ಸಮುದ್ರದಾಳದಲ್ಲಿ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡ ವೈದ್ಯ ದಂಪತಿಗಳು

Source: so news | Published on 8th December 2019, 12:10 AM | Coastal News | Don't Miss |


ಭಟ್ಕಳ: ಮದುವೆ ಎನ್ನುವುದು ಜೀವನದ ಪ್ರಮುಖ ಘಟನೆಯಲ್ಲಿ ಒಂದು.ಇಂತಹ ಘಟನೆಗಳನ್ನು ಅದೇ ದಿನದಂದು ದಂಪತಿಗಳು ನೆನಪಿಸಿಕೊಳ್ಳುವ ಅಥವಾ ವಾರ್ಷಿಕೋತ್ಸವ ಆಚರಿಸಿಕೊಂಡು ಪರಸ್ಪರ ಪ್ರೀತಿ ಬದ್ಧತೆಯನ್ನು ತೋರ್ಪಡಿಸುವ ಈ ವಾರ್ಷಿಕೋತ್ಸವ ಮರೆಯಲಾಗದಂತೆ ನೆನಪಿಟ್ಟುಕೊಳ್ಳಲು ದಂಪತಿಗಳು ವಿಶೇಷ ಉಡುಗರೆ ನೀಡೋದು ಸಾಮಾನ್ಯ. ಆದರೆ ಮುರಡೇಶ್ವರದಲ್ಲಿ ಜೋಡಿಯೊಂದು ಸಮುದ್ರದಾಳದಲ್ಲಿ 35 ನಿಮಿಷ ಪರಸ್ಪರ ಹೂವುಗಳನ್ನು ನೀಡಿ ಆಳದಲ್ಲಿ ಮೀನುಗಳ ಜೊತೆ ಈಜಾಡಿ ಸಂಭ್ರಮಿಸಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸಿಕೊಂಡರು.
ಇದಕ್ಕೆ ವೇದಿಕೆ ಒದಗಿಸಿದ್ದು ಮುರಡೇಶ್ವರದ ನೇತ್ರಾಣಿ ಅಡ್ವೇಂಚರ್ ಸಾಹಸ ಸಂಸ್ಥೆ. ಮುರಡೇಶ್ವರದ ಆರ್.ಎನ್ .ಎಸ್ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಕೊಲ್ಲಾಪುರ ಮೂಲದ ಡಾ.ಚೇತನ್ ,ದೀಪಿಕ.ಎಸ್ ರವರು ತಮ್ಮ 5ನೇ  ವರ್ಷದ ವಿವಾಹ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸಿಕೊಂಡ ಜೋಡಿ.
ಮದುವೆಯಾದ ದಿನದ ಸವಿ ನೆನಪನ್ನು ಮರೆಯದ ರೀತಿ ನೆನಪಿರಬೇಕು ಎಂಬ ಹಂಬಲ ಹೊಂದಿದ್ದ ಈ ಜೋಡಿ ಆಯ್ಕೆ ಮಾಡಿಕೊಂಡಿದ್ದು ಸಮುದ್ರಾಳವನ್ನು.ಆದರೇ ಸಮುದ್ರದಾಳದಲ್ಲಿ ಇಳಿಯಲು ತಾಂತ್ರಿಕ ಪರಿಣಿತಿ ಬೇಕು.ಇವೆಲ್ಲದರ ನಡುವೆ ಹೆಚ್ಚು ಕಮ್ಮಿಯಾದರೂ ಪ್ರಾಣ ಪಕ್ಷಿ ಹಾರಿಹೋಗುವ ಭಯವೂ ಉಂಟು.

ಅವರ ಆಸೆಯನ್ನು ಈಡೇರಿಸಲು ಮುರಡೇಶ್ವರದ ಅರಬ್ಬಿ ಸಮುದ್ರದ ಮಧ್ಯಭಾಗದಲ್ಲಿರುವ ನೇತ್ರಾಣಿ ದ್ವೀಪಕ್ಕೆ ಕರೆದೊಯ್ದು ಆಕ್ಸಿಜನ್ ತುಂಬಿದ ಸಿಲೆಂಡರ್ ಅಳವಡಿಸಿ ಸಮುದ್ರದಾಳಕ್ಕೆ ಕರೆದೊಯ್ದರು. ಇಲ್ಲಿ ಒಬ್ಬರಿಗೊಬ್ಬರು ಹೂ ಗುಚ್ಚ ನೀಡುವ ಮೂಲಕ ಸಂತಸದ ಮದುರ ಕ್ಷಣದ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ 35 ನಿಮಿಷಕ್ಕೂ ಹೆಚ್ಚುಕಾಲ ಜೋಡಿಯಾಗಿ ಸಮುದ್ರದಾಳದಲ್ಲಿ ಮೀನುಗಳ ಜೊತೆ ಈಜಾಡಿ ಜೋಡಿ ಮೀನಿನಂತೆ ಸಂಚರಿಸಿ ಸಂತಸ ಪಟ್ಟು ಮಧುರ ಗಳಿಗೆಯನ್ನು ಜೀವನದ ಮಧುರ ಕ್ಷಣವಾಗಿ ಕಳೆದು ಸಂಭ್ರಮಿಸಿದರು.

Read These Next

ಕಾರವಾರ: ಕುಡಿಯುವ ನೀರು ಸಮಸ್ಯೆ : ಟ್ಯಾಂಕರ್ ಮೂಲಕ ತಕ್ಷಣ ನೀರು ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬರುತ್ತಿರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ತಕ್ಷಣವೇ ಸಾರ್ವಜನಿಕರಿಗೆ ಕುಡಿಯುವ ನೀರು ...

ಕಾರವಾರ: ಮತದಾನ ಜಾಗೃತಿಯ ಬೆಳಕು ಎಲ್ಲೆಡೆ ಪ್ರಕಾಶಿಸಲಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಬೆಳಕು ಕತ್ತಲನ್ನು ದೂರ ಮಾಡಿ, ಎಲ್ಲೆಡೆ ಬೆಳಕು ಮೂಡಿಸುತ್ತದೆ. ಅದೇ ರೀತಿ ಮತದಾನದ ಕುರಿತ ಜಾಗೃತಿಯ ಬೆಳಕನ್ನು ಎಲ್ಲಾ ಮತದಾರರ ...

ಜೆಡಿಎಸ್ ಮತ ಬುಟ್ಟಿಗೆ ’ಕೈ’ ಹಾಕಿದ ಅಂಜಲಿ ತಾಯಿ ; ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮ ಗೌಡರ ಮನೆಗೆ ಭೇಟಿ

ಅಂಕೋಲಾ: ಉ.ಕ ಲೋಕಸಭಾ ಕ್ಷೇತ್ರದ ಅಂಕೋಲಾ, ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಹಾಲಕ್ಕಿ ಒಕ್ಕಲಿಗ ಸಮುದಾಯದ ಮತಗಳು ಹೆಚ್ಚಿನ ...

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಓರ್ವ ಮಹಿಳೆ ಮೃತ್ಯು, ಇಬ್ಬರ ಸ್ಥಿತಿ ಗಂಭೀರ!

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರ ...