ಸರ್ಕಾರ-ರೈತರ ನಡುವೆ 9ನೇ ಸುತ್ತಿನ ಮಾತುಕತೆ: ನಿರೀಕ್ಷೆಗಳಿಲ್ಲದ ಸಭೆ

Source: S O News | By Laxmi Tanaya | Published on 16th January 2021, 10:50 AM | National News |

ನವದೆಹಲಿ : ದೆಹಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಹೋರಾಟ 52ನೇ ದಿನಕ್ಕೆ ಕಾಲಿಟ್ಟಿದೆ. ಇಷ್ಟು ದಿನಗಳಲ್ಲಿ ಸರ್ಕಾರ ಮತ್ತು ರೈತರ ನಡುವೆ 8 ಸುತ್ತಿನ ಮಾತುಕತೆಗಳು ನಡೆದಿದೆ. 

ಆದರೆ ರೈತ ಹೋರಾಟ ಪ್ರಶ್ನಿಸಿ ಎರಡು ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಮ್‌ ಕೋರ್ಟ್‌ ಮಂಗಳವಾರ ರೈತರ ಬೇಡಿಕೆ ಆಲಿಸಿ, ಕಾಯ್ದೆಗಳ ಅನುಷ್ಠಾನ ಕುರಿತು ಸ್ಪಷ್ಟತೆ ಪಡೆಯಲು ಸಮಿತಿ ನೀಡಿ ಆದೇಶ ಹೊರಡಿಸಿತ್ತು. 

ಈ ಹಿನ್ನೆಲೆಯಲ್ಲಿ ಸಮಾನಾಂತರವಾಗಿ ಸರ್ಕಾರದೊಂದಿಗೆ ಮಾತುಕತೆ ನಡೆಸುವುದು ವ್ಯರ್ಥ ಎಂಬ ನಿಲುವಿದ್ದರೂ ಇಂದು ಸಭೆ ನಡೆಯುತ್ತಿದೆ. ಕೇಂದ್ರ ಸರ್ಕಾರ ರೈತರ ಮನವೊಲಿಸುವ ನಿಟ್ಟಿನಲ್ಲಿ ಮಾತುಕತೆಗೆ ಸಿದ್ಧವಾಗಿದ್ದು, ದರ್ಶನ್‌ಪಾಲ್‌ ಹಾಗೂ ಹಿರಿಯ ರೈತ ಮುಖಂಡರು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು, ಕನಿಷ್ಠ ಬೆಂಬಲ ಬೆಲೆ ಕುರಿತು ತಮ್ಮ ಬೇಡಿಕೆಯ ವಿಷಯದಲ್ಲಿ ಪಟ್ಟು ಹಿಡಿದಿರುವ ರೈತರು ಕಳೆದ 8 ಸುತ್ತಿನ ಮಾತುಕತೆಗಳಲ್ಲಿ ಕೇಂದ್ರ ಸರ್ಕಾರದ ಯಾವುದೇ ಸಲಹೆಗಳಿಗೆ ಒಪ್ಪಿಲ್ಲ.

ಈಗ ಸುಪ್ರೀಮ್‌ಕೋರ್ಟ್‌ ಸಮಿತಿ ರಚಿಸಿದ್ದು, ರೈತರೊಂದಿಗೆ ಸಮಾಲೋಚಿಸುವುದಕ್ಕೆ ಜ. 19ರಂದು ಸಭೆ ನಿಗದಿಯಾಗಿದೆ. ಅಂದರೆ ಇಂದಿನ 9ನೇ ಸುತ್ತಿನ ಮಾತುಕತೆ ಸರ್ಕಾರ ಮತ್ತು ರೈತರ ನಡುವಿನ ನಡೆಯುವ ಕಡೆಯ ಮಾತುಕತೆಯಾಗಲಿದೆ. 

ಈ ಸಭೆಯ ಬಗ್ಗೆ ಹೋರಾಟ ನಿರತ ರೈತರು, ರೈತ ನಾಯಕರು ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲವಾದರೂ, ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

Read These Next

ಹೊಸದಿಲ್ಲಿ: ಕೇರಳ, ತಮಿಳುನಾಡು, ಪಶ್ಚಿಮಬಂಗಾಳ ಸಹಿತ ಪಂಚರಾಜ್ಯಗಳ ಚುನಾವಣೆಗೆ ದಿನಾಂಕ ಘೋಷಣೆ

ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಪುದುಚೇರಿ ವಿಧಾನಸಭೆಗಳ ಚುನಾವಣಾ ದಿನಾಂಕಗಳನ್ನು ಚುನಾವಣಾ ಆಯೋಗವು ಶುಕ್ರವಾರ ...

ಅಹಮದಾಬಾದ್: ಪಟೇಲ್ ಸ್ಟೇಡಿಯಂಗೆ ಮೋದಿ ಹೆಸರು ವಿಶದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣಕ್ಕೆ ಮರು ನಾಮಕರಣ

ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಅಹಮಬಾದ್‌ನ ಮೊಟೆರಾದ ಸರ್ದಾರ್ ಪಟೇಲ್ ಕ್ರಿಕೆಟ್ ...

ಹೊಸದಿಲ್ಲಿ: ದಿಶಾ ರವಿಗೆ ಜಾಮೀನು

ಟೂಲ್‌ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.13ರಂದು ಬೆಂಗಳೂರಿನಲ್ಲಿ ದಿಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಪರಿಸರ ಕಾರ್ಯಕರ್ತೆ ...