ನ್ಯಾನೋ ಕಾರೊಂದು ಡಿಕ್ಕಿ:ಸೈಕಲ್ ಸವಾರ ಸಾವು

Source: so news | By MV Bhatkal | Published on 22nd January 2023, 11:47 PM | Coastal News | Don't Miss |

ಭಟ್ಕಳ: ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಹೆರಾಡಿ ಕ್ರಾಸ್ ಬಳಿಯಲ್ಲಿ ಶನಿವಾರ ರಾತ್ರಿ ತನ್ನ ಸೈಕಲ್‌ನಿಂದ ಇಳಿದು ಸೈಕಲ್ ದೂಡಿಕೊಂಡು ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವನಿಗೆ ಟಾಟಾ ನ್ಯಾನೋ ಕಾರೊಂದು ಡಿಕ್ಕಿ ಹೊಡೆದಿದ್ದು ರವಿವಾರ ಬೆಳಗಿನ ಜಾವ ಸೈಕಲ್ ಸವಾರ ಮೃತ ಪಟ್ಟ ಕುರಿತು ಆತನ ಮಗ ಮುರ್ಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದಾನೆ. 
ಮೃತನನ್ನು ಸುಬ್ರಾಯ ತಂದೆ ತಿಮ್ಮಪ್ಪ ನಾಯ್ಕ (೬೭) ಎಂದು ಗುರುತಿಸಲಾಗಿದೆ. ಈತನು ಬಸ್ತಿಯಲ್ಲಿ ಜ್ಯೂಸ್ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದು ರಾತ್ರಿ ತನ್ನ ಸೈಕಲ್ ಮೇಲೆ ಮನೆಗೆ ಬರುತ್ತಿರುವಾಗ ರಾಷ್ಟಿçÃಯ ಹೆದ್ದಾರಿಯಲ್ಲಿ ತನ್ನ ಸೈಕಲ್‌ನಿಂದ ಕೆಳಕ್ಕೆ ಇಳಿದು ಸೈಕಲ್ ದೂಡಿಕೊಂಡು ರಸ್ತೆ ದಾಟುತ್ತಿರುವ ವೇಳೆಯಲ್ಲಿ ಅತಿವೇಗದಿಂದ ಬಂದ ನ್ಯಾನೋ ಕಾರಿನ ಚಾಲಕ ಮುರ್ಡೇಶ್ವರ ನ್ಯಾಶನಲ್ ಕಾಲೋನಿಯ ಅಮ್ಜದ್ ಅಲಿ ದೊಣ್ಣ ಇವರು ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸುಬ್ರಾಯ ನಾಯ್ಕ ಇವರು ಕೆಳಕ್ಕೆ ಬಿದ್ದು ತಳೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದು ಅಲ್ಲಿ ಚಿಕಿತ್ಸೆಯಿಂದ ಗುಣ ಪಡಿಸುವ ಭರವಸೆ ದೊರೆಯದ್ದರಿಂದ ಪುನಃ ಭಟ್ಕಳ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ್ದು ರವಿವಾರ ಬೆಳಗಿನ ಜಾವ ಮೃತರಾಗಿದ್ದಾರೆ ಎಂದು ಆತನ ಪುತ್ರ ರಾಘವೇಂದ್ರ ನಾಯ್ಕ ದೂರಿನಲ್ಲಿ ತಿಳಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...