ಮಂಗಳೂರಿನ ಲೇಡಿಹಿಲ್ ಮಾರ್ಗದಲ್ಲಿ ಸಂಚರಿಸುವ ಬಸ್ ಗೆ ನಾರಾಯಣಗುರು ಹೆಸರಿನ ಸ್ಟಿಕ್ಕರ್.

Source: SO News | By Laxmi Tanaya | Published on 23rd September 2020, 8:43 PM | Coastal News | Don't Miss |

ಮಂಗಳೂರು : ಮುಲ್ಕಿ ಸುಂದರರಾಮ ಶೆಟ್ಟಿ ಹೆಸರಿನ ರಸ್ತೆ ನಾಮಕರಣದ ವಿವಾದ ಮುಗಿಯುತ್ತಲೇ ಮತ್ತೊಂದು ಚರ್ಚೆ ಆರಂಭವಾಗಿದೆ.

  ನಾರಾಯಣ ಗುರು ಹೆಸರನ್ನು ಮಂಗಳೂರಿನ ವೃತ್ತವೊಂದಕ್ಕೆ ಇಡಬೇಕೆಂಬ ಒತ್ತಾಯ ಕೇಳಿಬಂದಿದೆ. ಲೇಡಿಹಿಲ್ ವೃತ್ತಕ್ಕೆ ನಾರಾಯಣ ಗುರು ಹೆಸರು ಇಡಬೇಕೆಂದು ಬಿರುವೆರ್ ಕುಡ್ಲ ಸಂಘಟನೆಯಿಂದ ಮಹಾನಗರ ಪಾಲಿಕೆಗೆ ಮನವಿಯನ್ನು ನೀಡಲಾಗಿದೆ.
ಖಾಸಗಿ ಬಸ್ ಗಳ ಮುಂದೆ ನಾರಾಯಣ ಗುರು ಸರ್ಕಲ್ ಎಂದು ಸ್ಟಿಕ್ಕರ್ ಅಂಟಿಸಿದ್ದಾರೆ. ಲೇಡಿಹಿಲ್ ಮಾರ್ಗವಾಗಿ ತೆರಳುವ ಬಸ್ ಗಳ ಮುಂಭಾಗದಲ್ಲಿ ಈ ಸ್ಟಿಕ್ಕರ್ ಕಾಣಿಸುತ್ತಿದೆ.‌

 ಬಿರುವೆರ್ ಕುಡ್ಲ ಸಂಘಟನೆಯ ವತಿಯಿಂದ ಹೀಗೊಂದು ಅಭಿಯಾನ ನಡೆಯುತ್ತಿದೆಯಾ ಎಂಬ  ಅನುಮಾನ ಕೇಳಿಬರುತ್ತಿದೆ.‌ ಈ ವಿಚಾರ ಪ್ರಸ್ತಾಪ ಆಗುತ್ತಲೇ ಲೇಡಿಹಿಲ್ ವೃತ್ತದ ಬಳಿ ಇರುವ ಶಾಲಾಡಳಿತ ಮಂಡಳಿಗಳು ವಿರೋಧ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿರುವುದು  ಹೊಸ ವಿವಾದಕ್ಕೆ ಕಾರಣವಾಗಿದೆ. 

ಆದರೆ ಬಸ್ಸಿನ ಮುಂದೆ ಸ್ಟಿಕ್ಕರ್ ಅಂಟಿಸಿದ ಮಾತ್ರಕ್ಕೆ ಅಲ್ಲಿನ ಹೆಸರು ಬದಲಾವಣೆ ಆಗಲ್ಲ..! ಅಂಥ ಒತ್ತಾಯಕ್ಕೆ ಮತ್ತೊಂದಷ್ಟು ಒತ್ತಡ ಬೀಳುವುದಂತೂ ಖಚಿತ. 

