ಸತತ ಪ್ರಯತ್ನದಿಂದ ಸಾಧನೆ ಸಾಧ್ಯ:ಕಲ್ಪನಾ ಸೈಲ್ 

Source: so news | By MV Bhatkal | Published on 29th June 2019, 10:33 PM | Coastal News | Don't Miss |

ಕಾರವಾರ: ಇದು ಸ್ಪರ್ಧಾತ್ಮಕ ಯುಗ. ಮಕ್ಕಳು ಅದಕ್ಕಾಗಿ ವಿದ್ಯಾರ್ಥಿ ಜೀವನದಿಂದಲೇ ಸಿದ್ಧತೆಯನ್ನು ಮಾಡಬೇಕು.ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸಬೇಕಾದರೆ ಅದಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳವುದು ಅವಶ್ಯಕ. ಮಕ್ಕಳು ಕೇವಲ ಪಠ್ಯ ಪುಸ್ತಕವನ್ನು ಮಾತ್ರ ಅಭ್ಯಾಸ ಮಾಡದೇ ಇತರ ಪುಸ್ತಕಗಳನ್ನು ಓದುವುದರ ಮೂಲಕ ಜ್ಞಾನವನ್ನು ಕಟ್ಟಿಕೊಳ್ಳಬೇಕು. ಅಂದಿನ ಅಭ್ಯಾಸವನ್ನು ಅಂದೇ ಮಾಡುವುದನ್ನು ರೂಢಿಸಿಕೊಳ್ಳಬೇಕು. ಸತತ ಪ್ರಯತ್ನದಿಂದ ಹೆಚ್ಚಿನ ಸಾಧನೆ ಮಾಡಲು ಸಾಧ್ಯ. ಶಾಲೆಗಳ ಅಭಿವೃದ್ದಿಗೆ ಸಂಘ ಸಂಸ್ಥೆಗಳ ಸಹಕಾರವೂ ಅಗತ್ಯ. ಮಕ್ಕಳು ಅದರ ಸದುಪಯೋಗವನು ಪಡೆದುಕೊಳ್ಳಬೇಕು ಎಂದು ಕಲ್ಪನಾ ಸತೀಶ ಸೈಲ್ ತಿಳಿಸಿದರು. ಅವರು ಆಝಾದ್ ಯುಥ್ ಕ್ಲಬ್ ಕಾರವಾರ ಹಾಗೂ ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್ ಕಾರವಾರ ರವರು ಸಂಯುಕ್ತವಾಗಿ ಸದಾಶಿವಗಡದ ಸ.ಕಿ.ಪ್ರಾ.ಕ.ಶಾಲೆ ನಾಗಫೊಂಡ ನಂ-1 ರಲ್ಲಿ ಹಮ್ಮಿಕೊಂಡ ಮಕ್ಕಳಿಗೆ ಉಚಿತ ನೋಟ್ ಬುಕ್ ನೀಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಕ್ಕಳಿಗೆ ನೋಟ್ ಬುಕ್‍ಗಳನ್ನು ನೀಡುತ್ತಾ ಮಾತನಾಡಿದರು. 
  ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಎ.ಸಿ.