ಟ್ಯಾಂಕರ್ ನಿಂದ ಆ್ಯಸಿಡ್ ಕ್ಯಾಮಿಕಲ್ ಸೋರಿಕೆ. ಯಲ್ಲಾಪುರ ರಾ. ಹೆದ್ದಾರಿಯಲ್ಲಿ ಆತಂಕ

Source: SO News | By Laxmi Tanaya | Published on 12th October 2020, 8:05 PM | Coastal News | Don't Miss |

ಯಲ್ಲಾಪುರ : ರಾಷ್ಟ್ರೀಯ ಹೆದ್ದಾರಿ 63ರ ಯಲ್ಲಾಪುರದ  ಸಹ್ಯಾದ್ರಿ ಕಳಚೆ ಬ್ಯಾಂಕ್ ಸಮೀಪ  ಟ್ಯಾಂಕರ್ ನಿಂದ ರಾಸಾಯನಿಕ ಸೋರಿಕೆಯಾಗಿದ್ದರಿಂದ ನಾಗರಿಕರು ಆತಂಕಗೊಂಡ ಘಟನೆ ನಡೆದಿದೆ.

ಪಟ್ಟಣದಲ್ಲಿ ಹಾದುಹೋಗಿರುವ ಕಾರವಾರ-ಬಳ್ಳಾರಿ  ಭಾನುವಾರ ತೆರಳುತ್ತಿದ್ದ ಟ್ಯಾಂಕರ್ನಿಂದ ಆ್ಯಸಿಡ್ ಕೆಮಿಕಲ್ ಸೋರಿದ್ದರಿಂದ ರಸ್ತೆಯ ತುಂಬೆಲ್ಲಾ ಕೃತಕ ಹೊಗೆಯ ವಾತಾವರಣವನ್ನು ಸೃಷ್ಟಿಸಿತು. 

ಇದರಿಂದ ಆತಂಕಗೊಂಡ ಸಾರ್ವಜನಿಕರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಎಚ್ಚೆತ್ತ ಚಾಲಕ ಟ್ಯಾಂಕರ್ ಅನ್ನು ರಸ್ತೆ ಬದಿ ನಿಲ್ಲಿಸಿ ತಾಂತ್ರಿಕವಾಗಿ ಆದ ಸಮಸ್ಯೆಯನ್ನು ಬಗೆಹರಿಸಿಕೊಂಡು ಅಲ್ಲಿಂದ ತೆರಳಿದ್ದಾನೆ.

ಯಾವುದೇ ದೊಡ್ಡ ಸಮಸ್ಯೆ ಅಥವಾ ಅವಘಡ ಸಂಭವಿಸದಿರುವುದಕ್ಕೆ ಜನರು ನಿಟ್ಟುಸಿರು ಬಿಡುವಂತಾಯಿತು

ಕಾರವಾರ-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ಯಾಸ್, ಪೆಟ್ರೋಲ್, ಡೀಸೆಲ್, ಆಸಿಡ್ ಸಾಗಿಸುವ ಬಹಳಷ್ಟು ಟ್ಯಾಂಕರ್ ಗಳು ಸಂಚರಿಸುತ್ತಿದೆ. ಈ ಹಿಂದೆ ಜಿಲ್ಲೆಯಲ್ಲಿ ಅಲ್ಲಲ್ಲಿ‌ ಟ್ಯಾಂಕರ್ ಸೋರಿಕೆಯಾಗಿ ಅನಾಹುತ ನಡೆದಿತ್ತು

 

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...