ಯೂರಿಯಾ ರಸಗೊಬ್ಬರ ಬಳಕೆ ರೈತರಿಗೆ ಸಲಹೆ 

Source: sonews | By Staff Correspondent | Published on 3rd August 2020, 5:15 PM | Coastal News |

ಕಾರವಾರ : ರೈತ ಬಾಂಧವರು ಯೂರಿಯಾ ರಸಗೊಬ್ಬರವನ್ನು ಬಳಕೆ ಮಾಡುವಾಗಬ ಈ ಕೆಳಗಿನ ಕೇಲವು ಅಂಶಗಳನ್ನುನ್ನು ಗಮನಿಸಬೇಕಾಗಿರುತ್ತದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಯೂರಿಯಾ ರಸಗೊಬ್ಬರವನ್ನು ಮಣ್ಣು ಪರೀಕ್ಷಾ ವರದಿಯಲ್ಲಿನ ಶಿಫಾರಸಿತ ಪ್ರಮಾಣದಲ್ಲಿ ಮಾತ್ರ ಬಳಕೆ ಮಾಡುವುದು ಸೂಕ್ತವಾಗಿರುತ್ತದೆ. 

ಉತ್ತಮವಾಗಿ ಮಳೆಯಾಗಿರುವುದರಿಂದ ತೇವಾಂಶವೂ ಹೆಚ್ಚಿದ್ದು ಇದರ ಜೊತೆಗೆ ಅಧಿಕ ಪ್ರಮಾಣದ ಯೂರಿಯಾ ಬಳಕೆ ಮಾಡಿದ್ದಲ್ಲಿ ರೋಗ ಮತ್ತು ಕೀಟ ಬಾಧೆ ಹೆಚ್ಚಾಗುವ ಸಂಭವವಿರುತ್ತದೆ.

ಯೂರಿಯಾ ರಸಗೊಬ್ಬರದ ಮಾರಾಟ ದರವು ಉಳಿದೆಲ್ಲಾ ರಸಗೊಬ್ಬರಗಳಿಗಿಂತ ಕಡಿಮೆ ಇರುವುದರಿಂದ ಯೂರಿಯಾ ಮಾತ್ರ ಬಳಸದೇ ಸಮತೋಲನ ಪೋಷಕಾಂಶಗಳನ್ನು ಬೆಳೆಗಳಿಗೆ ಒದಗಿಸಬೇಕು. 
ಯೂರಿಯಾ ರಸಗೊಬ್ಬರಗಳಲ್ಲಿ ದಪ್ಪ ಮತ್ತು ಸಣ್ಣ ಕಾಳಿನ ರಸಗೊಬ್ಬರಗಳ ಪೋಷಕಾಂಶಗಳಲ್ಲಿ ಯಾವುದೇ ವ್ಯತ್ಯಾಸ ಇಲ್ಲದೇ ಇರುವುದರಿಂದ ಯಾವುದೇ ಗಾತ್ರದ ಯೂರಿಯಾ ರಸಗೊಬ್ಬರವನ್ನು ಬಳಕೆ ಮಾಡಬಹುದಾಗಿರುತ್ತದೆ. 
ಭತ್ತ ಮತ್ತು ಕಬ್ಬು ಬೆಳೆಗಳಿಗೆ ಯೂರಿಯಾ ಬದಲಾಗಿ ಅಮೋನಿಯಂ ಸಲ್ಪೇಟ್ ಗೊಬ್ಬರವನ್ನು ಬಳಸಬಹುದಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕರು ರೈತರಿಗೆ ಸಲಹೆ ನೀಡಿದ್ದಾರೆ.                                                 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...