'ಕ್ಷಿಪಣಿ ದಾಳಿಯಲ್ಲಿ 80 ಅಮೆರಿಕನ್ ಉಗ್ರರ ಸಾವು': ಇರಾನ್ ಸರಕಾರಿ ಮಾಧ್ಯಮ

Source: sonews | By Staff Correspondent | Published on 8th January 2020, 6:17 PM | Gulf News | Don't Miss |

ದುಬೈ: ಇರಾಕ್‍ ನಲ್ಲಿರುವ ಅಮೆರಿಕಾದ ಮಿಲಿಟರಿ ನೆಲೆಗಳ ಮೇಲೆ ಇರಾನ್ ನಡೆಸಿದ 15 ಕ್ಷಿಪಣಿ ದಾಳಿಗಳಲ್ಲಿ ಕನಿಷ್ಠ 80 `ಅಮೆರಿಕನ್ ಉಗ್ರರು' ಹತರಾಗಿದ್ದಾರೆಂದು ಇರಾನಿನ ಸರಕಾರಿ ಟೆಲಿವಿಷನ್ ಬುಧವಾರ ಹೇಳಿದೆ.

ಅಮೆರಿಕಾ ಮತ್ತೆ ಯಾವುದೇ ಪ್ರತೀಕಾರದ ಕ್ರಮ ಕೈಗೊಂಡಿದ್ದೇ ಆದಲ್ಲಿ ಇರಾನ್ ದಾಳಿ ನಡೆಸಲು ಇನ್ನೂ 100 ಗುರಿಗಳನ್ನು ಗುರುತಿಸಿದೆ ಎಂದು ರಿವೊಲ್ಯೂಶನರಿ ಗಾರ್ಡ್ಸ್ ಮೂಲಗಳು ತಿಳಿಸಿವೆಯೆಂದು ಇರಾನ್ ಸರಕಾರಿ ಮಾಧ್ಯಮ ಹೇಳಿಕೊಂಡಿವೆ. ಬುಧವಾರ ಮುಂಜಾನೆ ನಡೆದ ದಾಳಿಯಲ್ಲಿ ಅಮೆರಿಕಾದ ಹೆಲಿಕಾಪ್ಟರುಗಳು ಹಾಗೂ ಮಿಲಿಟರಿ ಸಾಧನಗಳು ತೀವ್ರವಾಗಿ ಹಾನಿಗೊಂಡಿವೆ ಎಂದೂ ಅದು ಮಾಹಿತಿ ನೀಡಿದೆ.

ಡ್ರೋನ್ ದಾಳಿ ಮೂಲಕ ಅಮೆರಿಕಾವು ಇತ್ತೀಚೆಗೆ ಇರಾನ್‍ ನ ರಿವೊಲ್ಯೂಶನರಿ ಗಾರ್ಡ್ಸ್ ಕಮಾಂಡರ್ ಖಾಸಿಂ ಸುಲೈಮಾನಿಯವರನ್ನು ಹತ್ಯೆಗೈದದ್ದಕ್ಕೆ ಪ್ರತೀಕಾರವಾಗಿ ಬುಧವಾರದ ದಾಳಿಗಳು ನಡೆದಿವೆ.

ಮುಂಜಾನೆ 1:30ರ ವೇಳೆಗೆ ಅಮೆರಿಕಾ ನೇತೃತ್ವದ ಮಿತ್ರ ಪಡೆಗಳ ಸಿಬ್ಬಂದಿಯಿದ್ದ ಕನಿಷ್ಠ ಎರಡು ಸ್ಥಳಗಳ ಮೇಲೆ ದಾಳಿ ನಡೆದಿದೆ ಎಂದು ಅಮೆರಿಕಾದ ಮಿಲಿಟರಿ ಮೂಲಗಳು ತಿಳಿಸಿವೆ.

ಆದರೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ `ಆಲ್ ಈಸ್ ವೆಲ್' ಎಂದು  ಟ್ವೀಟ್ ಮಾಡಿದ್ದಾರೆ. ದಾಳಿಯಲ್ಲಿ ಯಾರೂ ಮೃತರಾಗಿಲ್ಲ ಎಂದು ಕೆಲ ಮೂಲಗಳು ತಿಳಿಸಿವೆಯಾದರೂ ಅಮೆರಿಕಾ ಅಧಿಕಾರಿಗಳು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

Read These Next

ಭಟ್ಕಳದ ಗರ್ಭಿಣಿ ಮಹಿಳೆಯರು, ವೃದ್ಧರು ಹಾಗೂ ಮಕ್ಕಳ ಹೊತ್ತು ಜೂ.12ಕ್ಕೆ ದುಬೈಯಿಂದ ಮಂಗಳೂರಿಗೆ ಹಾರಲಿದೆ ಬಾಡಿಗೆ ವಿಮಾನ

ಭಟ್ಕಳ : ಲಾಕ್ಡೌನ್ ನಿಂದಾಗಿ ದುಬೈ ಮತ್ತು ಯುಎಇಯಲ್ಲಿ ಸಿಲುಕಿರುವ ಭಟ್ಕಳ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರನ್ನು ಚಾರ್ಟರ್ಡ್ ...