ಮಾಜಿ ಶಾಸಕ ಮಾಂಕಾಳರ ನೆರವಿನಿಂದ ಭಟ್ಕಳದಿಂದ ಓಡಿಸ್ಸಾ ಕ್ಕೆ ಪ್ರಯಾಣ ಬೆಳೆಸಿದ 70 ಮೀನುಗಾರರು

Source: sonews | By Staff Correspondent | Published on 25th May 2020, 10:38 PM | Coastal News |

ಭಟ್ಕಳ: ಸೇವಾ ಸಿಂಧು ಆ್ಯಫ್‍ನಲ್ಲಿ ಹೆಸರು ನೊಂದಾಯಿಸಿ ತಮ್ಮ ರಾಜ್ಯಕ್ಕೆ ಮರಳು  ಕಾಯುತ್ತಿದ್ದ ಒಡಿಸ್ಸಾದ 70 ಮೀನುಗಾರರು ಸೋಮವಾರದಂದು ಮಾಜಿ ಶಾಸಕ ಮಾಂಕಾಳ ವೈದ್ಯರ ನೆರವಿನಿಂದ ಖಾಸಗಿ ಬಸ್ ಮೂಲಕ ಪ್ರಯಾಣ ಬೆಳಿಸಿದರು. 

ಕಳೆದ ಕೆಲವು ದಿನಗಳಿಂದ ಒಡಿಸ್ಸಾ ತೆರಳಲು ಸುಮಾರು 70 ಮೀನುಗಾರರು ಸೇವಾ ಸಿಂಧು ಆ್ಯಫ್‍ನಲ್ಲಿ ಹೆಸರು ನೊಂದಾಯಿಸಿದ್ದರು. ಆದರೆ ಅಲ್ಲಿಗೆ ತೆರಳಲು ರೈಲಿನ ವ್ಯವಸ್ಥೆ ಇಲ್ಲದೆ ಇಲ್ಲಿಯೆ ಪರದಾಡುತ್ತಿದ್ದರು. ಅವರ ಬೋಟ್‍ಗಳ ಮಾಲಿಕರು ಅವರಿಗೆ ಊಟ ತಿಂಡಿ ಕೊಡುತ್ತಿದ್ದರಾದರೂ ಮರಳಿ ಮನೆಗೆ ತೆರಳಲು ಪ್ರತಿದಿನ ಹೋರಾಟ ನಡೆಸುತ್ತಿದ್ದರು. ಮಾಜಿ ಶಾಸಕ ಮಂಕಾಳ ವೈದ್ಯ ಅವರ ಮನೆಗೆ ತೆರಳಿ ತಮ್ಮ ಸಂಕಷ್ಟ ತಿಳಿಸಿದ್ದು ಮೀನುಗಾರರ ನೆರವಿಗೆ ಧಾವಿಸಿದ ಅವರು ಬೋಟ್ ಮಾಲಿಕರಾದ ನಾರಾಯಣ ಮೊಗೇರ್, ಮಾಧವ ಮೊಗೇರ್, ಸುಕ್ರಯ ನಾಯ್ಕ ಬಂದರ್ ಹಾಗೂ ಮೀನುಗಾರಿಕೆ ಇಲಾಖೆಯ ಸಹಾಯ ನಿರ್ದೇಶಕ ಅಧಿಕಾರಿ ರವಿ ಅವರ ಸಹಕಾರದೊಂದಿಗೆ ಭಟ್ಕಳದಿಂದ ಒಡಿಸ್ಸಾಕ್ಕೆ ತೆರಳಲು ಬಸ್ ಸೌಕರ್ಯ ಕಲ್ಪಿಸಿ ಕೊಟ್ಟಿದ್ದಾರೆ. 

ಸೋಮವಾರ ಆರೋಗ್ಯ ತಪಾಸಣೆ ನಡೆಸಿ 70 ಕಾರ್ಮಿಕರು ತಮ್ಮ ಊರಿಗೆ ತೆರಳಲು ಬಸ್ ಹತ್ತಿದ್ದಾರೆ. ಈ ಸಂದರ್ಭದಲ್ಲಿ ಜಾಲಿ ಪ.ಪಂ. ಮಾಜಿ ಅಧ್ಯಕ್ಷ ಅಬ್ದುಲ್ ರಹೀಮ್ ಶೇಕ್ ಇದ್ದರು.

Read These Next

ಕಾರ್ಮಿಕ ಸಂಘಟನೆಗಳಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶಾಸಕರಿಗೆ ಮನವಿ

ಭಟ್ಕಳ: ತಾಲೂಕಿನ ಕಾರ್ಮಿಕ ಸಂಘಟನೆಗಳ ಮುಖಂಡರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗುರುವಾರ ಶಾಸಕ ಸುನಿಲ್ ...