ಬಾಲನ್ಯಾಯ ಕಾಯಿದೆ 2015ರಡಿಯಲ್ಲಿ ಕಾನೂನು ಬದ್ಧವಾಗಿ ಮಗುವನ್ನು ದತ್ತು ಪಡೆಯಲು ಅವಕಾಶ

Source: sonews | By Staff Correspondent | Published on 4th December 2020, 4:49 PM | Coastal News |

ಕಾರವಾರ: ಯಾವುದೇ ಅನಾಥ ಪರಿತ್ಯಜಿಸಲ್ಪಟ್ಟ ಅಥವಾ ಒಪ್ಪಿಸಲ್ಪಟ್ಟ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿರವರು ದತ್ತು ಮುಕ್ತ ಎಂದು ಘೋಷಿಸಿ ಆದೇಶ ನೀಡಿದ ನಂತರ ಆ ಮಕ್ಕಳು ದತ್ತಕ್ಕೆ ಅರ್ಹರಾಗಿರುತ್ತಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. 

ದತ್ತು ಪಡೆಯಲು ಇಚ್ಛಿಸುವವರು ಮಾನಸಿಕವಾಗಿ, ದೈಹಿಕವಾಗಿ ಸದೃಢವಾಗಿರಬೇಕು ಮತ್ತು ಆರ್ಥಿಕವಾಗಿ ಮಗುವನ್ನು ಸಾಕುವ ಸಾಮಥ್ರ್ಯ ಹೊಂದಿರವರು ಮಕ್ಕಳನ್ನು ದತ್ತು ಪಡೆಯಲು ಅರ್ಹರಾಗಿರುತ್ತಾರೆ. 

ಮಗು ಮಾರಾಟ ಮಾರಾಟಮಾಡುವುದು ಹಾಗೂ ಕಾನೂನು ಬಾಹಿರ ದತ್ತು ಪಡೆಯುವುದು ಅಪರಾಧವಾಗಿರುತ್ತದೆ. ಮಕ್ಕಳನ್ನು ಮಾರುವವರೆಗೂ ಹಾಗೂ ಕೊಳ್ಳುವವರೆಗೂ ಬಾಲಬ್ಯಾಯ ಕಾಯಿದೆ 2015 ಸೆಕ್ಷನ್ 81ರ ಅನ್ವಯ 5 ವರ್ಷಗಳ ಸೆರೆಮನೆ ವಾಸದೊಂದಿಗೆ ರೂ.1. ಲಕ್ಷದವರೆಗೆ ದಂಡ ವಿಧಿಸಲಾಗುವುದು. ಈ ಅಪರಾಧದಲ್ಲಿ ಆಸ್ಪತ್ರೆಯವರು ಶಾಮೀಲಾದರೆ ಶಿಕ್ಷೆಯ ಅವಧಿಯು 3 ವರ್ಷಗಳಿಗೆ ಕಡಿಮೆ ಇಲ್ಲದಂತೆ 7 ವರ್ಷಗಳವೆರೆಗೆ ವಿಸ್ತರಣೆ ಇರುತ್ತದೆ. ಇಂತಹ ಅಪರಾಧ ಕಂಡುಬಂದಲ್ಲಿ ಸಾರ್ವಜನಿಕರು ಮುಕ್ತವಾಗಿ ಸಂಬಂಧಿಸಿದ ಇಲಾಖೆಗಳಿಗೆ ತಿಳಿಸಬಹುದು. 

ಸಹಾಯ ಟ್ರಸ್ಟ್, ದತ್ತು ಮಕ್ಕಳ ಕೇಂದ್ರ, ನಂ.441, ಮರಾಠಿಕೊಪ್ಪ, ಶಿರಸಿ(ಉ.ಕ) ಜಿಲ್ಲೆಯಲ್ಲಿರುವ ಅಧಿಕೃತ ದತ್ತು ಕೇಂದ್ರವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ  ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕಾರವಾರ. ದೂ:08382-220182 ಸಂಪರ್ಕಿಸಬಹುದಾಗಿರುತ್ತದೆ. 
 
 

Read These Next

ನಳೀನಕುಮಾರ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ : ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶಕುಮಾರ.

ಮಂಗಳೂರು : ಕಾಂಗ್ರೆಸ್ ಈಗ ತಿಥಿ ಪಾರ್ಟಿ ಆಗ್ತಾ ಇದೆ ಎಂದ ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ...

ಕಾರವಾರ: ಮತದಾರರ ಪಟ್ಟಿ ಪ್ರಕಟ

77ನೇ ವಿಧಾನಸಭಾ ಕ್ಷೇತ್ರ ಕಾರವಾರ ತಾಲೂಕಿನ ಮತದಾರ ಪಟ್ಟಿಯ ಅರ್ಹತಾ ದಿನಾಂಕವಾದ ಜನವರಿ 1 ನ್ನು ಇಟ್ಟುಕೊಂಡು ವಿಶೇಷ ಸಂಕ್ಷಿಪ್ತ ...

ಕಾರವಾರ: ದಿಶಾ ಸಭೆಯಲ್ಲಿ ಅಧಿಕಾರಿಗಳಿಗೆ ಸಂಸದ ಅನಂತಕುಮಾರ ಹೆಗಡೆ ಸೂಚನೆ ಪರಸ್ಪರ ಸಮನ್ವಯತೆ ಮೂಲಕ ಪ್ರಗತಿ ಸಾಧಿಸಿ

ವಿವಿಧ ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯ ಮಾಡಿಕೊಂಡು ಕೇಂದ್ರ ಸರಕಾರದ ವಿವಿಧ ಯೋಜನೆಗಳನ್ನು ಅರ್ಹ ಫಲನುಭವಿಗಳಿಗೆ ತಲುಪಿಸಿ ಶೇ. ...

ಭಟ್ಕಳ ಅಂಜುಮನ್ ಇಂಜಿನೀಯರಿಂಗ್ ಕಾಲೇಜಿನಲ್ಲಿ ಸಂಶೋಧನೆ ಮತ್ತು ಉದ್ಯಮ ಕೇಂದ್ರ ಉದ್ಘಾಟನೆ

ತಾಲೂಕಿನ ಅಂಜುಮನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಡ್ ಮ್ಯಾನೇಜ್‍ಮೆಂಟ್ ಕಾಲೇಜಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ...