ಚಲಿಸುತ್ತಿದ್ದ ಓಮಿನಿ‌ ಕಾರಿಗೆ ಆಕಸ್ಮಿಕ ಬೆಂಕಿ. ಸಂಪೂರ್ಣ ಭಸ್ಮ

Source: SO News | By Laxmi Tanaya | Published on 4th March 2021, 9:38 PM | Coastal News |

ಕಾರವಾರ : ತಾಲೂಕಿನ ಬೋರೆ ಸಮೀಪ ಬೇಕರಿ ಸಾಮಾನು ಸಾಗಿಸುತ್ತಿದ್ದ ಓಮ್ನಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.

ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು,  ಪರಿಣಾಮ ವಾಹನ ಸುಟ್ಟುಭಸ್ಮವಾಗಿದೆ.  ಅದೃಷ್ಟವಶಾತ್  ಚಾಲಕ ಹಾಗೂ ಓರ್ವ ಪ್ರಯಾಣಿಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 ಓಮಿನಿ ವಾಹನ ಕಾರವಾರದಿಂದ ಮಲ್ಲಾಪುರ ಕಡೆ ತೆರಳುತ್ತಿದ್ದಾಗ ಆಕಸ್ಮಿಕ ಬೆಂಕಿ ತಗುಲಿದೆ.   ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು  ಬೆಂಕಿ ನಂದಿಸಿದ್ದಾರೆ. ಆದರೆ ವಾಹನ ಸುಟ್ಟು ಕರಕಲಾಗಿದೆ. ಮಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read These Next