ಕೋವಿಡ್ 19 ಪ್ರಕರಣದಲ್ಲಿ ಜನರನ್ನು ಬೆದರಿಸಬೇಡಿ:ಅಲ್-ಫಲಾಹ್ ಯುವ ಸೇವಾ ಸಂಸ್ಥೆ ವತಿಯಿಂದ ತಾಲ್ಲೂಕು ಆಡಳಿತಕ್ಕೆ ಮನವಿ

Source: so news | Published on 29th July 2020, 12:54 AM | Coastal News | Don't Miss |


ಭಟ್ಕಳ: ಮನೆ ಮನೆಗಳಲ್ಲಿ ಕೋವಿಡ್ 19 ವೈರಸ್ ಹೆಸರಿನಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು ಇದರಿಂದ ಜನರನ್ನು ಹೊರ ಬರುವಂತೆ ಮಾಡಬೇಕು. ಇಲ್ಲವಾದರೆ ಜನರು ತೀವ್ರ ಮಾನಸಿಕ ಒತ್ತಡದಿಂದ ಬಳಲುವಂತಾಗಿದೆ ಎಂದು ಕಾರಗದ್ದೆಯ ಹಿಂದೂ ಕಾಲನಿಯ ನಾಗರೀಕರು ಉಪವಿಭಾಗಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.
ಆರೋಗ್ಯ, ಅಂಗನವಾಡಿ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಆಕ್ಸಿಜನ್ ಲೆವೆಲ್ ಪರೀಕ್ಷಿಸುವ ನೆಪದಲ್ಲಿ ತಪಾಸಣೆ ಮಾಡುತ್ತಿರುವುದು ಜನರಲ್ಲಿ ಇನ್ನಷ್ಟು ಭಯ ನಿರ್ಮಾಣವಾಗುತ್ತಿದೆ. ಕೋವಿಡ್-19 ಪರೀಕ್ಷೆಯ ಕುರಿತು ತಪ್ಪು ಸಂದೇಶಗಳು ಹರಡುತಿದ್ದು, ಇಲ್ಲಿಯೂ ಕೂಡಾ ನಮ್ಮ ಮಜಿರೆಯ ಜನರು ಜನರು ಕುಂದುಕೊರತೆ ಇರುವುದನ್ನು ಕಂಡುಕೊಂಡಿದ್ದಾರೆ. ಈಗಾಗಲೇ ಕೋವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ಇದೆ ಎಂದು ಮನೆಗೆ ಕಳುಹಿಸಿದವರಿಗೆ ಮತ್ತೆ ಪಾಸಿಟಿವ್ ಎಂತಾ ಕರೆ ಮಾಡುವುದು, ಆರಾಮವಾಗಿದ್ದವರಿಗೆ ಸರಕಾರಿ ಆಸ್ಪತ್ರೆಯಿಂದ ದೂರವಾಣಿ ಕರೆ ಬರುತ್ತಿದ್ದು ಅವರು ಒಮ್ಮೆಗೆ ಅಸ್ವಸ್ಥರಾಗುವ ಪ್ರಸಂಗ ಎದುರಾಗುತ್ತಿದೆ. ಈ ರೀತಿಯ ತಪ್ಪು ಮಾಹಿತಿಗಳಿಂದ ನಮ್ಮ ಕಾಲೋನಿಯ ಜನರು ಭಯದ ವಾತಾವರಣದಲ್ಲಿ ದಿನ ಕಳೆಯುವಂತಾಗಿದೆ.
ಈಗ ನಮ್ಮ ಕೇರಿಯ ಜನರಲ್ಲಿರುವ ಭಯದ ವಾತಾವರಣವನ್ನು ನಿರ್ಮೂಲನೆ ಮಾಡಿ ಈ ನಿಟ್ಟಿನಲ್ಲಿ ಅಧಿಕಾರಿಗಳು ಮಾನವೀಯತೆಯಿಂದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೇ ವಿನಹ ತಪ್ಪು ತಪ್ಪು ವರದಿ ನೀಡುವ ಮೆಶಿನ್‍ಗಳನ್ನು ಮನೆ ಬಾಗಿಅಗೆ ಕಳುಹಿಸಿ ಜನರಲ್ಲಿ ಇನ್ನಷ್ಟು ಭಯ ಉಂಟು ಮಾಡುವುದು ಸರಿಯಲ್ಲ. ಇದು ಕೇವಲ ನಮ್ಮ ಕಾರಗದ್ದೆ -ಹಿಂದೂ ಕಾಲನಿಯ ವಿಷಯವಲ್ಲ. ಹಲವು ಮನೆಗಳಲ್ಲಿ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದಿದ್ದರೂ, ಯಾವುದೇ ಸೋಂಕಿನ ಲಕ್ಷಣ ಇಲ್ಲದಿದ್ದರೂ ಸಹ ಅಧಿಕಾರಿಗಳು ಮಾಡುವ ದೂರವಾಣಿ ಕರೆ ಹಾಗೂ ಅವರು ತಿಳಿ ಹೇಳುವ ರೀತಿಯಿಂದಾಗಿ ಜನರಿಗೆ ಕಿರಿಕಿರಿಯಾಗುತ್ತಿದ್ದು ಪ್ರತಿಯೊಂದು ಕುಟುಂಬದ ವಾತಾವರಣ ಕೆಟ್ಟು ಹೋಗಿದೆ. ಸ್ವಲ್ಪ ಮನಸ್ಸು ವೀಕ್ ಇದ್ದವರು ಮಾನಸಿಕವಾಗಿ ಖಿನ್ನತೆಗೊಳಗಾಗುವ ಸಾಧ್ಯತೆ ಕೂಡಾ ಇರುವುದರಿಂದ ಜನರಲ್ಲಿನ ಅಪನಂಬಿಕೆಯನ್ನು ಹೋಗಲಾಡಿಸಲು ಮೊದಲು ಕ್ರಮ ಕೈಗೊಂಡು ನಂತರ ಮನೆ ಮನೆಗೆ ಮೆಶಿನ ಹಿಡಿದು ಹೋಗಬೇಕಾಗಿರುವುದು ಇಂದಿನ ಅಗತ್ಯವಾಗಿದೆ ಎಂದು ಹಿಂದೂ ಕಾಲನಿಯ ನಾಗರೀಕರ ಪರವಾಗಿ ಮುನೀರ ಅಹ್ಮದ್ ಮನವಿ ನೀಡಿ ಆಗ್ರಹಿಸಿದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...