ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಾಸನದಲ್ಲಿ 86ನೇ ಸರ್ವ ಸದಸ್ಯರ ಸಭೆ

Source: S O News Service/Shabbir Ahmed | By I.G. Bhatkali | Published on 4th June 2019, 8:06 PM | State News |

ಕೋಲಾರ: ಆರ್ಥಿಕವಾಗಿ ಹಿಂದುಳಿದಿರುವ ಪತ್ರಕರ್ತರಿಗೆ ಗ್ರಾಮೀಣ ಪ್ರದೇಶದ ಬಸ್ ಪಾಸ್ ಹಾಗೂ ಬಿ.ಪಿ.ಎಲ್ ಕಾರ್ಡ್ ವಿತರಿಸಲು ಸರ್ಕಾರದ ಮಟ್ಟದಲ್ಲಿ ಸಂಘದ ವತಿಯಿಂದ ಪ್ರಸ್ತಾವನೆ ಸಲ್ಲಿಸಬೇಕೆಂದು ಕೋಲಾರ ಜಿಲ್ಲೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಆಗ್ರಹ ಪಡೆಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಾಸನದಲ್ಲಿ ಆಯೋಜಿಸಿದ್ದ 86ನೇ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯ ಸಂಘದಲ್ಲಿ ಕ್ಷೇಮ ನಿಧಿಯಿಂದ ಮೃತರಾದ ಪತ್ರಕರ್ತರ ಕುಟುಂಬಗಳಿಗೆ ಸಹಾಯ ಧನ ವಿತರಿಸುವಂತಾಗ ಬೇಕು ಹಾಗೂ ಅವರ ಕುಟುಂಬದಲ್ಲಿ ಆರ್ಹರಾದ ಓರ್ವರಿಗೆ ಸರ್ಕಾರ ಅಥಾವ ಖಾಸಗಿಯಾಗಿ ಉದ್ಯೋಗ ದೊರಕಿಸಲು ಸಂಘದ ವತಿಯಿಂದ ಸರ್ಕಾರಕ್ಕೆ ಒತ್ತಾಯ ಪಡಿಸಬೇಕೆಂದು ಒತ್ತಾಯಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಪ್ರತಿಕ್ರಿಯಿಸಿ ಗ್ರಾಮೀಣ ಭಾಗದ ಪತ್ರಕರ್ತರಿಗೆ ಈ ಮೊದಲು ಬಸ್ ಕೊಪನ್‍ಗಳನ್ನು ವಿತರಿಸಲಾಗುತ್ತಿತ್ತು. ನಂತರದಲ್ಲಿ ಮಾನ್ಯತೆ ಹೊಂದಿದವರಿಗೆ ಮಾತ್ರ ಕೆ.ಎಸ್.ಆರ್.ಟಿ.ಸಿ. ಪಾಸ್ ನೀಡಲಾಗುತ್ತಿದೆ. ಮಾನ್ಯತೆ ಹೊಂದಿಲ್ಲದ ಪತ್ರಕರ್ತರಿಗೆ ಬಸ್ ಕೂಪನ್ ವಿತರಿಸಲು ಸಂಘದ ವತಿಯಿಂದ ಸರ್ಕಾರದ ಮುಂದೆ ಪ್ರಸ್ತಾವನೆ ಇದ್ದು ಮತ್ತೊಮ್ಮೆ ಒತ್ತಾಯಿಸಲಾಗುವುದು ಎಂದರು.

ಕ್ಷೇಮಾನಿಧಿಯಿಂದ ಮೃತ ಪತ್ರಕರ್ತರ ಕುಟುಂಬಕ್ಕೆ ಅರ್ಥಿಕ ನೆರವು ಕುರಿತು ಕಾರ್ಯಕಾರಿ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಉದ್ಯೋಗ ದೊರಕಿಸುವಲ್ಲಿ ರಾಜ್ಯ ಸಂಘವು ಸಂಬಂಧ ಪಟ್ಟವರಿಗೆ ಶಿಫಾರಸ್ಸು ಮಾಡುವ ಮೂಲಕ ಪ್ರಯತ್ನಿಸಲಾಗುವುದು. ಈ ಬಗ್ಗೆಯು ಸರ್ಕಾರದ ಪ್ರಸ್ತಾವನೆ ಇಡಲಾಗುವುದು ಎಂದು ಆಶ್ವಾಸನೆ ನೀಡಿದರು. 

ಕರ್ನಾಟಕ ರಾಜ್ಯ ಪತ್ರಕರ್ತರ ಸಂಘವು ಕಳೆದ 1932ರಲ್ಲಿ ಹುಟ್ಟು ಹಾಕಲಾಗಿತ್ತು. ಸಂಘವು ರಚನೆಯಾದ ಮೇಲೆ ಈವರೆಗೆ 85 ಸಭೆಗಳನ್ನು ಯಶ್ವಸಿಯಾಗಿ ನಡೆಸಲಾಗಿದೆ. ಮುಂದಿನ ಆಗು-ಹೋಗುಗಳ ಬಗ್ಗೆ ಚಿಂಥನ ಮಂಥನ ನಡೆಸುವ ಮೂಲಕ ಮುನ್ನಡೆಸಲಾಗುತ್ತಿದೆ ಎಂದರು. 

ಪತ್ರಕರ್ತರು ಪದೇ ಪದೇ ನ್ಯಾಯಾಲಯದ ಮುಂದೆ ನಿಲ್ಲುವ ಪರಿಸ್ಥಿತಿ ಉಂಟಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಸಂಘಟನೆಯನ್ನು ಮತ್ತಷ್ಟು ಬಲವರ್ಧನೆ ಪಡಿಸಬೇಕಾಗಿದೆ ಮುದ್ರಣಾ ಮತ್ತು ಟಿ.ವಿ. ಮಾದ್ಯಮಗಳ ನಡುವೆ ಆರೋಗ್ಯಕರ ಸ್ವರ್ಧೆ ಇರಬೇಕೆ ಹೊರತು ವೈಯುಕ್ತವಾಗಿ ಪರಿಗಣಿಸುವುದು ಸೂಕ್ತವಲ್ಲ. ಪತ್ರಕರ್ತರ ಸಂಘಟನೆಯನ್ನು ಬೆಳೆಸಬೇಕು ಎಂದು ಅಭಿಪ್ರಾಯ ಪಟ್ಟರು.

ರಾಜೀವ್ ಇಂಜನಿಯರಿಂಗ್ ವಿದ್ಯಾ ಸಂಸ್ಥೆಯ ಮುಖ್ಯಸ್ಥರಾದ ಡಾ.ರಾಜೀವ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತಾವು ಬೆಳೆದ ಹಾದಿಯಲ್ಲಿ ಶಿಸ್ತು ಶ್ರಮ ಹಾಗೂ ಪ್ರಮಾಣಿಕತೆಯಿಂದಾಗಿ ತಾವು ತಮ್ಮ ಗುರಿಯನ್ನು ಸಾಧಿಸಲು ಸಾಧ್ಯವಾಯಿತು. ಒಂದು ಕಾಲದಲ್ಲಿ 400 ರೂಗೆ ಕೆಲಸಕ್ಕೆ ಸೇರಿದವನು ಇಂದು 1500 ಮಂದಿಗೆ ಕೆಲಸ ನೀಡುವಂತಾಗಿದೆ ಎಂದು ತಾವು ಬೆಳೆದ ಬಂದ ಹಾದಿಯ ಬಗ್ಗೆ ವಿವರಿಸಿದರು.

ಹಾಸನ ಜಿಲ್ಲೆಯ ಪತ್ರಕರ್ತ ಸಂಘದ ಅಧ್ಯಕ್ಷ ಮಲ್ಲೇನಗೌಡ ಮಾತನಾಡಿ ಪತ್ರಕರ್ತ ಕ್ಷೇಮಾನಿಧಿ ಪತ್ರಕರ್ತರ ಸಂಕಷ್ಟಗಳಿಗೆ ಅನಿವಾರ್ಯ. ಪತ್ರಕರ್ತರ ಕುಟುಂಬಗಳಿಗೆ ಆರೋಗ್ಯವಿಮೆ ಅಗತ್ಯವಿದೆ. ಕಾರ್ಯನಿರತ ಪತ್ರಕರ್ತರಿಗೆ ಮಾತ್ರ ಗುರುತಿನ ಚೀಟಿ ವಿತರಿಸಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್‍ಗೆ ಸರ್ಕಾರ ವಿತರಿಸುವ ಮಾದರಿಯಲ್ಲಿ ಪತ್ರಕರ್ತರ ಸಂಘಕ್ಕೂ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಬೇಕು. ಸಂಘದಲ್ಲಿ ಸರ್ಕಾರದೊಂದಿಗೆ ವ್ಯವಹರಿಸಲು ಪ್ರತ್ಯೇಕ ಕಾರ್ಯದರ್ಶಿಗಳ ನೇಮಕಾತಿ, ರಾಜ್ಯ ಸಂಘದಲ್ಲಿ ದೂರದ ಅತಿಥಿಗಳು ಕಾರ್ಯ ನಿಮಿತ್ತ ಅಗಮಿಸಿದಾಗ ಉಳಿದು ಕೊಳ್ಳಲು ಅತಿಥಿ ಕೊಠಡಿಗಳ ನಿರ್ಮಾಣದ ಅಗತ್ಯ, ಪತ್ರಿಕೋದ್ಯಮದಿಂದ ನಿವೃತ್ತರಾಗುವ ಅರ್ಹ ಪತ್ರಕರ್ತರಿಗೆ ಸರ್ಕಾರದಿಂದ ಪಿಂಚಣಿ ವ್ಯವಸ್ಥೆಗೆ ಸಂಘದ ವತಿಯಿಂದ ತ್ವರಿತವಾಗಿ ಮಂಜೂರು ಮಾಡಿಸುವುದು ಸೇರಿದಂತೆ ಇತರೆ ವಿಷಯಗಳ ಬಗ್ಗೆ ಚರ್ಚಿಸಲಾಯಿತು. 

ಸಭೆಯಲ್ಲಿ ಉಪಾಧ್ಯಕ್ಷರಾದ ಮತ್ತಿಕೇರೆ ಜಯರಾಮ್, ಪ್ರದಾನಕಾರ್ಯದರ್ಶಿ ಜಿ.ಸಿ ಲೋಕೇಶ್ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪತ್ರಿಕೋದ್ಯಮದಲ್ಲಿ ಚಿನ್ನದ ಪದಕ ಪಡೆದ ಆರು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. 

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...