ಎಫ್ ಆದ ಯಶ್ವಂತ ರಾಣೆ ಮಾತನಾಡಿ ಮಕ್ಕಳು ತಮ್ಮ ಬುದ್ದಿ ಮಟ್ಟಕ್ಕೆ ತಕ್ಕಂತೆ ಹಂತ ಹಂತವಾಗಿ ಅಭ್ಯಾಸ ಮಾಡಬೇಕು. ಮಕ್ಕಳ ಶಿಕ್ಷಣ ಗುರುವಿನ ಮೇಲೆ ಅವಲಂಬಿತವಾಗಿರುತ್ತದೆ. ಗುರುವಿನ ಪ್ರಯತ್ನದಿಂದ ಮಕ್ಕಳು ಏನನ್ನು ಬೇಕಾದರೂ ಸಾಧಿಸಲು ಸಾಧ್ಯ ಎಂದು ಹೇಳಿದರು. ರಾಷ್ಟ್ರ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ನಜೀರ್ ಅಹಮದ್ ಯು.ಶೇಖ್ ಮ್ಕಕಳು ಗುಣಮಟ್ಟದ ಶಿಕಣವನ್ನು ಪಡೆದು ಭವಿಷ್ಯವನ್ನು ಉಜ್ವಲ ಗೊಳಿಸಿಕೊಳ್ಳಬೇಕು ಎಂದು ಹೇಳಿದರು.  ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರೂ ಹಾಗೂ ಮಿಮಿಕ್ರಿ ಕಲಾವಿದ ವಸಂತ ಬಾಂದೇಕರ್ ಮಾತನಾಡಿ ಯಾವಾಗಲೂ ಒಂದು ಗುರಿಯನ್ನು ಇಟ್ಟುಕೊಳ್ಳಬೇಕು. ಹಿಂದೆ ಗುರು ಇದ್ದಾಗ ಮುಂದೆ ಗುರಿ ಇರಬೇಕು ಆಗಲೇ ಪಡೆದ ಶಿಕ್ಷಣಕ್ಕೆ ಒಂದು ಬೆಲೆ ಸಿಗುತ್ತದೆ ಎಂದು ಹೇಳಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಇಬ್ರಾಹಿಂ ಕಲ್ಲೂರ್ ಮಾತನಾಡಿ ಶಿಕ್ಷಣವು ಎಲ್ಲರಿಗೂ ಬೇಕು. ಎಷ್ಟೇ ಕಷ್ಟ ಬಂದರೂ ಕಲಿಯುವುದನ್ನು ನಿಲ್ಲಿಸಬಾರದು. ಕಲಿಯುವಲ್ಲಿ ಪ್ರತಿಯೊಬ್ಬರೂ ಆಸಕ್ತಿಯನ್ನು ತೋರಿಸಬೇಕು. ಶಿಕ್ಷಣವನ್ನು ವೃತ್ತಿಗಾಗಿ ಅಲ್ಲ ಜ್ಞಾನಕ್ಕಾಗಿ ಪಡೆಯಬೇಕು. ಎಂದು ಹೇಳಿದರು.
  ಇದೇ ಸಂದರ್ಭದಲ್ಲಿ ಎಲ್ಲಾ ಮಕ್ಕಳಿಗೂ ಉತ್ತಮ ಗುಣಮಟ್ಟದ ನೋಟ್‍ಬುಕ್‍ಗಳನ್ನು ನೀಡಲಾಯಿತು. ಈ ಕಾರ್ಯಕ್ರಮವನ್ನು ಆಝಾದ್ ಯುಥ್ ಕ್ಲಬ್‍ನ ಕಾರ್ಯದರ್ಶಿ ಮೊಹಮ್ಮದ್ ಉಸ್ಮಾನ್ ಶೇಖ್ ಸಂಘಟಿಸಿದ್ದರು. ಪ್ರಾರಂಭದಲ್ಲಿ ಶಿಕ್ಷಕಿ ಫೈರೋಜಾ ಬೇಗಂ ಶೇಖ್ ಪ್ರಾಸ್ತವಿಕ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಕೊನೆಯಲ್ಲಿ ಹಿರಿಯ ಶಿಕ್ಷಕಿ ಕಲ್ಪನಾ ನಾಯ್ಕ ವಂದಿಸಿದರು. ಈ ಸಂದರ್ಭದಲ್ಲಿ ಕ್ಲಬ್‍ನ ಸದಸ್ಯ ಮೊಹಮ್ಮದ್ ಅಸಿಫ್ ಶೇಖ್ ಉಪಸ್ಥಿತರಿದ್ದರು. 

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...