ನಾಲ್ಕು ಕಳ್ಳತನ ಪ್ರಕರಣಗಳಲ್ಲಿ ಪಾಲ್ಗೊಂಡಿದ್ದ ಆರೋಪಿಗಳಿಗೆ 3 ವರ್ಷ ಶಿಕ್ಷೆ

Source: SO News | By Laxmi Tanaya | Published on 3rd December 2022, 10:38 PM | State News |

ಧಾರವಾಡ :  ಧಾರವಾಡ ನಗರದ ವಿವಿದೆಡೆ 4 ಪ್ರಕರಣಗಳಲ್ಲಿ ಬಂಗಾರ ಹಾಗೂ ನಗದು ಕಳ್ಳತನಗಳಲ್ಲಿ ಪಾಲ್ಗೊಂಡಿದ್ದ ಆರೋಪಿಗಳಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ 1 ಸಾವಿರ ರೂ. ದಂಡ ವಿಧಿಸಿ 3ನೇ ಹೆಚ್ಚುವರಿ ಪ್ರಧಾನ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯದ ನ್ಯಾಯಾಧೀಶರಾದ ಮಹೇಶ. ಚಂದ್ರಕಾಂತ   ಶಿಕ್ಷೆ ಪ್ರಕಟಿಸಿದ್ದಾರೆ. 

ಧಾರವಾಡ ನಗರದ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ನವಲೂರಿನ ಎಲ್.ಎಮ್.ಸಿ ಚಾಳಿನಲ್ಲಿ ವಾಸವಾಗಿರುವ  ಮಹೇಶ ರಘು ನಾಯ್ಕ ಇವರ ಮನೆಯ ಕೀಲಿಯನ್ನು ಹಗಲು ಹೊತ್ತಿನಲ್ಲಿ ಕಳ್ಳರು ಮುರಿದು ಒಟ್ಟು 89 ಗ್ರಾಂ ತೂಕದ ಬಂಗಾರದ ಒಡವೆ ಹಾಗೂ 100 ಗ್ರಾಂ ತೂಕದ ಬೆಳ್ಳಿ ಒಡವೆಗಳನ್ನು ಅಂದಾಜು ಕಿಮ್ಮತ್ತು ರೂ.2,24,000/- ರಷ್ಟು ಕಳ್ಳರು ಕಳ್ಳತನ ಮಾಡಿದ್ದರು.

ಧಾರವಾಡ ನಗರದ ವಿದ್ಯಾಗಿರಿ ಪೊಲೀಸ ಠಾಣೆ ವ್ಯಾಪ್ತಿಯಲ್ಲಿನ ಕೆ.ಎಮ್.ಎಫ್. ಹತ್ತಿರ ನಂದಿನಿ ಲೇಔಟನಲ್ಲಿ ವಾಸವಾಗಿರುವ ಸತೀಶ ಸಿದ್ದಪ್ಪ ಹೆಗ್ಗಣವರ ಇವರ ಮನೆಯ ಕೀಲಿಯನ್ನು ಹಗಲು ಹೊತ್ತಿನಲ್ಲಿ ಕಳ್ಳರು ಮುರಿದು ಒಟ್ಟು 20 ಗ್ರಾಂ ತೂಕದ ಬಂಗಾರದ ಒಡವೆ ಹಾಗೂ 130 ಗ್ರಾಂ ತೂಕದ ಬೆಳ್ಳಿ ಒಡವೆಗಳನ್ನು ಹಾಗೂ 20,000/- ರೂ ನಗದು ಹಣವನ್ನು ಕಳ್ಳರು ಕಳ್ಳತನ ಮಾಡಲಾಗಿತ್ತು.

