ಭಟ್ಕಳದಲ್ಲಿ ಅಸಮರ್ಪಕ ಮಳೆ ಹಾನಿ ಪರಿಹಾರ ವಿತರಣೆ ಆರೋಪ | ಸೆ.30ಕ್ಕೆ ಸಚಿವರಿಂದಲೇ ಹಾನಿ ಪರಿಹಾರ: ಸಮೀಕ್ಷೆ ಸಚಿವರ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಶಾಸಕ ಸುನಿಲ್ ನಾಯ್ಕ ಕಿಡಿ

Source: so news | By MV Bhatkal | Published on 28th September 2022, 12:37 AM | Coastal News |

ಭಟ್ಕಳ: ಅತಿವೃಷ್ಟಿ ಹಾಗೂ ನೆರೆಯಿಂದಾಗಿ ಮನೆ ಕಳೆದುಕೊಂಡವರಿಗೆ ಸರಿಯಾಗಿ ಪರಿಹಾರ ವಿತರಣೆಯಾಗಿಲ್ಲ. ಗೋಡೆ ಕುಸಿದರೂ ಹಾನಿಗೆ ಒಳಗಾದವರನ್ನು 'ಸಿ' ಪಟ್ಟಿಗೆ ಸೇರಿಸಲಾಗಿದೆ.ಅಧಿಕಾರಿಗಳು ಹೀಗೆ ಮಾಡುತ್ತ ಹೋದರೆ ನಾವು ಜನರಿಗೆ ಉತ್ತರ ನೀಡುವುದು ಹೇಗೆ ಎಂದು ಶಾಸಕ ಸುನಿಲ್ ನಾಯ್ಕ, ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರ ಮುಂದೆಯೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ  ನಡೆದಿದೆ.
ಸಚಿವ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಭಟ್ಕಳ ಸಹಾಯಕ ಆಯುಕ್ತರ ಕಚೇರಿಯಲ್ಲಿ ಭಟ್ಕಳ ತಾಲೂಕು ಅತಿವೃಷ್ಟಿ ಹಾನಿ ಪರಿಹಾರ ವಿತರಣೆ ಸಂಬಂಧ ನಡೆದ ಸಭೆಯ ನಡುವೆ, ಪರಿಹಾರ ವಿತರಣೆ ಕಾರ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಸುನಿಲ್, ಹಾನಿಯ ಸಮೀಕ್ಷೆ ಸರಿಯಾಗಿ ನಡೆದಿಲ್ಲ. ಸಂತ್ರಸ್ಥರು ನಮ್ಮ ಮನೆ ಬಾಗಿಲಿಗೆ ಬರುತ್ತಿದ್ದು, ಅಧಿಕಾರಿಗಳಿಗೆ ಫೋನಾಯಿಸಿದರೂ ಸರಿಯಾದ ಕ್ರಮ ಜರುಗಿಸಿಲ್ಲ. ಬೇಕಾಬಿಟ್ಟಿಯಾಗಿ ಬಹಳಷ್ಟು ಸಂತ್ರಸ್ಥರು ಸಿ ವರ್ಗಕ್ಕೆ ಸೇರಿಸಿ ಪರಿಹಾರ ನೀಡಲಾಗಿದೆ. ಆ ಪರಿಹಾರ ಹಣದಲ್ಲಿ ಮನೆ ಕಟ್ಟಿಕೊಳ್ಳಲು ಸಾಧ್ಯವೇ, ಸಚಿವರ ಟಿಪ್ಪಣಿಗೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಅಧಿಕಾರಿಗಳು ತಮ್ಮ ಕೈಯಿಂದ ಪರಿಹಾರ ಕೊಟ್ಟಂತೆ ಮಾಡಿದ್ದಾರೆ. ಸಂತ್ರಸ್ಥರಿಗೆ ಸೂಕ್ತ ಪರಿಹಾರ ಕೊಡಲು ಸಾಧ್ಯ ಇಲ್ಲ ಎಂದಾದರೆ ಇಂದೇ ಬರೆದುಕೊಡಬೇಕು, ಎಂದು ಆಕ್ರೋಶ ಹೊರ ಹಾಕಿದರು. ಶಾಸಕರ ಕೋಪಾಟೋಪಕ್ಕೆ ಒಂದು ಕ್ಷಣ ಅವಕ್ಕಾದ ಸಚಿವ ಶ್ರೀನಿವಾಸ, ಶಾಸಕರೇ ಹೇಳಿ ಕರೆಯಿಸಿಕೊಂಡ ಅಧಿಕಾರಿಗಳು ಹೀಗೆ ಮಾಡಿದರೆ ಏನು ಮಾಡುವುದು ಎಂದು ನಕ್ಕರು.
ನಂತರ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, ಹಾನಿಗೆ ಒಳಗಾದ ಬಡವರ ಬಗ್ಗೆ ನಿರ್ಲಕ್ಷ್ಯ ಸಲ್ಲ. 5-10 ಸಾವಿರ ಹೆಚ್ಚು ಪರಿಹಾರ ಸಂತ್ರಸ್ಥರಿಗೆ ಸಿಕ್ಕರೆ ಅದರಿಂದ ಸರಕಾರಕ್ಕೆ ಯಾವುದೇ ಹೊರೆ ಇಲ್ಲ. ಯಾರಿಗೆಲ್ಲ ಅನ್ಯಾಯ ಆಗಿದೆಯೋ ಅಲ್ಲಿ ಮತ್ತೊಮ್ಮೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು. ನಾನು ಇಲ್ಲಿ ಸಂಧಾನಕ್ಕೆ, ವಿನಂತಿ ಮಾಡಿಕೊಳ್ಳಲು ಬಂದಿಲ್ಲ. ಕೆಲಸ ಮಾಡಲು ಸಾಧ್ಯ ಇಲ್ಲ ಎಂದಾದರೆ ಅಧಿಕಾರಿಗಳು ಇಲ್ಲಿಂದ ತೊಲಗಬೇಕು, ಸೆ.30ಕ್ಕೆ ಮತ್ತೊಮ್ಮೆ ನಾನೇ ಸಮೀಕ್ಷೆಯಲ್ಲಿ ಪಾಲ್ಗೊಳ್ಳುತ್ತೇನೆ. ತಪ್ಪು ಕಂಡು ಬಂದಲ್ಲಿ ಸಚಿವ ಹುದ್ದೆಗೆ ಇರುವ ಅಧಿಕಾರವನ್ನು ಬಳಸಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಭಟ್ಕಳ ಸಹಾಯಕ ಆಯುಕ್ತ ಮಮತಾದೇವಿ ಉಪಸ್ಥಿತರಿದ್ದರು. ನಂತರ ಸಚಿವರು ಸಾರ್ವಜನಿಕರಿಂದ ಸ್ವೀಕರಿಸಿದರು.

Read These Next

ಭಟ್ಕಳ ಅಂಜುಮನ್ ಸಂಸ್ಥೆಯ ಹಳೆ ವಿದ್ಯಾರ್ಥಿಗಳ ನೋಂದಣಿ ಅಭಿಯಾನ. ಡಿಸೆಂಬರ್ 28 ಮತ್ತು 29ರಂದು ಶತಮಾನೋತ್ಸವ.

ಭಟ್ಕಳ : ಭಟ್ಕಳದ ಅಂಜುಮನ್ ಹಾಮಿ ಎ ಮುಸ್ಲಿಮೀನ್ ಸಂಸ್ಥೆಯ ಹಳೆ ವಿದ್ಯಾರ್ಥಿಗಳ ನೋಂದಣಿ ಅಭಿಯಾನ ನಡೆಯುತ್ತಿದೆ. ...

ಭಟ್ಕಳದ ಅಂಜುಮನ್ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ; ಸಂವಿಧಾನದತ್ತವಾದ ಕರ್ತವ್ಯಗಳನ್ನು ನಿರ್ವಹಿಸುತ್ತ ಹಕ್ಕುಗಳನ್ನು ಪಡೆಯಬೇಕು

ಅಂಬೇಡ್ಕರ್ ಮೊದಲಾದ ಅನೇಕ ತಜ್ಞರು, ನಾನಾ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ರಚಿಸಿದ ನಮ್ಮ ಸಂವಿಧಾನ ಜಗತ್ತಿನಲ್ಲಿಯೇ ಅತ್ಯಂತ ...

ಹೆದ್ದಾರಿ ಅಗಲೀಕರಣ ಕಾಮಗಾರಿ ಸದ್ಯದಲ್ಲಿಯೇ ಮುಗಿಸುತ್ತೇವೆ, ಭಟ್ಕಳದಲ್ಲಿ ಜಿಲ್ಲಾಧಿಕಾರಿ ಹೇಳಿಕೆ

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಐಆರ್‍ಬಿ ಕಂಪನಿಯ ಅಧಿಕಾರಿಗಳೊಂದಿಗೆ ಸಭೆ ...

ಭಟ್ಕಳ: ಗುರು ಸುಧೀಂದ್ರ ಕಾಲೇಜಿನಲ್ಲಿ ನೂತನ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ 'ಸ್ವಾಗತ ಕಾರ್ಯಕ್ರಮ

ಭಟ್ಕಳ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ 2022-23 ನೇ ಸಾಲಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳಿಂದ 'ಸ್ವಾಗತ ...