ಕರಾವಳಿಯಲ್ಲಿ ಕಡಲ ಘರ್ಜನೆ. ಕಾರವಾರದಲ್ಲಿ ದಡಕ್ಕೆ ಬಿದ್ದ ಮಂಗಳೂರು ಬೋಟುಗಳು.

Source: SO News | By Laxmi Tanaya | Published on 21st September 2020, 11:12 AM | Coastal News |

ಕಾರವಾರ : ಕರಾವಳಿಯಲ್ಲಿ ಕಡಲು ಪ್ರಕ್ಷುಬ್ದಗೊಂಡಿದೆ. ಕಾರವಾರ ಸಮೀಪ ಸಮುದ್ರದಲ್ಲಿ ನಿಲ್ಲಿಸಿದ್ದ  ಯಾಂತ್ರಿಕ ದೋಣಿಗಳೆರಡು ದಡಕ್ಕೆ ಬಂದು ಬಿದ್ದಿವೆ. ರಾತ್ರಿ ಸಮಯದಲ್ಲಿ  ಮಳೆಯೊಂದಿಗೆ ಗಾಳಿಯ ವೇಗ ಹೆಚ್ಚಾಗಿದ್ದರಿಂದ  ಬೋಟುಗಳ ಲಂಗರು ತುಂಡಾಗಿದ್ದರಿಂದ ಈ ಅವಘಢ ಸಂಭವಿಸಿದೆ.

ಎರಡು ಬೋಟುಗಳು ಮಂಗಳೂರು ಕಡೆಯದ್ದಾಗಿದೆ.  ಹವಮಾನ ವೈಪರೀತ್ಯದಿಂದಾಗಿ ನೂರಾರು ಯಾಂತ್ರಿಕ ದೋಣಿಗಳು ಕಾರವಾರ ಬಂದರಿನಲ್ಲಿ ಬಂದು ಲಂಗರು ಹಾಕಿ‌ ನಿಂತಿವೆ. ಬೋಟುಗಳನ್ನ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.

ಕಾರವಾರದ ರವೀಂದ್ರನಾಥ್  ಟ್ಯಾಗೋರ್ ಕಡಲತೀರದಲ್ಲಿ ನಿಲ್ಲಿಸಿಟ್ಟಿದ್ದ ಉದಯ ಬಾನಾವಳಿಕರ ಎಂಬುವವರಿಗೆ ಸೇರಿದ ನಾಡ ದೋಣಿ ಕೂಡ ಕಡಲ ಅಲೆಗೆ  ಚೂರಾಗಿದ್ದು ಬೋಟ್ ಮಾಲೀಕರು ತೊಂದರೆ ಅನುಭವಿಸಿದ್ದಾರೆ.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...