ಧಾರವಾಡ ನಗರದ ವಿದ್ಯಾಗಿರಿ ಪೊಲೀಸ ಠಾಣೆ ವ್ಯಾಪ್ತಿಯಲ್ಲಿನ ಕೆ.ಎಮ್.ಎಫ್. ಬಾಲತ್ರಿಪುರಸುಂದರಿ ದೇವಸ್ಥಾನದ ಹತ್ತಿರ ವಾಸವಾಗಿರುವ ಮಲ್ಲಿಕಾರ್ಜುನಯ್ಯ ಎನ್ ಅಳಗುಂಡಿಮಠ  ಇವರ ಮನೆಯ ಇಂಟರ್ ಲಾಕನ್ನು ರಾತ್ರಿವೇಳೆಯಲ್ಲಿ ಕಳ್ಳರು ಮುರಿದು ಒಟ್ಟು 12 ಗ್ರಾಂ ತೂಕದ ಬಂಗಾರದ ಒಡವೆ ಹಾಗೂ 2,500 ಗ್ರಾಂ ತೂಕದ ಬೆಳ್ಳಿ ಒಡವೆ ರೂ 1,24,000/- ಅಂದಾಜು ಕಿಮ್ಮತ್ತಿನವುಗಳನ್ನು ಹಾಗೂ 3,000/- ರೂ ನಗದು ಹಣವನ್ನು ಕಳ್ಳರು ಕಳ್ಳತನವಾಗಿತ್ತು. 

ಧಾರವಾಡ ನಗರದ  ಶಿವಾಜಿನಗರದಲ್ಲಿ ವಾಸವಾಗಿರುವ  ಸುಭಾಸ ಕೃಷ್ಣಾ ಶಿಂಧೆ  ಇವರ ಮನೆಯ ಕೀಲಿಯನ್ನು ರಾತ್ರಿವೇಳೆಯಲ್ಲಿ ಕಳ್ಳರು ಮುರಿದು ಒಟ್ಟು 142 ಗ್ರಾಂ ತೂಕದ ಬಂಗಾರದ ಒಡವೆ ರೂ 3,52,000/- ಅಂದಾಜು ಕಿಮ್ಮತ್ತಿನವುಗಳನ್ನು ಹಾಗೂ 7,000/- ರೂ ನಗದು ಹಣವನ್ನು ಕಳ್ಳರು ಕಳ್ಳತನ ಮಾಡಿದ್ದರು.
 
ಧಾರವಾಡ ನಗರದ ನವಲೂರಿನ ವಿನಾಯಕನಗರದಲ್ಲಿ ವಾಸವಾಗಿರುವ  ಭೀಮಸಿ ಎಮ್ ಬೆಂಗೇರಿ  ಇವರ ಮನೆಯ ಕೀಲಿ ಹಾಕಿದ ಚಿಲಕದ ಕೊಂಡಿಯನ್ನು ರಾತ್ರಿವೇಳೆಯಲ್ಲಿ ಕಳ್ಳರು ಮುರಿದು ಒಟ್ಟು 50 ಗ್ರಾಂ ತೂಕದ ಬಂಗಾರದ ಒಡವೆ ಹಾಗೂ 65,000/- ರೂ ನಗದು ಹಣವನ್ನು ಕಳ್ಳರು ಕಳ್ಳತನ ಮಾಡಿದ್ದು ಇತ್ತು. 

ಧಾರವಾಡ ವಿದ್ಯಾಗಿರಿ ಪೊಲೀಸರು ಒಬ್ಬ ವೆಂಕಟೇಶರೆಡ್ಡಿ ಅಲಿಯಾಸ ಇಮ್ತಿಯಾಜ ಶೇಖ ತಂದೆ ನಾಗರಾಜನ್, ವನ್ನಾರ. ಅಲಿಯಾಸ ಅಜಮೀರ ಶೇಖ ವಾಸ: ಹೊಸೂರ, ಶಾಂತಿನಗರ, ತಮಿಳುನಾಡು ರಾಜ್ಯ ಹಾಲಿವಾಸ: ಜನ್ನತನಗರ ಧಾರವಾಡ ಎಂಬ ವ್ಯಕ್ತಿಯನ್ನು ಬಂಧಿಸಿ ಸಮಗ್ರ ತನಿಖೆ ಮಾಡಿದಾಗ ಈ ಮೇಲ್ಕಾಣಿಸಿದ ಪ್ರದೇಶಗಳ ಮನೆಗಳ ಕೀಲಿಯನ್ನು ಮುರಿದು ಬಂಗಾರ, ಬೆಳ್ಳಿಯ ಒಡವೆಗಳನ್ನು ಹಾಗೂ ನಗದು ಹಣವನ್ನು ಕಳ್ಳತನ ಮಾಡಿರುವುದು ತಿಳಿದು ಬಂದಿರುತ್ತದೆ. ಅಲ್ಲದೇ ಸದರಿ ಆರೋಪಿ ತಾನು ಕಳ್ಳತನ ಮಾಡಿದ ಮಾಲನ್ನು ಶಬ್ಬೀರ ರೆಹಮಾನಸಾಬ ಶೇಖ, ಜನ್ನತನಗರ ಧಾರವಾಡ ಇತನಿಗೆ ಮಾರಾಟ ಮಾಡಲು ಕೊಡುತ್ತಿರುವ ಸಂಗತಿ ತಿಳಿದು ಬಂದಿರುತ್ತದೆ.
ಪೊಲೀಸರು ಸದರಿ ಇಬ್ಬರು ಆರೋಪಿತರ ವಶದಿಂದ ಕಳ್ಳತನವಾದ ಒಡವೆಗಳನ್ನು ಜಪ್ತಿ ಮಾಡಿದ್ದು, ಮೇಲ್ಕಾಣಿಸಿದ ಪ್ರಕರಣಗಳ ಪಿರ್ಯಾದಿದಾರರು ಅವುಗಳನ್ನು ಗುರುತಿಸಿರುತ್ತಾರೆ.

