ಸಂಜೆ 6 ರಿಂದ ಎಲ್ಲ ಚಟುವಟಿಕೆಗಳು ಬಂದ್ : ಡಿಸಿ 

Source: sonews | By Staff Correspondent | Published on 19th May 2020, 6:31 PM | Coastal News | Don't Miss |

ಕಾರವಾರ: ಕೊವಿಡ್-19 ತಡೆಗೆ ಜಿಲ್ಲೆಯಲ್ಲಿ  ಕೇಂದ್ರ ಹಾಗೂ ರಾಜ್ಯ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು, ಮೇ 31 ರವರೆಗೆ ಸಂಜೆ 6 ರಿಂದ ಬೆಳಗಿನ 7 ಗಂಟೆವರೆಗೆ ಎಲ್ಲ ಚಟುವಟಿಕೆಗಳನ್ನು ನಿಷೇಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಕೆ. ಅವರು ಹೇಳಿದರು. 

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪತ್ರಿಕಾಘೋಷ್ಠಿ ನಡೆಸಿ ಮಾತನಾಡಿ, ಕೋರೋನಾ ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟಲು ಜಿಲ್ಲೆಯಾಧ್ಯಂತ ಮೇ 31 ರವಗೆ ನಿಷೇದಾಜ್ಞೆ ಜಾರಿಗೊಳಿಸಿ ಕೆಲವು ಚಟುವಟಿಕೆಗಳನ್ನು ನಿರ್ಬಂದಿಸಲಾಗಿರುತ್ತದೆ,  ಈ ನಿಷೇದಿತ ಅವದಿಯಲ್ಲಿ ವೈಧ್ಯಕೀಯ ಕಾರಣವನ್ನು ಹೊರತುಪಡಿಸಿ ಇನ್ನಿತರೆ ಯಾವುದೇ ಕಾರಣಕ್ಕಾಗಿ 65 ವರ್ಷ ಮೇಲ್ಪಟ್ಟವರು, ಗರ್ಭಿಣಿ ಮಹಿಳೆಯರು ಬಹು ಅಸ್ವಸ್ಥತೆಯಿಂದ ಬಳಲುತ್ತಿರುವ ವ್ಯಕ್ತಿಗಳು ಮತ್ತು 10 ವರ್ಷ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಿಂದ ಹೊರಗಡೆ ಬರತಕ್ಕದ್ದಲ್ಲ ಎಂದರು.. 

ಸಾರ್ವಜನಿಕರು ಮುಖಗವಸ ದರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದ್ದು. ಮದುವೆ ಸಮಾರಂಭಕ್ಕೆ 50  ಹಾಗೂ ಶವ ಸಂಸ್ಕಾರಕ್ಕೆ 20 ಜನರಿಗೆ ಮಾತ್ರ ಅವಕಾಶವಿರುತ್ತದೆ. ಹೊರ`ರಾಜ್ಯದಿಂದ ಬರುವವರು ಇ-ಪಾಸ್ ಹೊಂದಿರಬೇಕಾಗುತ್ತದೆ, ಕ್ವಾರಂಟೈನ್ ಕೂಡ ಕಡ್ಡಾಯವಾಗಿರುತ್ತದೆ ಅದೇ ರೀತಿ ವಿದೇಶದಿಂದ ಬರುವವರಿಗೆ ಮೊದಲು ಸಾಂಸ್ಥಿಕ ನಂತರ ಹೊಮ್ ಕ್ವಾರಂಟೈನ್ ಕಡ್ಡಾಯವಾಗಿರುತ್ತದೆ ಎಂದರು. 
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಅವರು ಮಾತನಾಡಿ ಮೇ 31 ರವರೆಗೂ ಶಾಲಾ ಕಾಲೇಜು ಪ್ರಾರಂಬಿಸಲಾಗುವದಿಲ್ಲ, ಜನರು ಅನಗತ್ಯವಾಗಿ ಓಡಾಡಬಾರದು, ಪೊಲೀಸ್ ಇಲಾಖೆಯಿಂದ ದ್ರೋಣ ಕ್ಯಾಮೆರಾ ಮೂಲಕ ಸಾರ್ವಜನಿಕ ಚಲನವಲನಗಳನ್ನು ಸೆರೆ ಹಿಡಿಯಲಾಗುತ್ತಿದ್ದು, ನೀಷೇದಾಜ್ಷೆಯನ್ನು ಉಂಲ್ಲಂಗಿಸುವರ ಮೇಲೆ ಕೇಸ್ ಬುಕ್ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಮ್ ರೋಶನ್ ಅವರು ಉಪಸ್ಥಿತರಿದ್ದರು. 

