ಕಾರವಾರ: ಶ್ರಮಿಕ ವಿಶೇಷ ರೈಲಿನಿಂದ ಪಶ್ಚಿಮ ಬಂಗಾಳಕ್ಕೆ 967 ವಲಸೆ ಕಾರ್ಮಿಕರ ಪ್ರಯಾಣ

Source: sonews | By Staff Correspondent | Published on 1st June 2020, 7:27 PM | Coastal News |

ಕಾರವಾರ: ಉತ್ತರಕನ್ನಡ ಜಿಲ್ಲೆಯಿಂದ 967 ವಲಸೆ ಕಾರ್ಮಿಕರನ್ನು ಹೊತ್ತು ಪಶ್ಚಿಮ ಬಂಗಾಳಕ್ಕೆ ಮೊದಲ ಶ್ರಮಿಕ ರೈಲು  ಸೋಮವಾರ ಪ್ರಯಾಣ ಬೆಳಿಸಿತು. 

ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಅವರ ಕೋರಿಕೆಯ ಮೇರೆಗೆ ಕೊಂಕಣ ರೈಲ್ವೆ ನಿಗಮವು ಕಾರವಾರ ರೈಲು ನಿಲ್ದಾಣದಿಂದ ಶ್ರಮಿಕ್ ವಿಶೇಷ ರೈಲನ್ನು ಬಿಟ್ಟಿದೆ. ಈ ರೈಲಿನಲ್ಲಿ ಕಾರವಾರದಿಂದ 967 ಪ್ರಯಾಣಿಕರು ತೆರಳಿದರೆ, ಉಡುಪಿಯಿಂದ 250 ಹಾಗೂ ಮಂಗಳೂರಿನಿಂದ 72 ಕಾರ್ಮಿಕರನ್ನು ಸೇರಿದಂತೆ ಒಟ್ಟು 1,289 ಮಂದಿಯನ್ನು ಪಶ್ಚಿಮ ಬಂಗಾಳದ ಪುರುಲುವಾ ಜಂಕ್ಷನ್ ಗೆ ಕರೆದೊಯ್ಯುತ್ತಿದೆ‌.

ಈ ಸಂದರ್ಭದಲ್ಲಿ ಕೊಂಕಣ ರೈಲ್ವೆ ನಿಗಮದ ಕಾರವಾರ ಪ್ರಾದೇಶಿಕ ವ್ಯವಸ್ಥಾಪಕ ಬಿ.ಬಿ.ನಿಕಮ್, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಹಾಜರಿದ್ದು, ಕಾರ್ಮಿಕರಿಗೆ ಸುರಕ್ಷಿತ ಪ್ರಯಾಣಕ್ಕೆ ಶುಭ ಹಾರೈಸಿದರು.

Read These Next