``ಅಮೆರಿಕಾ ಯಾವತ್ತೂ ಭಾರತದ ಪಾಲಿಗೆ ಒಬ್ಬ  ಪ್ರಾಮಾಣಿಕ  ಸ್ನೇಹಿತ-ಟ್ರಂಪ್

Source: sonews | By Staff Correspondent | Published on 24th February 2020, 11:36 PM | National News |

ಅಹ್ಮದಾಬಾದ್: ಕಿಕ್ಕಿರಿದು ತುಂಬಿದ್ದ ಅಹ್ಮದಾಬಾದ್‍ ನ ಮೊಟೇರಾ ಸ್ಟೇಡಿಯಂನಲ್ಲಿ ನಮಸ್ತೇ ಟ್ರಂಪ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ``ಅಮೆರಿಕಾ ಯಾವತ್ತೂ ಭಾರತದ ಪಾಲಿಗೆ ಒಬ್ಬ  ಪ್ರಾಮಾಣಿಕ  ಸ್ನೇಹಿತನಾಗಿರುವುದು'' ಎಂದು ಹೇಳಿದರು.

ಒಂದು ಲಕ್ಷಕ್ಕೂ ಅಧಿಕ ಜನರು ಸೇರಿದ್ದ ಸ್ಟೇಡಿಯಂನಲ್ಲಿ ``ನಮಸ್ತೇ, ಅಮೆರಿಕಾ ಲವ್ಸ್ ಇಂಡಿಯಾ'' ಎಂದು ಟ್ರಂಪ್ ಹೇಳಿದಾಗ ನೆರೆದಿದ್ದ ಸಭಿಕರಿಂದ ಭಾರೀ ಕರತಾಡನ ಕೇಳಿ ಬಂತು.

``ನನ್ನ ವಿಶೇಷ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸುತ್ತಾ ನನ್ನ ಭಾಷಣ ಆರಂಭಿಸಲು ಇಚ್ಛಿಸುತ್ತೇನೆ. ಚಹಾ ಮಾರಾಟಗಾರರ ಮಗನಾಗಿರುವ ಇದೇ ನಗರದ ಅವರು ಒಬ್ಬ ಅಸಾಧಾರಣ ವ್ಯಕ್ತಿ, ಎಲ್ಲರೂ ಅವರನ್ನು ಪ್ರೀತಿಸುತ್ತಾರೆ ಆದರೆ ಅವರೊಬ್ಬ ಕಠಿಣ  ಸಂಧಾನಕಾರ'' ಎಂದು ಟ್ರಂಪ್ ಹೇಳಿದರು.

``ಕಳೆದ ಏಳು ದಶಕಗಳಲ್ಲಿ ಭಾರತ ಸಾಧಿಸಿದ ಪ್ರಗತಿ ಅಭೂತಪೂರ್ವ, ಕಳೆದೆರಡು ದಸಕಗಳಲ್ಲಿ  ಅದರ ಪ್ರಗತಿ ಪ್ರಮಾಣ ಕೂಡ ಅದ್ಭುತ. ಭಾರತದ ಜನರು ವಿಶ್ವದ ಇತರರಿಗೆ ಸ್ಫೂರ್ತಿಯಾಗಿದ್ದಾರೆ'' ಎಂದು ಟ್ರಂಪ್ ಹೇಳಿದರು.

ಇದಕ್ಕೂ ಮುನ್ನ ತಮ್ಮ ಸ್ವಾಗತ ಭಾಷಣದಲ್ಲಿ ``ಅಮೆರಿಕಾ-ಭಾರತ ಸಂಬಂಧ ಕೇವಲ ಒಂದು ಸಂಬಂಧವಲ್ಲ, ಬದಲಾಗಿ ಒಂದು ಬೃಹತ್ ಪಾಲುದಾರಿಕೆ'' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...