ಧಾರವಾಡ 3ನೇ ಹೆಚ್ಚುವರಿ ಪ್ರಧಾನ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯದ ನ್ಯಾಯಾಧೀಶರಾದ ಮಹೇಶ. ಚಂದ್ರಕಾಂತ ಇವರು 1) ಸಿ.ಸಿ ನಂ.1088/2019 2) ಸಿ.ಸಿ ನಂ.2537/2018 3) ಸಿ.ಸಿ ನಂ.3376/2018 4) ಸಿಸಿ ನಂ.1125/2019.
ಈ ಪ್ರಕರಣಗಳಲ್ಲಿ 1ನೇ ಆರೋಪಿಗೆ ಭಾರತೀಯ ದಂಡ ಸಂಹಿತೆ ಕಲಂ 454 ರಡಿ ಅಪರಾಧಕ್ಕಾಗಿ ಈ ಮೇಲ್ಕಾಣಿಸಿದ 4 ಪ್ರಕರಣಗಳಲ್ಲಿ ತಲಾ 3 ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 1,000/- ರೂ ರಷ್ಟು ದಂಡ ಶಿಕ್ಷೆ ವಿಧಿಸಲಾಗಿದೆ ಸದರಿ ದಂಡವನ್ನು ತುಂಬಲು ತಪ್ಪಿದಲ್ಲಿ 3 ತಿಂಗಳ ಕಾಲ ಸಾದಾ ಜೈಲು ಶಿಕ್ಷೆ ವಿಧಿಸಲಾಗಿದೆ. ಅದೇ ರೀತಿ, ಭಾರತೀಯ ದಂಡ ಸಂಹಿತೆ ಕಲಂ 380 ರಡಿ ಅಪರಾಧಕ್ಕಾಗಿ ಈ ಮೇಲ್ಕಾಣಿಸಿದ 4 ಪ್ರಕರಣಗಳಲ್ಲಿ ತಲಾ 3 ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 1,000/- ರೂ ರಷ್ಟು ದಂಡ ಶಿಕ್ಷೆ ವಿಧಿಸಲಾಗಿದೆ ಸದರಿ ದಂಡವನ್ನು ತುಂಬಲು ತಪ್ಪಿದಲ್ಲಿ 3 ತಿಂಗಳ ಕಾಲ ಸಾದಾ ಜೈಲು ಶಿಕ್ಷೆ ವಿಧಿಸಲಾಗಿದೆ. ಹಾಗೂ 02 ನೇ ಆರೋಪಿಗೆ ಭಾರತೀಯ ದಂಡ‌ ಸಂಹಿತೆ ಕಲಂ 411 ರಡಿ ಅಪರಾಧಕ್ಕಾಗಿ ಈ ಮೇಲ್ಕಾಣಿಸಿದ 4 ಪ್ರಕರಣಗಳಲ್ಲಿ ತಲಾ 3,000/- ರೂ ರಷ್ಟು ದಂಡ ಶಿಕ್ಷೆ ವಿಧಿಸಲಾಗಿದೆ ಸದರಿ ದಂಡವನ್ನು ತುಂಬಲು ತಪ್ಪಿದಲ್ಲಿ 2 ತಿಂಗಳ ಕಾಲ ಸಾದಾ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತಾರೆ. ಉಳಿದ ಇನ್ನೊಂದು ಪ್ರಕರಣ ಸಂಖ್ಯೆ 5) ಸಿಸಿ 3142/2018 ರಲ್ಲಿ 1ನೇ ಆರೋಪಿಗೆ ಭಾರತೀಯ ದಂಡ ಸಂಹಿತೆ ಕಲಂ 454 ರಡಿ ಅಪರಾಧಕ್ಕಾಗಿ ಈ ಮೇಲ್ಕಾಣಿಸಿದ 4 ಪ್ರಕರಣಗಳಲ್ಲಿ ತಲಾ 3 ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 1,000/- ರೂ ರಷ್ಟು ದಂಡ ಶಿಕ್ಷೆ ವಿಧಿಸಲಾಗಿದೆ  ಸದರಿ ದಂಡವನ್ನು ತುಂಬಲು ತಪ್ಪಿದಲ್ಲಿ 3 ತಿಂಗಳ ಕಾಲ ಸಾದಾ ಜೈಲು ಶಿಕ್ಷೆ ವಿಧಿಸಲಾಗಿದೆ. ಅದೇರೀತಿ ಭಾರತೀಯ ದಂಡ ಸಂಹಿತೆ ಕಲಂ 380 ರಡಿ ಅಪರಾಧಕ್ಕಾಗಿ ಈ ಮೇಲ್ಕಾಣಿಸಿದ 4 ಪ್ರಕರಣಗಳಲ್ಲಿ ತಲಾ 3 ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 1,000/- ರೂ ರಷ್ಟು ದಂಡ ಶಿಕ್ಷೆ ವಿಧಿಸಿದೆ ಸದರಿ ದಂಡವನ್ನು ತುಂಬಲು ತಪ್ಪಿದಲ್ಲಿ 3 ತಿಂಗಳ ಕಾಲ ಸಾದಾ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

 ಸದರಿ ಪ್ರಕರಣಗಳಲ್ಲಿ ಬಿ.ಎಮ್.ಅಂಗಡಿ. ಎ.ಎಸ್.ಐ ವಿದ್ಯಾಗಿರಿ ಪೊಲೀಸ ಠಾಣೆ ಧಾರವಾಡ,   ಎಸ್.ಕೆ.ಯಾವಗಲ್ಲಮಠ. ಎ.ಎಸ್.ಐ ವಿದ್ಯಾಗಿರಿ ಪೊಲೀಸ ಠಾಣೆ ಧಾರವಾಡ,  ಎನ್.ಕೆ.ಗುರ್ಲಹೋಸೂರ ಪಿ.ಎಸ್.ಐ ವಿದ್ಯಾಗಿರಿ ಪೊಲೀಸ ಠಾಣೆ ಧಾರವಾಡ ರವರು ಆರೋಪಿತರ ವಿರುದ್ದ ದೂರಗಳನ್ನು ಸ್ವೀಕರಿಸಿ ಪ್ರಕರಣಗಳನ್ನು ದಾಖಲಿಸಿಕೊಂಡು ಭಾಗಶ: ತನಿಖೆ ಮಾಡಿರುತ್ತಾರೆ. ಹಾಗೂ ಎಮ್.ವಿ.ಹೊಸಪೇಟಿ, ಪೊಲೀಸ ಇನ್ಸಪೆಕ್ಟರ್, ವಿದ್ಯಾಗಿರಿ ಪೊಲೀಸ ಠಾಣೆ ಧಾರವಾಡ ರವರು ಆರೋಪಿತರ ವಿರುದ್ದ ಮುಂದಿನ ತನಿಖೆಯನ್ನು ಕೈಗೊಂಡು ದೋಷಾರೋಪಣ ಪಟ್ಟಿಗಳನ್ನು  ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.

ಸರ್ಕಾರದ ಪರವಾಗಿ ಹಿರಿಯ ಸಹಾಯ ಸರ್ಕಾರಿ ವಕೀಲ (ಅಭಿಯೋಜಕರು) ರಾದ   ಅನಿಲಕುಮಾರ ಆರ್ ತೊರವಿ ಇವರು ವಕಾಲತ್ತು ಮಂಡಿಸಿದ್ದರು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...