ಜಿಲ್ಲೆಯಲ್ಲಿ 4 ಕೋವಿಡ್-19 ಪತ್ತೆ :  ಮಂಗಳವಾರ ಜಿಲ್ಲೆಯಲ್ಲಿ 4 ಕೋವಿಡ್-19 ಪ್ರಕರಣಗಳು ಪತ್ತೆಯಾಗಿರುತ್ತವೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ದಾಂಡೇಲಿ, ಯಲ್ಲಾಪುರ, ಜೋಯಿಡಾ ಹಾಗೂ ಹೊನ್ನಾವರದಲ್ಲಿ ತಲಾ 1 ರಂತೆ ಕೋರೋನಾ ಸೊಂಕಿತರು ಪತ್ತೆಯಾಗಿದ್ದು ಎಲ್ಲರೂ ಅಂತರಾಜ್ಯ ಪ್ರಯಾಣದ ಹಿನ್ನಲೆ ಹೊಂದಿದವರಾಗಿದ್ದಾರೆಅಲ್ಲದೇ ಎಲ್ಲರೂ ಕ್ವಾರಂಟೈನ್ ದಲ್ಲಿ ಇದ್ದವರಾಗಿರುವದರಿಂದ ಎಲ್ಲ ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಂಡಿದ್ದು, ಜನರು ಆತಂಕ ಪಡಬೇಕಾಗಿಲ್ಲ ಎಂದು ಅವರು ಹೇಳಿದರು. 
       
Read These Next

ಭಟ್ಕಳ: ಗುಡುಗು ಮಿಂಚಿನ ಮಳೆ ಕೈಕೊಡುತ್ತಿರುವ ವಿದ್ಯುತ್ ಎರಡು ದಿನಗಳಿಂದ ರಾತ್ರಿ ನಿದ್ರೆ ಮಾಡದ ಜನತೆ

ಭಟ್ಕಳ: ಕಳೆದ ಎರಡು ದಿನಗಳಿಂದ ಭಟ್ಕಳದಲ್ಲಿ ಗುಡುಗು ಸಹಿತ ಮಳೆಯಾಗುತ್ತಿದ್ದು ಹೆಸ್ಕಾಂ ಇಲಾಖೆ ಪದೇ ಪದೇ ವಿದ್ಯುತ್ ...

ಭಟ್ಕಳ ಅರ್ಬನ್ ಬ್ಯಾಂಕಿನ ನಿವೃತ್ತ ಪ್ರಧಾನ ವ್ಯವಸ್ಥಾಕ ಸುಭಾಷ್ ಶೆಟ್ಟಿಗೆ ಬೀಳ್ಕೊಡುಗೆ

ಭಟ್ಕಳ: ರಾಜ್ಯದಲ್ಲಿನ ಪ್ರತಿಷ್ಟಿತ ಅರ್ಬನ್ ಕೋ-ಅಪರೇಟಿವ್ ಬ್ಯಾಂಕುಗಳಲ್ಲಿ ಒಂದಾದ ಭಟ್ಕಳ ಅರ್ಬನ್ ಬ್ಯಾಂಕಿನಲ್ಲಿ ಸುಧೀರ್ಘ ಸೇವೆ ...

ಬೈಕ್ ಅಪಘಾತ : ಬೈಕ್ ಸವಾರ ಸಾವು

ಮುಂಡಗೋಡ : ಸ್ವಯಂ ಕೃತ ಅಪಘಾತ ಪಡಿಸಿಕೊಂಡು ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಮುಂಡಗೋಡ-ಕಲಘಟಗಿ ರಸ್ತೆಯ ಇಂದಿರಾನಗರ ಪ್ಲಾಟ್ ...