ಅಬುಧಾಬಿ: ಡಿ.ಕೆ.ಎಸ್.ಸಿ ಮುಸಫ್ಫಾ ಯುನಿಟ್ ಗೆ ಅಧ್ಯಕ್ಷರಾಗಿ ಸಾದೀಕ್ ಉಚ್ಚಿಲ ಪುನರಾಯ್ಕೆ

Source: yusuf arlapadavu | By Arshad Koppa | Published on 15th March 2017, 11:15 PM | Gulf News |

ಅಬುದಾಬಿ, ಮಾ ೧೫  : ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ಇದರ ಅಧೀನ ಘಟಕವಾದ ಅಬುದಾಬಿ ಮುಸಫ್ಫಾ  ಇದರ   ವಾರ್ಷಿಕ ಮಹಾ ಸಭೆಯು ರಾಷ್ಟೀಯ ಸಮಿತಿ ಗೌರವಾಧ್ಯಕ್ಷರಾದ ಸಯ್ಯದ್ ತ್ವಾಹ ಭಾಪಕಿ ತಂಘಳ್ ರವರ ನೇತೃತ್ವದಲ್ಲಿ  ಯುನಿಟ್ ಅಧ್ಯಕ್ಷರಾದ ಸಾದೀಕ್ ಉಚ್ಚಿಲ  ರವರ ಅಧ್ಯಕ್ಷತೆಯಲ್ಲಿ  ಹಾಜಿ.ಮುಹಮ್ಮದಾಲಿ ವಳವೂರು ರವರ ನಿವಾಸದಲ್ಲಿ ನಡೆಯಿತು. ಸಭೆಯು ಸಯ್ಯದ್ ತ್ವಾಹ ಭಾಪಕಿ ತಂಘಳ್ ರವರ ದುವಾ ದೊಂದಿಗೆ ಪ್ರಾಂಭಗೊಂಡು ಡಿ.ಕೆ.ಎಸ್.ಸಿ ಕನ್ವಿನರ್ ಅಶ್ರಫ್ ಕೊಳ್ನಾಡು ರವರ ಸ್ವಾಗತದೊಂದಿಗೆ  ಪ್ರಾಂಭಗೊಂಡು ಸಾದಿಕ್ ಉಚ್ಚಿಲ ರವರು ವರದಿ ಲೆಕ್ಕಪತ್ರವನ್ನು ಮಂಡಿಸಿದರು. ರಾಷ್ಟೀಯ ಸಮಿತಿಯ ಉಸ್ತುವಾರಿಯಾಗಿ ಆಗಮಿಸಿದ ಹಾಜಿ.ಅಬ್ದುಲ್ಲಾ ಬೀಜಾಡಿ  ರವರು  ಚುನಾವಣಾದಿಕಾರಿಯಾಗಿ 2017-18 ರ ಸಾಲಿನ ನೂತನ ಸಮಿತಿಯನ್ನು ಪುನರ್ರಚಿಸಲಾಯಿತು.  ರಾಷ್ಟೀಯ ಸಮಿತಿ ಉಪಾಧ್ಯಕ್ಷರಾದ ಹಾಜಿ. ಹಸನಬ್ಬ ಕೊಲ್ನಾಡು , ಸಂಘಟನಾ ಕಾರ್ಯದರ್ಶಿ ಎಸ್.ಯೂಸುಫ್ ಅರ್ಲಪದವು, ಇ.ಕೆ.ಇಬ್ರಾಹಿಂ ಕಿನ್ಯ ,  ಅಬ್ದುಲ್ ರಜಾಕ್ ಮುಟ್ಟಿಕಲ್ ಹಾಗೂ ನಜೀರ್ ಕಣ್ಣಂಗಾರ್ ರವರು ಉಪಸ್ಥಿತರಿದ್ದರು.  ಕೊನೆಯಲ್ಲಿ ನೂತನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಹೀಮ್ ಸುಳ್ಯ ಎಲ್ಲರ ಸಹಕಾರವನ್ನು ಕೋರುತ್ತಾ ಧನ್ಯವಾದ ಸಮರ್ಪಿಸಿದರು.

2017 - 18 ರ ಸಾಲಿನ ನೂತನ ಸಮಿತಿ

 

ಗೌರವಾಧ್ಯಕ್ಷರು : ಹಾಜಿ.ಮುಹಮ್ಮದಾಲಿ ವಳವೂರು

ಅಧ್ಯಕ್ಷರು :  ಸಾದೀಕ್ ಉಚ್ಚಿಲ

ಉಪಾಧ್ಯಕ್ಷರು : ಇಸ್ಮಾಯಿಲ್ ಹಳೆಯಂಗಡಿ

 

 

ಪ್ರಧಾನ ಕಾರ್ಯದರ್ಶಿ : ಮುಹಮ್ಮದ್ ರಹೀಮ್ ಸುಳ್ಯ

ಜೊತೆ ಕಾರ್ಯದರ್ಶಿ : ಅಲ್ತಾಫ್ ಮೂಳೂರು

 

ಕೋಶಾಧಿಕಾರಿ : ಸಲೀಂ ಬದನಡ್ಕ

ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು. 

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ಪ್ರವಾದಿ ಕುರಿತು ವಿವಾದಾತ್ಮಕ ಹೇಳಿಕೆಗೆ ಮುಂದುವರಿದ ಆಕ್ರೋಶ; 17 ದೇಶಗಳ ಖಂಡನೆ; ಗಲ್ಫ್ ಸಹಕಾರ ಮಂಡಳಿಯಿಂದಲೂ ಆಕ್ಷೇಪ

ತಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಒತ್ತಿ ಹೇಳುವ ಮೂಲಕ ವಿವಿಧ ದೇಶಗಳಲ್ಲಿ ಭುಗಿಲೆದ್ದಿರುವ ಕ್ರೋಧದ ಅಲೆಯನ್ನು ...