್ಲ...!'

ಭಾರತ ವಿದೇಶಾಂಗ ಇಲಾಖೆಯ ಆಜ್ಞಾನುಸಾರ ಹಡೆದ 3 ಮಕ್ಕಳನ್ನು ಭಾರತದಲ್ಲಿಯೇ ಬಿಟ್ಟು ಪಾಕಿಸ್ತಾನಕ್ಕೆ ಹೊರಟಿದ್ದ ಭಟ್ಕಳದ ಶಂಕಿತ ...

ಬ್ಯಾಂಕುಗಳ ವಿಲೀನ ಉನ್ಮಾದ

ವಾಸ್ತವಗಳು ಬ್ಯಾಂಕುಗಳ ಗಾತ್ರ ಮತ್ತು ದಕ್ಷತೆಯ ನಡುವಿನ ಸಂಬಂಧಗಳ ಒದಗಿಸುವ ತಿಳವಳಿಕೆಗಳಿಗೆ ಪೂರಕವಾಗಿಯೇನೂ ಇಲ್ಲ. ಉದಾಹರಣೆಗೆ ...