 ವಿವಾದದ ಬಗ್ಗೆ ಬಿಲ್ಲವ ಸಂಘಗಳ ಅಭಿಪ್ರಾಯ ಕೇಳಿದರೆ 'ನಾವೇನು ಅಂತಹ ಒತ್ತಾಯ ಮಾಡಿಲ್ಲ' ಎನ್ನುತ್ತಾರೆ. ನಾರಾಯಣ ಗುರು ಶಾಂತಿಪ್ರಿಯರು. ಎಲ್ಲರೂ ಒಂದೇ ಎಂದು ಸಾರಿದವರು. ಅಂಥ ವ್ಯಕ್ತಿಯ ಹೆಸರಲ್ಲಿ ವಿವಾದ ಎಬ್ಬಿಸಬಾರದು. ಈ ವಿವಾದಗಳ ಹಿಂದೆ ರಾಜಕೀಯ ಇದೆ. ಗುರುಗಳ ಹೆಸರಿಡುವ ವಿಚಾರವನ್ನು ಶಾಂತಿಯುತವಾಗಿಯೆ ಮುಗಿಸಬೇಕು. ಗುರುಗಳ ಹೆಸರಿಡುವುದಿದ್ದರೆ ಲೇಡಿಹಿಲ್ ವೃತ್ತವೇ ಆಗಬೇಕಂತಿಲ್ಲ. ಹೆಸರು ಇಲ್ಲದ ವೃತ್ತಗಳಿಗೆ ಇಟ್ಟು ಸೌಹಾರ್ದದಿಂದ ಕೆಲಸ ಮುಗಿಸಬಹುದು. ಹಂಪನಕಟ್ಟೆಯ ವೃತ್ತಕ್ಕೆ ಯಾವುದೇ ಹೆಸರಿಲ್ಲ. ಮಂಗಳೂರಿನಲ್ಲಿ ಪ್ರಮುಖ ವೃತ್ತವೂ ಹೌದು. ಹಾಗೆ ನೋಡಿದರೆ ಹಂಪನಕಟ್ಟೆ ಸಿಗ್ನಲ್ ವೃತ್ತಕ್ಕೆ ನಾರಾಯಣ ಗುರುಗಳ ಹೆಸರು ಇಡಬಹುದು ಎಂದು ಬಿಲ್ಲವ ಸಂಘಟನೆಯ ಪ್ರಮುಖರೊಬ್ವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Read These Next

ದೇರಳಕಟ್ಟೆ ಬಳಿ ಖಾಸಗಿ ಬಸ್ ಮೇಲೆ ಕಲ್ಲು ತೂರಾಟ. ಘಟನೆ ನಡೆದು ಗಂಟೆಯೊಳಗೆ ಪತ್ತೆ ಹಚ್ಚಿದ ಪೊಲೀಸರು.

ಮಂಗಳೂರು : ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ದೇರಳಕಟ್ಟೆ ಬಳಿ ಬಸ್ಸಿಗೆ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದ ಆರೋಪಿಗಳನ್ನು ಘಟನೆ ...

ಸುಳ್ಳಿನ ಆಧಾರದಲ್ಲಿ ಅಸ್ತಿತ್ವಕ್ಕೆ ಬಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಜನರ ವಿಶ್ವಾಸ ಕಳೆದುಕೊಳ್ಳುತ್ತಿವೆ-ಎಚ್.ಕೆ.ಪಾಟೀಲ್

ಭಟ್ಕಳ : ದುಷ್ಟಾಲೋಚನೆಯೊಂದಿಗೆ ಅಧಿಕಾರಿಕ್ಕೆ ಬಂದಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ವಿಶ್ವಾಸ ಕಳೆದುಕೊಂಡಿವೆ ಎಂದು ...

ಮನೆಯ ಚಾವಣಿ ಕುಸಿದು ಬಾಲಕ ಮೃತ

ಶ್ರೀನಿವಾಸಪುರ: ಇಲ್ಲಿಗೆ ಸಮೀಪದ ಪಾತಮುತ್ತಕಪಲ್ಲಿ ಗ್ರಾಮದಲ್ಲಿ ಮಳೆಯಿಂದಾಗಿ ಮನೆಯ ಚಾವಣಿ ಕುಸಿದು ಬಿದ್ದು ಬಾಲಕನೊಬ್ಬ ...

ಕಾರವಾರ: ಪಶ್ಚಿಮ ಪದವಿಧರ ಕ್ಷೇತ್ರದಲ್ಲಿ ಕುಬೇರಪ್ಪನವರಿಗೆ ಮತ ನೀಡಿ. ಎಚ್ ಕೆ ಪಾಟೀಲ್ ಮತಯಾಚನೆ.

‌ಅಕ್ಟೋಬರ್ 28ರಂದು ನಡೆಯುವ ಪಶ್ಚಿಮ ಪದವಿಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ಕಾಂಗ್ರೆಸ್ ಮುಖಂಡ, ...

ಬಿಕಾಂ ಫೈನಲ್ ಪರೀಕ್ಷೆಯಲ್ಲಿ ಅಂಜುಮನ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ ಕಾಲೇಜು ಸಾಧನೆ.

ಭಟ್ಕಳ : ಅಂಜುಮನ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ ಕಾಲೇಜಿನ ಬಿ.ಕಾಂ ಅಂತಿಮ ವಿದ್ಯಾರ್ಥಿಗಳು ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡುವ ...