ಅಂಜುಮನ್ ನೂರ್ ಮೊಂಟೆಸ್ಸರಿ ಚಿಣ್ಣರಿಂದ ಪೊಲೀಸ್ ಠಾಣೆ ದರ್ಶನ

Source: sonews | By Staff Correspondent | Published on 26th February 2020, 6:18 PM | Coastal News | Don't Miss |

•    ಸಿಹಿ ನೀಡಿ ಸ್ವಾಗತಿಸಿದ ಪೊಲೀಸರು

ಭಟ್ಕಳ: ಇಲ್ಲಿನ ಪ್ರತಿಷ್ಠಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ನೂರ್ ಮೊಂಟೆಸ್ಸರಿಯ ಚಿಣ್ಣರಿಂದ  ಭಟ್ಕಳ ಪೊಲೀಸ್ ಠಾಣೆ ದರ್ಶನ ಕಾರ್ಯಕ್ರಮ ಯಶಸ್ವಯಾಗಿ ಜರಗಿತು.

ಪೊಲೀಸರು ಮಕ್ಕಳ ಸ್ನೇಹಿಯಾಗಲು ಇಂತಹ ಕಾರ್ಯಕ್ರಮಗಳು ಅಗತ್ಯವನ್ನು ಮನಗೊಂಡ ಶಾಲಾ ಆಡಳಿತ ಮಂಡಳಿಯು ವಿದ್ಯಾರ್ಥಿಗಳಿಗೆ ಪೊಲೀಸ್‍ಠಾಣೆಯ ದರ್ಶನ ಕಾರ್ಯಕ್ರಮ ಆಯೋಜಿಸಿತ್ತು ಎಂದು ತಿಳಿದುಬಂದಿದೆ. ಪೊಲೀಸ್ ಎಂದರೆ ಭಯಪಡುವ ಕಾಲವೊಂದಿತ್ತು. ಆದರೆ ಇಂದು ಜನಸ್ನೇಹಿಯಾಗಿರುವ ಪೊಲೀಸ್ ಇಲಾಖೆ ಎಲ್ಲರೊಂದಿಗೆ ಉತ್ತಮ ಸಂಬಂಧವನ್ನಿಟ್ಟುಕೊಂಡು ಭಯರಹಿತ ವಾತವರಣ ಸೃಷ್ಟಿಸುತ್ತಿರುವುದು ಶ್ಲಾಘನೀಯ ಎಂಬ ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ. 

ನಗರಠಾಣೆಯ ಪಿ.ಎಸ್.ಐ ಹನುಮಂತ ಕುಡಗುಂಟಿ, ಸಿಪಿಐ ಎಂ.ಎಸ್.ಪ್ರಕಾಶ್ ಪೊಲೀಸ್ ಸಿಬಂಧಿಗಳು ವಿದ್ಯಾರ್ಥಿಗಳನ್ನು ಸಿಹಿ ನೀಡುವುದರ ಮೂಲಕ ಸ್ವಾಗತಿಸಿ ಅವರೊಂದಿಗೆ ಆತ್ಮೀಯವಾಗಿ ಮಾತನಾಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಪಿ.ಎಸ್.ಐ ಹನುಮಂತಪ್ಪ ಕುಡಗುಂಟಿ ಪೆÇಲೀಸರು ಎಂದರೆ ಯಾರು ಭಯಪಡಬೇಕಾದ ಅವಶ್ಯಕತೆ ಇಲ್ಲ. ನಾವೆಲ್ಲ ನಿಮ್ಮ ಗೆಳೆಯರಿದ್ದ ಹಾಗೆ ಯಾರು ತಪ್ಪು ಕೆಲಸ ಮಾಡುತ್ತಾರೋ ಅವರಿಗೆ ನಾವು ಶಿಕ್ಷೆ ನೀಡುತ್ತೇವೆ. ನಾವೆಲ್ಲ ದಿನದ 24 ಗಂಟೆಗಳ ಕಾಲ ನಿಮ್ಮ ಸೇವೆ ಮಾಡಲಿದ್ದೇವೆ. ಭಟ್ಕಳ ತಾಲೂಕಿನ ಕೆಲವು ತಿಂಗಳಿನಿಂದ ಶರಾವತಿ ಪಡೆ ಎಂಬ ಹೊಸ ತಂಡ ನೇಮಕವಾಗಿದ್ದು ಸಮಾಜದ ಸುತ್ತಮುತ್ತ ಲೈಂಗಿಕ ದೌರ್ಜನ್ಯ ಹಾಗೂ ಇತರೆ ಸಮಸ್ಯೆ ಬಗ್ಗೆ ನಮ್ಮ ತಂಡಕ್ಕೆ ಕರೆ ಮಾಡಿ ತಿಳಿಸಬಹುದು ಎಂದು ಹೇಳಿದರು. ಸಿ.ಪಿ.ಐ ಎಂ.ಎಸ್ ಪ್ರಕಾಶ ಮಾತನಾಡಿ ಚಿಕ್ಕ ಮಕ್ಕಳಿಗೆ ಉತ್ತಮ ಮಾರ್ಗದರ್ಶನದ ಅವಶ್ಯಕತೆ ಇದ್ದು. ಕಾನೂನಿನ ಪಾಠವನ್ನು ಚಿಕ್ಕ ಮಕ್ಕಳಿಗೆ ಈಗಿನಿಂದಲೇ ಹೇಳಿಕೊಟ್ಟರೆ ದೊಡ್ಡವರಾದ ಮೇಲೆ ಕಾನೂನಿನ ಪರಿಜ್ಞಾನ ಮೂಡುತ್ತದೆ. ಚಿಕ್ಕ ಮಕ್ಕಳನ್ನು ನಾವೆಲ್ಲರು ಪ್ರೀತಿಸಬೇಕು ಅವರೇ ಮುಂದಿನ ದೇಶದ ಭವಿಷ್ಯ ವನ್ನು ರೂಪಿಸುತ್ತಾರೆ ಎಂದು ಹೇಳಿದರು.

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...