ಭಟ್ಕಳ; ಅರಣ್ಯ ಇಲಾಖೆಯಿಂದ ಮಂಗನ ಕಾಯಿಲೆ ಮತ್ತು ಕಾಡ್ಗಿಚ್ಚು ಕುರಿತ ಬೀದಿ ನಾಟಕ ಪ್ರದರ್ಶನ

Source: sonews | By Staff Correspondent | Published on 13th February 2020, 11:15 PM | Coastal News | Don't Miss |

ಭಟ್ಕಳ: ಕರ್ನಾಟಕ ಅರಣ್ಯ ಇಲಾಖೆಯ ಹೊನ್ನಾವರ ಅರಣ್ಯ ವಿಭಾಗದ ವತಿಯಿಂದ ಇಲ್ಲಿನ ಶಮ್ಸುದ್ದೀನ್ ವೃತ್ತದ ಬಳಿ ಮಂಗನ ಕಾಯಿಲೆ ಹಾಗೂ ಕಾಡ್ಗಿಚ್ಚು ಕುರಿತಂತೆ ಅರಿವು ಮೂಡಿಸಲು ಬೀದಿ ನಾಟಕ ಪ್ರದರ್ಶನ ಮಾಡಲಾಯಿತು. 

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಲಯ ಅರಣ್ಯಾಧಿಕಾರಿ ಸವಿತಾ ದೇವಾಡಿಗ, ಮಂಗನ ಕಾಯಿಲೆ ಬೇಸಿಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು ಕಾಡಿನಲ್ಲಿ ಮಂಗಗಳ ಸಾವು ಸಂಭವಿಸಿ ಈ ರೋಗ ಹರುಡತ್ತದೆ. ಕಾಡಿನಲ್ಲಿ ಕಟ್ಟಿಗೆ ದರಕು ತರಲು ಹೋಗುವ ಗ್ರಾಮೀಣ ಪ್ರದೇಶದ ಜನರು ತಮ್ಮ ಸಂಪೂರ್ಣ ಮೈಮುಚ್ಚುವ ಉಡುಪು ಧರಿಸಬೇಕು. ಮತ್ತು ಅದಕ್ಕೆ ವಿಶೇಷ ತೈಲವಿದ್ದು ಅದನ್ನು ದೇಹಕ್ಕೆ ಲೇಪಿಸಿಕೊಳ್ಳಬೇಕು ಕಾಡಿನಲ್ಲಿ ಯಾವುದೇ ಮಂಗ ಸಾವನ್ನಪ್ಪಿದ್ದು ಕಂಡು ಬಂದಲ್ಲಿ ಅದನ್ನು ದೂರಕ್ಕೆ ತೆಗೆದುಕೊಂಡು ಹೋಗಿ ಊಳಬೇಕೆಂದು ಸಲಹೆ ನೀಡಿದರು. 
ಈ ಸಂದರ್ಭದಲ್ಲಿ ಅರಣ್ಯ ಸಿಬ್ದಂದಿಗಳು ಹಾಜರಿದ್ದರು.

Read These Next

ಜೆಡಿಎಸ್ ಮತ ಬುಟ್ಟಿಗೆ ’ಕೈ’ ಹಾಕಿದ ಅಂಜಲಿ ತಾಯಿ ; ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮ ಗೌಡರ ಮನೆಗೆ ಭೇಟಿ

ಅಂಕೋಲಾ: ಉ.ಕ ಲೋಕಸಭಾ ಕ್ಷೇತ್ರದ ಅಂಕೋಲಾ, ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಹಾಲಕ್ಕಿ ಒಕ್ಕಲಿಗ ಸಮುದಾಯದ ಮತಗಳು ಹೆಚ್ಚಿನ ...

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಓರ್ವ ಮಹಿಳೆ ಮೃತ್ಯು, ಇಬ್ಬರ ಸ್ಥಿತಿ ಗಂಭೀರ!

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರ ...