ಉ.ಕ ಜಿಲ್ಲೆಯಲ್ಲಿ ಗುರುವಾರದಂದು 83 ಕೊರೋನಾ ಪೀಡಿತರು; 89 ಮಂದಿ ಗುಣಮುಖ ಹಳಿಯಾಳದಲ್ಲಿ ಬರೊಬ್ಬರಿ ಅರ್ದ ಶತಕ

Source: sonews | By Staff Correspondent | Published on 23rd July 2020, 6:53 PM | Coastal News |

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ನಿಲ್ಲುವ ಯಾವುದೇ ಸೂಚನೆ ನೀಡುತ್ತಿಲ್ಲ. ಗುರುವಾರದಂದು ಹಳಿಯಾಳ ತಾಲೂಕಿನಲ್ಲಿ ಬರೊಬ್ಬರಿ ಅರ್ದ ಶತಕ(50) ಕೋವಿಡ್ ಪ್ರಕರಣಗಳು ದಾಖಲಾಗುವುದರ ಮೂಲಕ ಜಿಲ್ಲೆಯಲ್ಲಿ 83 ಪ್ರಕರಣಗಳು ಪತ್ತೆಯಾಗಿವೆ.

ಭಟ್ಕಳದಲ್ಲಿ 8, ಹಳಿಯಾಳದಲ್ಲಿ 50, ಕಾರವಾರದಲ್ಲಿ 5, ಕುಮಟಾದಲ್ಲಿ 1, ಮುಂಡಗೋಡ 2, ಅಂಕೋಲಾದಲ್ಲಿ 3, ಸಿದ್ದಾಪುರ 2, ಶಿರಸಿ ಹಾಗೂ ಯಲ್ಲಾಪುರದಲ್ಲಿ ತಲಾ ಆರು ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲೆಯಲ್ಲಿ ಒಟ್ಟು 700 ಸಕ್ರೀಯ ಪ್ರಕರಣಗಳಿದ್ದು  ಇದುವರೆಗೆ 705 ಮಂದಿ ಕೋವಿಡ್ ಮುಕ್ತರಾಗಿದ್ದಾರೆ. ಗುರುವಾರದಂದು ಭಟ್ಕಳದಲ್ಲಿ 2, ಹಳಿಯಾಳ 9, ಹೊನ್ನಾವರದಲ್ಲಿ 16, ಕಾರವಾರ 6, ಕುಮಟಾದಲ್ಲಿ 14, ಮುಂಡಗೋಡ 14, ಸಿದ್ದಾಪುರದಲ್ಲಿ 4, ಶಿರಸಿಯಲ್ಲಿ 23, ಯಲ್ಲಾಪುರದಲ್ಲಿ 1, ಒಟ್ಟು 89 ಮಂದಿ ಗುಣಮುಖರಾಗಿದ್ದಾರೆ ಎಂದು ತಿಳಿದುಬಂದಿದೆ.

Read These Next