ಸಿದ್ದಾಪುರದಲ್ಲಿ ಹೊಳೆಗೆ ಧುಮುಕಿದ ಕಾರು. ಮೂವರ ಜಲಸಮಾಧಿ.

Source: SO News | By Laxmi Tanaya | Published on 15th October 2020, 6:23 PM | State News | Coastal News |

ಸಿದ್ದಾಪುರ: ಶಿರಸಿ ಮತ್ತು ಸಿದ್ದಾಪುರ ಮಧ್ಯೆದ ಹೆಗ್ಗರಣಿ ಬಳಿ ಹೊಳೆಗೆ ಕಾರು ಧುಮುಕಿ ಬಿದ್ದ ಪರಿಣಾಮ ಮೂವರು ಜಲಸಮಾಧಿಯಾದ ಘಟನೆ ನಡೆದಿದೆ. 

ಹುಬ್ಬಳ್ಳಿ ಮೂಲದ ನಿಶ್ಚಲ್, ಅಕ್ಷತಾ  ಹಾಗೂ ಸುಷ್ಮಾ ಮೃತ ದುರ್ದೈವಿಗಳು. ಇನ್ನಿಬ್ಬರು ನಾಪತ್ತೆಯಾಗಿರುವ ಬಗ್ಗೆ  ಶಂಕಿಸಲಾಗಿದೆ. 

ಉಂಚಳ್ಳಿ ಫಾಲ್ಸ್ ನೋಡಿ ಬುಧವಾರ ಸಂಜೆ  ವೇಳೆ ವಾಪಸ್ಸಾಗುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ಸೇತುವೆಯ ಬದಿಯಿಂದ ಹೊಳೆಗೆ ಧುಮುಕಿದೆ. 

ಗುರುವಾರ ಮಧ್ಯಾಹ್ನ ಸ್ಥಳೀಯರು ಗಮನಿಸಿ ಸಿದ್ದಾಪುರ ಪೊಲೀಸರಿಗೆ ತಿಳಿಸಿದ್ದಾರೆ. ಸದ್ಯ ಸ್ಥಳೀಯರ ಸಹಕಾರದಿಂದ ಕಾರು ಮೇಲಕ್ಕೆತ್ತಲಾಗಿದ್ದು, ಕಾರಿನಲ್ಲಿ ಮೂವರ ಮೃತದೇಹ ದೊರೆತಿದೆ.

 ಸ್ಥಳಕ್ಕೆ ಶಿರಸಿ ಡಿವೈಎಸ್ಪಿ ಜಿ.ಟಿ.ನಾಯಕ ಸೇರಿದಂತೆ ಸ್ಥಳೀಯ ಪೊಲೀಸರು ಭೇಟಿದ್ದು ಘಟನೆ ಸಂಬಂಧ ಮಾಹಿತಿ ಕಲೆ ಹಾಕುತ್ತಿದ್ದಾರೆ.

 

Read These Next

ಅರಣ್ಯ ಭೂಮಿ ಖಾಸಗಿಯವರಿಗೆ ನೀಡಲು ಮುಂದಾಗಿರುವುದು ಅಕ್ಷಮ್ಯ ಅಪರಾಧ : ಸಿಎಂ ಬಿಎಸ್‌ವೈಗೆ ಸಿದ್ದರಾಮಯ್ಯ ಪತ್ರ

ಅರಣ್ಯ ಭೂಮಿ ಖಾಸಗಿಯವರಿಗೆ ನೀಡಲು ಮುಂದಾಗಿರುವುದು ಅಕ್ಷಮ್ಯ ಅಪರಾಧ : ಸಿಎಂ ಬಿಎಸ್‌ವೈಗೆ ಸಿದ್ದರಾಮಯ್ಯ ಪತ್ರ

ಭಟ್ಕಳ ರಾ. ಹೆದ್ದಾರಿ ಪಕ್ಕದಲ್ಲಿ ಸಂಚಾರಕ್ಕೆ ತೊಂದರೆ. ಅಮ್ಯೂಸಮೆಂಟ್ ಫಾರ್ಕ್ ಬೇಡ: ಪುರಸಭಾ ಸದಸ್ಯ ಮನವಿ.

ಭಟ್ಕಳ : ರಾಷ್ಟ್ರೀಯ ಹೆದ್ದಾರಿ 66 ಜೈನ್ ‌ಲಾಡ್ಜ್ ಹಿಂಬದಿಯಲ್ಲಿ ಆಟಿಕೆ ವಸ್ತುಗಳ ಪ್ರದರ್ಶನಕ್ಕೆ ತಯಾರಿ ನಡೆದಿದ್ದು ಕರೋನಾ ...

ದಕ್ಷಿಣಕನ್ನಡ: ಕಾಲೇಜು ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು. ಹೋಂ ಕ್ವಾರೆಂಟೈನಲ್ಲಿರುವಂತೆ ಸೂಚನೆ.

ಮಂಗಳೂರು : ಕಾಲೇಜುಗಳು ಆರಂಭವಾಗಿ ವಾರವಾಗಿದ್ದು, ದ.ಕ.ದಲ್ಲಿ 29 ವಿದ್ಯಾರ್ಥಿಗಳಲ್ಲಿ ಕೊರೊನಾ ಪಾಸಿಟಿವ್‌ ಪತ್ತೆಯಾಗಿದೆ. ಇದರಲ್ಲಿ ...