ಅಬುದಾಬಿ : ಸಾಹೆಬಾನ್ ವತಿಯಿಂದ ಬೃಹತ್ ಇಫ್ತಾರ್ ಸಂಗಮ

Source: yahya abbas | By Arshad Koppa | Published on 8th June 2017, 6:44 AM | Gulf News | Special Report |

ಅಬುದಾಬಿ : ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ನೆಲೆಸಿರುವ ಉರ್ದು ಭಾಷೆ ಮಾತನಾಡುವ ಹನಫಿ ಮುಸಲ್ಮಾನರು ತಮ್ಮ ನಾಡು ನುಡಿಗೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ. ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಅನಿವಾಸಿಗಳಾಗಿ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಸಾಹೆಬಾನ್ ಸಮುದಾಯದ ಹಲವು ಮಂದಿಯ ಗಡಣ ತಮ್ಮ ನಾಡು ನುಡಿ ಸಂಸ್ಕೃತಿ ಯ ಸೊಗಡನ್ನು ಕಾಪಿಟ್ಟುಕೊಂಡು '' ಸಾಹೆಬಾನ್ ಬಿಸಿನೆಸ್ ಕಮ್ಯೂನಿಟಿ '' ಎಂಬ ಹೆಸರಿನಲ್ಲಿ ಸತತ 14 ವರ್ಷಗಳಿಂದ ಅಬು ಧಾಬಿಯಲ್ಲಿ ಕಾರ್ಯಾಚರಿಸುತ್ತಿದ್ದು, ಹತ್ತು ಹಲವು ಸಾಮಾಜಿಕ ಮತ್ತು ಜನಪರ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.

 ಪ್ರತಿವರ್ಷದಂತೆ ಈ ಬಾರಿಯೂ ಅಬುದಾಬಿ  ಸೋಶಿಯಲ್ ಸೆಂಟರ್ ನಲ್ಲಿ ಅದ್ದೂರಿಯಾಗಿ ಇಫ್ತಾರ್ ಸಂಗಮ ನಡೆಸಿ ಕೊಡುವ ಮೂಲಕ ಅನಿವಾಸಿ ಕರಾವಳಿಯ ಕನ್ನಡಿಗರ ನಡುವಣ ಸುಭದ್ರ ಸಂಬಂಧಕ್ಕೆ ಭದ್ರ ಬುನಾದಿ ಹಾಕಿ ಕೊಟ್ಟಿದೆ. ಈ ಬಾರಿಯೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾರಿ ಮತ್ತು ಸಾಹೆಬಾನ್ ಸಮುದಾಯದ ಕನ್ನಡಿಗರು ಪುಣ್ಯ ಮಾಸವಾದ ರಮಳಾನ್ ನ ಇಫ್ತಾರ್ ಸಂಗಮದಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.

ಕಾರ್ಯಕ್ರಮವು ಕಿರಾತ್ ಪಠಣದೊಂದಿಗೆ ಆರಂಭ ಗೊಂಡಿತು. ಸಾಹೆಬಾನ್ ಕಮ್ಯೂನಿಟಿ ಯ ಅಧ್ಯಕ್ಷರಾದ ಸುಹೈಲ್ ಕುದ್ರೋಳಿ ಮಾತನಾಡಿ '' ಸಾಹೇಬನ್ ಸಮುದಾಯ ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸಿರುವ ಶ್ರೇಯೋಭಿವೃದ್ಧಿ ಗಮನಾರ್ಹ, ನಾವು ಸಾದಿಸಬೇಕಾಗಿದ್ದು ಇನ್ನೂ ಇದೆ, ಪ್ರಸಕ್ತ ಬೇಡಿಕೆಗಳಿಗೆ ಅನುಸಾರವಾಗಿ ಪದವಿ, ಇಂಜಿನಿಯರಿಂಗ್ ಗಳಿಗೆ ಮಾತ್ರಾ ನಾವು ಕಲಿಕೆ ಸೀಮಿತ ಗೊಳಿಸಬಾರದು, ಒಂದು ಹೆಜ್ಜೆ ಮುಂದಿಟ್ಟು ಉನ್ನತ ಶಿಕ್ಷಣ, ಪಿಹೆಚ್ ಡಿ ಗಳಿಸುವುದು ನಮ್ಮ ಗುರಿಯಾಗಬೇಕು ಎಂದ ಒತ್ತಿ ಹೇಳಿದ ಅವರು,    ಶಿಕ್ಷಣ, ಸಬಲೀಕರಣ ಮತ್ತು ಆರ್ಥಿಕ ಅಭಿವೃದ್ಧಿಯ ಬಗ್ಗೆ ಸಮುದಾಯ ಹೆಚ್ಚು ಗಮನ ಹರಿಸಬೇಕೆಂದು ಕರೆ ನೀಡಿದರು.

ಟೀಮ್ ಸಾಹೆಬಾನ್ ನ ಅಬು ಧಾಬಿ ಘಟಕದ ಎಲ್ಲಾ ಸದಸ್ಯರು ಈ ಸಂಗಮದ ಅಭೂತಪೂರ್ವ ಯಶಸ್ಸಿಗೆ ನಾಂದಿಹಾಡಿದರು. ಫೈಝಾನ್ ಖತೀಬ್ , ಅಲ್ತಾಫ್ ಖತೀಬ್, ಮೊಹಮ್ಮದ್ ಆಸಿಫ್, ಅಜ್ಮಲ್ ಜಮಾಲ್, ಮೊಹಮ್ಮದ್ ಅಕ್ರಮ್, ಮೊಹಮ್ಮದ್ ಅನ್ಸಾರ್ , ರಫೀಕ್ ಅಹ್ಮದ್, ಅಲ್ತಾಫ್ ಎಂ ಎಸ್ ಮತ್ತು ಸಲೀಮ್ ಬಾಜಿ . ಯುನುಸ್ ಶೇಖ್, ವಾಜಿದ್ ನೌಮನ್, ಸಲೀಂ ಶೇಖ್, ಮೊಹಮ್ಮದ್ ಜಬಿರ್, ಶೇಖ್ ಸಲೀಮ್, ಮೊಹಮ್ಮದ್ ಕಾಶಿಮ್, ಮೊಹಮ್ಮದ್ ಸಾಜಿದ್, ಮೊಹಮ್ಮದ್ ಹನೀಫ್, ನಯೀಮ್ ಬಾಜಿ, ಹನೀಫ್ ಮೊಹಮ್ಮದ್ ಮತ್ತು ತಾಜ್ಮುಲ್ ಈ ಕಾರ್ಯಕ್ರಮವನ್ನು ಸ್ಮರಣೀಯವಾಗಿ ಮಾಡಿದರು

ಬ್ಯಾರೀಸ್ ವೆಲ್ಫೇರ್ ಫೋರಮ್ ನ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ, ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮದುಮೂಲೆ ಇಫ್ತಾರ್ ಸಂಗಮದಲ್ಲಿ ಉಪಸ್ಥಿತರಿದ್ದರು.

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...