ಲಾಠಿ ಚಾರ್ಜ್ ಖಂಡಿಸಿ ರೈತರಿಂದ ರಸ್ತೆ ತಡೆ; ಹರ್ಯಾಣದಲ್ಲಿ ಮಹಾಪಂಚಾಯತ್

Source: VB News | By I.G. Bhatkali | Published on 30th August 2021, 1:39 PM | National News |

ಚಂಡಿಗಡ: ಹರ್ಯಾಣದಲ್ಲಿ ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿರುವುದನ್ನು ಖಂಡಿಸಿ ಪಂಜಾಬ್‌ನಲ್ಲಿ ರವಿವಾರ ರೈತರು ರಸ್ತೆ ಹಾಗೂ ಹೆದ್ದಾರಿಗಳಲ್ಲಿ ಸಂಚಾರವನ್ನು ತಡೆದಿದ್ದಾರೆ. ಅಲ್ಲದೆ ಹರ್ಯಾಣ ಸರಕಾರದ ಪ್ರತಿಕೃತಿಯನ್ನು ವಹಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಹರ್ಯಾಣದಲ್ಲಿ ರವಿವಾರ ನಡೆದ ರೈತ ಮಹಾಪಂಚಾಯತ್ ನಲ್ಲಿ ಲಾಠಿ ಚಾರ್ಜ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಹರ್ಯಾಣ ಸರಕಾರ ರೈತರ ವಿರುದ್ಧ ದೌರ್ಜನ್ಯ ಎಸಗುತ್ತಿದೆ ಎಂದು ರೈತ ಮುಖಂಡರು ವಾಗ್ದಾಳಿ ನಡೆಸಿದರು.

ರೈತರು ಜಲಂಧರ್-ದಿಲ್ಲಿ ಹೆದ್ದಾರಿಯಲ್ಲಿ ಸಂಚಾರ ತಡೆದಿದ್ದಾರೆ. ಪಂಜಾಬ್‌ನ ಅಮೃತ ಸರದಲ್ಲಿರುವಭಂಡಾರಿಸಿತುವೆಹಾಲು ಯಾನದ ಫಿರೋಝ್ಪುರಕ್ಕೆ ಹೋಗುವ

ರಸ್ತೆಯಲ್ಲಿ ಕೂಡ ಸಂಚಾರಕ್ಕೆ ತಡೆ ಒಡ್ಡಿದ್ದಾರೆ. 12 ಗಂಟೆಯಿಂದ ಆರಂಭವಾಗಿ 3 ಗಂಟೆಗಳ ಕಾಲದ ಈ ರಸ್ತೆತಡೆಯಿಂದ ಸಂಚಾರ ಅಸ್ತವೆಸ್ತಗೊಂಡಿತ್ತು.

ಅಮೃತಸರದಲ್ಲಿ ಪ್ರತಿಭಟನೆ ಸಂದರ್ಭ ಕಿಸಾನ್ ಸಂಘರ್ಷ ಮಜ್ದೂರ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವನ್ ಸಿಂಗ್ ಪಂದೇರ್, ಹರ್ಯಾಣ ಪೊಲೀಸರು ರೈತರ ಮೇಲೆ ನಡೆಸಿದ ಲಾಠಿ ಪ್ರಹಾರವನ್ನು ಖಂಡಿಸಿದರು. ಭಾರತೀಯ ಕಿಸಾನ್ ಒಕ್ಕೂಟ ರಾಜ್ಯದ 56 ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿತು ಹಾಗೂ ಖಟ್ಟರ್ ಸರಕಾರದ ನಾಚಿಕೆಗೇಡಿನ ಕೃತ್ಯವನ್ನು ಖಂಡಿಸಿತು.

ಇದಕ್ಕಿಂತ ಮೊದಲು ಹರ್ಯಾಣದ ನುಹ್ ಜಿಲ್ಲೆಯಲ್ಲಿ ರವಿವಾರ ರೈತರ ಒಕ್ಕೂಟ ಮಹಾ ಪಂಚಾಯತ್ ನಡೆಸಿದೆ. ನುಹ್ ಜಿಲ್ಲೆಯಲ್ಲಿ ಮಹಾ ಪಂಚಾಯತ್ ಅನ್ನು ಈ ಮೊದಲೇ ನಿಗದಿಪಡಿಸಲಾಗಿತ್ತು. ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರ ಚಳವಳಿ 9 ತಿಂಗಳು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಮಹಾಪಂಚಾಯತ್‌ನಲ್ಲಿ ರಾಕೇಶ್ ಟಿಕಾಯತ್, ದರ್ಶನ್ ಪಾಲ್, ಜೋಗಿಂದರ್

ಸಿಂಗ್ ಉಗ್ರಹಾನ್ ಹಾಗೂ ಯೋಗೇಂದರ್‌ ಯಾದವ್ ಅವರಂತಹ ಸಂಯುಕ್ತ ಕಿಸಾನ್ ಮೋರ್ಚಾದ ಉನ್ನತ ನಾಯಕರು ಭಾಗವಹಿಸಿದ್ದರು.

ಈ ನಡುವೆ ಹರ್ಯಾಣದ ಉಪ ಮುಖ್ಯಮ, ದುಷ್ಯಂತ್ ಚೌಟಾಲ ರವಿವಾರ, ಉಪ ವಿಭಾಗೀಯ ದಂಡಾಧಿಕಾರಿ ಅವರ ಕ್ರಮ ಖಂಡನೀಯ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Read These Next

ಹುಬ್ಬಳ್ಳಿ: ಹುಬ್ಬಳ್ಳಿಯ ಚರ್ಚ್‌ಗೆ ನುಗ್ಗಿ ಭಜನೆ ಮಾಡಿದ ಸಂಘಪರಿವಾರದ ಕಾರ್ಯಕರ್ತರು

ಬಲವಂತದಿಂದ ಮತಾಂತರಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿ ರವಿವಾರ ಬೆಳಗ್ಗೆ ಇಲ್ಲಿಯ ಭೈರಿದೇವರ ಕೊಪ್ಪದಲ್ಲಿರುವ ಚರ್ಚೆಂದಕ್ಕೆ ...

ಫೇಸ್ ಕ್ರೀಂನಲ್ಲಿ 24 ಲಕ್ಷ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ ಯತ್ನ: ಏರ್ ಪೋರ್ಟ್ ನಲ್ಲಿ ಆರೋಪಿ ಬಂಧನ

ಹೈದರಾಬಾದ್: ಹೈದರಾಬಾದ್ ಆರ್ ಜಿ ಐ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಫೇಸ್ ಕ್ರೀಮ್ ನಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ...