ಭಟ್ಕಳದಲ್ಲಿ ಭಾರಿ ಮಳೆಗಾಳಿಗೆ 7 ವಿದ್ಯುತ್ ಕಂಬಗಳು ಧರಾಶಾಹಿ, 3 ಟ್ರಾನ್ಸ್‍ಫಾರ್ಮರ್ಸ್ ಗೆ ಬೆಂಕಿ ಅಂದಾಜು ರೂ.1.10 ಲಕ್ಷ ಹಾನಿ

Source: sonews | By Staff Correspondent | Published on 2nd June 2020, 6:13 PM | Coastal News | Don't Miss |

ಭಟ್ಕಳ: ಭಟ್ಕಳ ತಾಲೂಕಿನಾದ್ಯಂತ ಭಾರಿ ಬಿರುಗಾಳಿಯಿಂದ ಮಳೆ ಬೀಳುತ್ತಿದ್ದು ಪ್ರತಿ ಗಂಟೆಗೆ 50-60ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಮುಸ್ಸೂಚನೆಯನ್ನು ಭಾರತೀಯ ಹವಮಾನ ಇಲಾಖೆ ನೀಡಿದೆ. 

ಸೋಮವಾರ ರಾತ್ರಿಯಿಂದ ಮಂಗಳವಾರ ಸಂಜೆಯ ವೇಳೆಗೆ ಬಿರುಗಾಳಿಯಿಂದಾಗಿ ಏಳು ವಿದ್ಯುತ್ ಕಂಬಗಳು ಧರಾಶಾಹಿಯಾಗಿದ್ದು ಮೂರು ಟ್ರಾನ್ಸ್‍ಫಾರಮರ್ಸ್ ಗಳು ಸುಟ್ಟು ಹೋಗಿವೆ. ಇದರಿಂದಾಗಿ ಹೆಸ್ಕಾಂ ಇಲಾಖದೆ ಅಂದಾಜು ರೂ.1.10 ಲಕ್ಷ ಹಾನಿ ಸಂಭವಿಸಿದೆ ಎಂದು ಹೆಸ್ಕಾಂ ಇಲಾಖೆಯ ಅಭಿಯಂತರರು ಮಾಹಿತಿ ನೀಡಿದ್ದಾರೆ. 

ಅಲ್ಲದೆ ಜಾಲಿ ರಸ್ತೆಯ ಹನುಮಾನ್ ನಗರದಲ್ಲಿ ಸಾವಿತ್ರಿ ಲಕ್ಷ್ಮಯ್ಯ ನಾಯ್ಕ ಎಂಬುವವರಿಗೆ ಸೇರಿದ ಕಳೆದ ಒಂದು ತಿಂಗಳ ಹಿಂದೆ ಮನೆಯ ಮುಂದೆ ಹಾಕಿದ್ದ ಶೆಡ್ ಕೂಡ ಉರುಳಿಬಿದ್ದಿದೆ. ಹಾಗೆಯ ರಾ.ಹೆ.66 ರ ಪಕ್ಕದಲ್ಲಿ ಕೋವಿಡ್-19 ಹೆಲ್ಪ್ ಡೆಸ್ಕ್ ಕೇಂದ್ರಗಳಿಗಾಗಿ ತಾತ್ಕಾಲಿಕವಾಗಿ ಹಾಕಲಾಗಿದ್ದ ಟೆಂಟ್ ಕೂಡ ಹಾರಿಹೋಗಿದೆ. ಗ್ರಾಮೀಣ ಪ್ರದೇಶದಲ್ಲಿ ಏನೆಲ್ಲ ಹಾನಿ ಸಂಭವಿಸಿದೆ ಎಂಬ ಕುರಿತಂತೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...