ಕಡವಿನಕಟ್ಟೆ ಶ್ರೀ ದುರ್ಗಾಪರಮೇಶ್ವರಿ ದೇವಿ ಸನ್ನಿಧಾನದಲ್ಲಿ ನಡೆದ ಆಹೋರಾತ್ರಿ ಭಜನೆ ಕಾರ್ಯಕ್ರಮ

Source: S.O. News Service | By MV Bhatkal | Published on 4th December 2022, 7:38 PM | Coastal News |

ಭಟ್ಕಳ : ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕಡವಿನಕಟ್ಟೆ ಶ್ರೀ ದುರ್ಗಾಪರಮೇಶ್ವರಿ ದೇವಿ ಸನ್ನಿಧಾನದಲ್ಲಿ ಮಾರ್ಗಶಿರ ಶುಕ್ಲ ಎಕಾದಶಿಯಂದು ಆಹೋರಾತ್ರಿ ಭಜನೆ (ಸಪ್ತ ಪ್ರಹರ) ಶವಿವಾರ ಬೆಳಿಗ್ಗೆ 6.35ಕ್ಕೆ ದೀಪ ಪ್ರಜ್ವಲನೆಯೊಂದಿಗೆ  ಆರಂಭಗೊಂಡಿತು.  
ಭಜನಾ ಕಾರ್ಯಕ್ರಮವನ್ನು ದೇವಸ್ಥಾನದ ಅರ್ಚಕ ವೃಂದ, ಆಡಳಿತ ವರ್ಗ ಹಾಗೂ ಜಗನ್ಮಾತಾ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ವತಿಯಿಂದ ಪ್ರತಿ ವರ್ಷದಂತೆ ಹಮ್ಮಿಕೊಳ್ಳಲಾಗಿದ್ದು ದೀಪ ಪ್ರಜ್ವಲನೆಯನ್ನು ಅರ್ಚಕ ಶ್ರೀಪಾದ ಭಟ್ಟ  ಪ್ರಾತಃ ಕಾಲ ಚಾಲನೆ ನೀಡಿದರು. ರವಿವಾರ ಬೆಳಿಗ್ಗೆ ಶ್ರೀ ದೇವರ ಪೂಜೆಯ ಪರ್ಯಂತ ಭಜನೆ ನಡೆಯಲಿದೆ ಎಂದು ತಿಳಿಸಲಾಗಿದೆ. 
ಭಜನಾ ಕಾರ್ಯಕ್ರಮದಲ್ಲಿ ಜಗನ್ಮಾತಾ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕಡವಿನಕಟ್ಟೆ, ಶ್ರೀ ವೆಂಕಟೇಶ್ವರ ಭಜನಾ ಮಂಡಳಿ ಆಸರಕೇರಿ, ಶ್ರೀ ವೀರಜಟಕಾ ಭಜನಾ ಮಂಡಳಿ ತೆಂಗಿನಗುಂಡಿ, ಗಾನಶ್ರೀ ಭಜನಾ ಮಂಡಳಿ ಚೌಥನಿ, ಶ್ರೀ ನಾಗಚೌಡೇಶ್ವರಿ ಭಜನಾ ಮಂಡಳಿ ಮಠದಹಿತ್ಲು, ಶ್ರೀ ಸೋಡಿಗದ್ದೆ ಮಹಾಸತಿ ಭಜನಾ ಮಂಡಳಿ ಹಡೀನ, ಸೀತಾ ರಾಮಚಂದ್ರ ಭಜನಾ ಮಂಡಳಿ ಕರಿಕಲ್, ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ ಶಿರೂರು, ಚೆನ್ನಪಟ್ಟಣ ಶ್ರೀ ಹನುಮಂತ ಭಜನಾ ಮಂಡಳಿ ಮುಂತಾದವರು ಭಾಗವಹಿಸಿದ್ದು ಊರ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. 
ಆಹೋರಾತ್ರಿ ಭಜನಾ ಕಾರ್ಯಕ್ರಮದ ಪ್ರಯುಕ್ತ ಅನ್ನಸಂತರ್ಪಣೆ ಕೂಡಾ ಶ್ರೀ ದೇವಸ್ಥಾನದಲ್ಲಿ ನಡೆಯಿತು. ಕಾರ್ಯಕ್ರದಲ್ಲಿ ಭಜನಾ ಮಂಡಳಿಯ ದೀಪಕ ನಾಯ್ಕ, ಶ್ರೀಧರ ನಾಯ್ಕ, ನಾರಾಯಣ ನಾಯ್ಕ, ರಾಜು ನಾಯ್ಕ, ಜಟ್ಟ ನಾಯ್ಕ, ದೇವಸ್ಥಾನದ ಕಾರ್ಯದರ್ಶಿ ಪ್ರಕಾಶ ಭಟ್ಟ, ಅರ್ಚಕ ಶ್ರೀಪಾದ ಭಟ್ಟ, ಪ್ರಶಾಂತ ಭಟ್ಟ, ರಾಮಚಂದ್ರ ಭಟ್ಟ, ಆಡಳಿತ ಮಂಡಳಿಯ ಮಾಜಿ ಸದಸ್ಯ ರಮೇಶ ಆಚಾರ್ಯ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.  

 

Read These Next