ಶ್ರೀ ಗುರು ಸುಧೀಂದ್ರ ಕಾಲೇಜಿಗೆ  ಅಮೇರಿಕ ಸಂಜಾತೆ ಕೆರೋಲಿನಾ ಟೆರೇಸ್ ಭೇಟಿ

Source: sonews | By Staff Correspondent | Published on 24th February 2020, 6:11 PM | Coastal News | Don't Miss |

ಭಟ್ಕಳ: ಫಿಡೆಲಿಟಿ ಕಂಪೆನಿಯ ಅಮೇರಿಕ ಸಂಜಾತೆ ಕೆರೋಲಿನಾ ಟೆರೇಸ್, ಇಲ್ಲಿನ ಸಾಗರ ರಸ್ತೆಯ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಸಂಸ್ಥೆಯ ಶ್ರೀ ಗುರು ಸುಧೀಂದ್ರ ಕಾಲೇಜಿಗೆ ಸೋಮವಾರ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದಿಸಿದರು. ಫಿಡೆಲಿಟಿ ನ್ಯಾಶನಲ್ ಫಿನಾನ್ಶಿಯಲ್ ಕಂಪೆನಿಯೊಂದಿಗಿನ ಒಡಂಬಡಿಕೆಯ ಫಲಶೃತಿಯಾಗಿ ಉದ್ಯೋಗ ಪಡೆದ ವಿದ್ಯಾರ್ಥಿಗಳೊಂದಿಗೆ ಈ ಸಂವಾದ ಕಾರ್ಯಕ್ರಮ ನಡೆಯಿತು. 

ಭಟ್ಕಳ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷ ಡಾ. ಸುರೇಶ್ ವಿ ನಾಯಕ್ ಮಾತನಾಡಿ "ಭಾರತಕ್ಕೆ ಟ್ರಂಪ್ ಬಂದ ದಿನವೇ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿಗೆ ಫಿಡೆಲಿಟಿ ಕಂಪೆನಿಯ ಅಮೇರಿಕ ಸಂಜಾತೆ ಕೆರೋಲಿನಾ ಟೆರೇಸ್ ಭೇಟಿ ನೀಡಿದ್ದು ಬಹಳ ವಿಶೇಷ ಹಾಗೂ ಅವಿಸ್ಮರಣೀಯ ಘಳಿಗೆ ಎಂದು ಸ್ಮರಿಸಿದರು. 

ಎಫ್.ಎನ್.ಎಫ್ ಕಂಪೆನಿಯ ಹಿರಿಯ ಉಪಾಧ್ಯಕ್ಷೆ ಕೆರೋಲಿನಾ ಟೆರೇಸ್ ಮಾತನಾಡಿ ಈ ಕಾಲೇಜಿಗೆ ಭೇಟಿ ನೀಡಿದ್ದು ನನ್ನ ಸೌಭಾಗ್ಯ, ಇಲ್ಲಿನ ವಿದ್ಯಾರ್ಥಿಗಳ ಕಲಿಯುವ ಹಂಬಲ ಉತ್ಕಟವಾದದ್ದು ಎಂದು ಶ್ಲಾಘಿಸಿದರು. 

ಈ ಭೇಟಿಯಿಂದ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶದ ಹೆಬ್ಬಾಗಿಲು ತೆರೆದಂತಾಗಿದೆ. ಕಾರಣ ನಮ್ಮ ಜಿಲ್ಲೆಗೆ ಪ್ರಪ್ರಥಮ ಬಾರಿಗೆ ಭೇಟಿ ನೀಡಿದ ಪ್ರಯುಕ್ತ ಜಿಲ್ಲೆ ಹಾಗೂ ಭಟ್ಕಳದ ಜನತೆಯ ಪರವಾಗಿ ಅಮೇರಿಕಾದಿಂದ ಆಗಮಿಸಿದ ಅತಿಥಿಯನ್ನು ಗೌರವಿಸಲಾಯಿತು.  

ಈ ಸಂದರ್ಭದಲ್ಲಿ ಫಿಡೆಲಿಟಿ ಅಧಿಕಾರಿಗಳಾದ ಸುಷ್ಮಾ ಬುಟಿಯಾ, ಜ್ಯೋತಿ ಕೆ., ತರಬೇತುದಾರ ಓಂಕಾರ್ ಮರಬಳ್ಳಿ, ಕಾಲೇಜಿನ ಉದ್ಯೋಗಾಧಿಕಾರಿ ವಿಘ್ನೇಶ್ ಪ್ರಭು ಉಪಸ್ಥಿತರಿದ್ದರು. ಪ್ರಾಂಶುಪಾಲ ಶ್ರೀನಾಥ್ ಪೈ ಪ್ರಾಸ್ಥಾವಿಕವಾಗಿ ಮಾತನಾಡಿದರು, ಕಾವ್ಯಶ್ರೀ ಉಪಾಧ್ಯಾಯ ಸ್ವಾಗತಿಸಿದರೆ, ಸೀಮಾ ನಾಯ್ಕ ವಂದಿಸಿದರು, ಉಪನ್ಯಾಸಕಿ ಉನ್ನತಿ ಬಡಾಲ್ ಹಾಗೂ ವಿದ್ಯಾರ್ಥಿನಿ ದಿವ್ಯಾ ನಿರೂಪಿಸಿದರು.  

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...