ಕೊರೋನ ನಡುವೆ ಕೋಮುದ್ವೇಷ ಸೋಂಕಿತರು ಹರಡಿದ 7 ಸುಳ್ಳುಸುದ್ದಿಗಳು

Source: sonews | By Staff Correspondent | Published on 5th April 2020, 5:46 PM | National News | Special Report |

ದೇಶದಲ್ಲಿ ವ್ಯಾಪಿಸಿರುವ ಕೊರೋನಾ ಸೋಂಕಿಗೆ ಕೋಮು ಬಣ್ಣ ಬಳಿಯುವ ಪ್ರಯತ್ನ ನಡೆಯುತ್ತಿದ್ದು  ಸಾಮಾಜಿಕ ಜಾಲತಾಣದಲ್ಲಿ ಮತ್ತು ಕೆಲವು ಮಾಧ್ಯಗಳಲ್ಲಿ ಸುಳ್ಳುಗಳು ವ್ಯಾಪಕವಾಗಿ ಪ್ರಸಾರವಾಗಿರುವುದು ಬೆಳಕಿಗೆ ಬಂದಿದೆ.

ಹಣ್ಣುಗಳ ಮೇಲೆ ಉಗುಳುತ್ತಿರುವ ವ್ಯಕ್ತಿ

ಕೊರೋನ ವೈರಸ್ ಹರಡಲು ವ್ಯಕ್ತಿಯೊಬ್ಬ ಹಣ್ಣುಗಳಿಗೆ ಉಗುಳುತ್ತಿದ್ದಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿತ್ತು. ಆದರೆ ಇದು ಫೆಬ್ರವರಿ 16ರಂದು ನಡೆದ ಘಟನೆ ಎಂದು thequint.com ವರದಿ ಮಾಡಿದೆ. ಕೊರೋನ ವೈರಸ್ ಹರಡಲು ಈ ಕೃತ್ಯ ಎಸಗಲಾಗಿದೆ ಎನ್ನುವ ಆರೋಪಗಳು ಸುಳ್ಳು ಎಂದು ವರದಿ ಸ್ಪಷ್ಟಪಡಿಸಿದೆ.

ಪಾತ್ರೆಗಳನ್ನು ನೆಕ್ಕುತ್ತಿರುವ ವಿಡಿಯೋ

ಕೊರೋನಾ ಸೋಂಕು ಹರಡುವ ಉದ್ದೇಶದಿಂದ ಮುಸ್ಲಿಮರ ಗುಂಪೊಂದು ಪಾತ್ರೆಗಳನ್ನು ನೆಕ್ಕುತ್ತಿದೆ ಎಂಬ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಈ ವಿಡಿಯೊ 2018ರ ಜುಲೈ 31ನೇ ತಾರೀಕಿನಷ್ಟು ಹಳೆಯದು ಮತ್ತು ದಾವೂದಿ ಬೊಹ್ರಾ ಸಮುದಾಯದವರು ತಮ್ಮ ಸಂಪ್ರದಾಯದಂತೆ ಆಹಾರ ಹಾಳು ಮಾಡಬಾರದೆಂಬ ದೃಷ್ಟಿಯಿಂದ ಪಾತ್ರೆಗಳನ್ನು ನೆಕ್ಕುತ್ತಿದ್ದಾರೆ ಎಂಬ ಶೀರ್ಷಿಕೆಯನ್ನು ಇದು ಹೊಂದಿದೆ.

ಸಾರ್ವಜನಿಕವಾಗಿ ಸೀನುತ್ತಿದ್ದಾರೆ ಎನ್ನುವ ಆರೋಪ

ದೆಹಲಿಯ ನಿಝಾಮುದ್ದೀನ್ ಮಸೀದಿಯಲ್ಲಿ ಕೊರೋನಾ ಹರಡುವ ಉದ್ದೇಶದಿಂದಲೇ ಸೀನುತ್ತಿದ್ದಾರೆ ಎಂಬ ಶೀರ್ಷಿಕೆಯ ವಿಡಿಯೊ ವೈರಲ್ ಆಗಿದೆ. ಆದರೆ ಇದು ಸುಳ್ಳು  ಎಂದು thelogicalindian.com ಸತ್ಯಶೋಧನಾ ತಂಡ ಪತ್ತೆ ಮಾಡಿದೆ. ಇದು ಸೂಫಿ ಸಂಪ್ರದಾಯದಂತೆ ನಡೆಯುವ ಆಚರಣೆಯಾಗಿದ್ದು, ಇಲ್ಲಿ ಯಾರೂ ಸೀನುತ್ತಿಲ್ಲ. ಈ ಆಚರಣೆಯ ಪ್ರಕಾರ ಉಸಿರನ್ನು ಎಳೆದು ಹೊರಗೆ ಬಿಡಲಾಗುತ್ತಿದೆ. ಇಷ್ಟೇ ಅಲ್ಲದೆ ಈ ವಿಡಿಯೋ ನಿಝಾಮುದ್ದೀನ್ ಮಸೀದಿಯದ್ದಲ್ಲ.

ಕೊರೋನಾ ಪೀಡಿತ ತಬ್ಲೀಗಿಯೊಬ್ಬ ಪೊಲೀಸರತ್ತ ಉಗಿಯುತ್ತಿದ್ದಾನೆ ಎಂದು ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡಿದ್ದ ವಿಡಿಯೊ ಕೂಡಾ ನಕಲಿ ಎನ್ನುವುದನ್ನು bbc.com ಫ್ಯಾಕ್ಟ್ ಚೆಕ್ ಬಹಿರಂಗಪಡಿಸಿದೆ. ಈ ಘಟನೆ ಫೆಬ್ರವರಿ 29ರಂದು ನಡೆದಿತ್ತು. ತನ್ನ ಮನೆಯವರು ತಂದಿದ್ದ ಊಟ ನೀಡಿಲ್ಲ ಎಂದು ಬಂಧಿತ ವ್ಯಕ್ತಿಯೊಬ್ಬ ಪೊಲೀಸರ ಮೇಲೆ ಉಗುಳಿದ್ದ. ನಂತರ ಪೊಲೀಸರು ಆತನಿಗೆ ಥಳಿಸಿದ್ದರು. ಈ ಘಟನೆಯ ವಿಡಿಯೀ ಫೆಬ್ರವರಿ 29ರಂದೇ ವೈರಲ್ ಆಗಿತ್ತು.

ರೇವಾ ಎಸ್ಪಿ ಆಬಿದ್ ಖಾನ್ ಎಂಬವರು ಹಿಂದೂ ಅರ್ಚಕರೊಬ್ಬರನ್ನು  ಹೊಡೆಯುತ್ತಿದ್ದಾರೆ ಎನ್ನಲಾದ  ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ  ವೈರಲ್‍ ಆಗಿದ್ದು, ಇದು ಕೂಡಾ ನಕಲಿ ಎಂದು thelallantop.com ವರದಿ ಮಾಡಿದೆ. ಈ ಫೋಟೊದಲ್ಲಿರುವ ಅಧಿಕಾರಿ ಆಬಿದ್ ಖಾನ್ ಅಲ್ಲ ಬದಲಾಗಿ ಅವರ ಹೆಸರು ರಾಜ್ ಕುಮಾರ್ ಮಿಶ್ರಾ. ಘಟನೆ ನಡೆದಾಗ ದೇವಸ್ಥಾನದಲ್ಲಿ ಅರ್ಚಕರು ಮಾತ್ರ ಇದ್ದದ್ದಲ್ಲ, ಹಲವು ಮಹಿಳೆಯರು ಕೂಡ ಇದ್ದರು. ನಂತರ ಅವರನ್ನು ತೆರವುಗೊಳಿಸಲಾಗಿತ್ತು. ಇಷ್ಟೇ ಅಲ್ಲದೆ ಲಾಕ್ ಡೌನ್ ಉಲ್ಲಂಘನೆಯ ಕಾರಣಕ್ಕಾಗಿ ಇದೇ ಸಂದರ್ಭ ಮಸೀದಿಗಳಲ್ಲಿ ಇದ್ದವರ ಮೇಲೂ ಕ್ರಮ ಕೈಗೊಳ್ಳಲಾಗಿತ್ತು.

ಕೊರೋನ ವೈರಸ್ ಹಿನ್ನೆಲೆಯಲ್ಲಿ ಭಾರತೀಯ ಹೋಟೆಲ್‍ ಒಂದರಲ್ಲಿ ಗ್ರಾಹಕರಿಗೆ ಆಹಾರ ಪೂರೈಸುವ ಮುನ್ನ ಸೋಂಕಿತ ಮುಸ್ಲಿಂ ವ್ಯಕ್ತಿ ಉಗುಳುತ್ತಿದ್ದಾನೆ ಎಂಬ ವಿಡಿಯೊ ಕೂಡಾ ಸುಳ್ಳು ಎನ್ನುವುದನ್ನು altnews.in ಸಾಬೀತುಪಡಿಸಿದೆ.  ಆದರೆ 2019ರ ಮೇ ತಿಂಗಳಿನಿಂದಲೇ ಈ ವಿಡಿಯೋ ವೈರಲ್ ಆಗಿತ್ತು.

ಜಾಲತಾಣಗಳಲ್ಲಿ ವೈರಲ್‍ ಆದ ಮತ್ತೊಂದು ವಿಡಿಯೋದಲ್ಲಿ ಪಾಟ್ನಾದ ಖುರ್ಜಿಯಲ್ಲಿ ಕಳೆದ ತಿಂಗಳು 50 ಮಂದಿ ಇಟಾಲಿಯನ್ ಹಾಗೂ ಇರಾನಿಗಳು ಅಡಗಿದ್ದಾರೆ ಎಂದು ಪ್ರತಿಪಾದಿಸಲಾಗಿತ್ತು. ಆದರೆ ವಾಸ್ತವವಾಗಿ ಅವರು ಇಟಲಿಯನ್ನರೂ ಅಲ್ಲ ಹಾಗೂ ಕೊರೋನಾ ಸೋಂಕಿತರಲ್ಲ ಎನ್ನುವುದನ್ನು altnews.in ಪತ್ತೆ ಮಾಡಿದೆ.

ಕೃಪೆ: vbnewsonline.in

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...