ಮುಂಡಗೋಡ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೃಷಿಕೂಲಿಕಾರರ ಸಂಘದ ಒತ್ತಾಯ

Source: S.O. News Service | By I.G. Bhatkali | Published on 26th November 2020, 6:17 PM | Coastal News |

ಮುಂಡಗೋಡ: ತಾಲೂಕ ಕೃಷಿಕೂಲಿಕಾರರ ಸಂಘವು ನವಂಬರ 26 ಗುರುವಾರ ಗ್ರಾಮೀಣ ಕರ್ನಾಟಕವನ್ನು ಬಂದ ಗೆ ಪ್ರತಿಭಟನೆ ಹಮ್ಮಿಕೊಂಡು ಕೇಂದ್ರ ಸರಕಾರ ಹಾಗೂ ಕರ್ನಾಟಕ ಸರಕಾರ ರೈತರವಿರುದ್ದ ಮಾಡಿರುವ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರಧಾನ ಮಂತ್ರಿಗಳಿಗೆ ಹಾಗು ಮುಖ್ಯಮಂತ್ರಿಗಳಿಗೆ ತಹಶೀಲ್ದಾರ ಮುಖಾಂತರ ಮನವಿ ಅರ್ಪಿಸಿದರು.

ಮನವಿಯಲ್ಲಿ ಕೇಂದ್ರ ಸರ್ಕಾರದ ಕೃಷಿ ಉತ್ಪನ್ನ ವಾಣಿಜ್ಯ ಮತ್ತು ಮಾರಾಟ ಕಾಯ್ದೆ  2020, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ-2020 ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ-2020, ವಿದ್ಯುತ್ ಕಾಯ್ದೆ ತಿದ್ದುಪಡಿ-2020, ಹಾಗೂ ರಾಜ್ಯ ಸರ್ಕಾರದ ಭೂ ಸುಧಾರಣ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞ, ಎಪಿಎಂಸಿ ಕಾಯ್ದೆ(ತಿದ್ದುಪಡಿ) ಸುಗ್ರೀವಾಜ್ಞಗಳನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಹಾಗೂ ಡಾ. ಎಂ.ಎಸ್.ಸ್ವಾಮಿನಾಥನ ವರದಿಯನ್ವಯ ಉತ್ಪಾದನಾ ವೆಚ್ಚದ ಮೇಲೆ ಶೇ.50 ರಷ್ಟು ಲಾಭವನ್ನು ಸೇರಿಸಿ ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾಯ್ದ ನೀಡಿ ಎಲ್ಲಾ ರೈತರ ಕೃಷಿಕೂಳಿಕಾರರ ಸಾಲಮನ್ನಾ ಸಾಲನೀಡಿಕೆಗೆ ಸಂಭಂದಿಸಿದ ಋಣಮುಕ್ತ ಕಾಯ್ದೆಗಳನ್ನು ಕೇಂದ್ರಸರಕಾರ ಜಾರಿ ಮಾಡಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು
ಈ ಸಂದರ್ಭದಲ್ಲಿ ಕೃಷಿ ಕೂಲಿಕಾರರ ಸಂಘದ ತಾಲೂಕ ಅಧ್ಯಕ್ಷ ಭೀಮಣ್ಣ ಭೂವಿ, ಹನ್ಮಂತಪ್ಪ ನ್ಯಾಸರ್ಗಿ, ರವಿ ಲಕ್ಕೋಳ್ಳಿ, ಭೂತೇಶ ಚಿತ್ರಗಾರ, ಬಸವರಾಜ ಧಾರವಾಡ, ವಾಣಿ ತೇವರ, ದಸ್ತಗೀರ ಮಳಗಿ, ಕೊಟೇಶ ಕೊಳಗಿ ಸೇರಿದಂತೆ ಮುಂತಾದವರು ಇದ್ದರು.

Read These Next

ಮಂಜುಸುತ ವಿರಚಿತ ಬಸವನಬಾಯಿ ಮಹಾಗಣಪತಿ ಭಕ್ತಿಗೀತೆಗಳ ಕೃತಿ "ಜಲಧಾರೆ" ಲೋಕಾರ್ಪಣೆ.

ಭಟ್ಕಳ : ತಾಲೂಕಿನ ಕುರುಂದೂರು ಗ್ರಾಮದ ಬಸವನಬಾಯಿ ಮಹಾಗಣಪತಿ ಕುರಿತು ಮಂಜುಸುತ ಜಲವಳ್ಳಿ ರಚಿಸಿ ಭಕ್ತಿಗೀತೆಗಳ ಕೃತಿ ಜಲಧಾರೆ ದೇವರ ...