ಮಂಗಳೂರಿನಲ್ಲಿ ಗಾಂಜಾ -  ಏಳು ಪ್ರಕರಣ ದಾಖಲು

Source: SO News | By Laxmi Tanaya | Published on 9th October 2020, 9:40 PM | Coastal News | Don't Miss |

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಡೆಪ್ಯುಟಿ ಕಮಿಷನರ್ ಆಫ್ ಎಕ್ಸೈಜ್ ಇವರ ನಿರ್ದೇಶನದಂತೆ  ಹಾಗೂ ಅಬಕಾರಿ ಅಧೀಕ್ಷಕರು ಮತ್ತು ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದ ಮೇರೆಗೆ ಗುರುವಾರ ಮಂಗಳೂರು ದಕ್ಷಿಣ ವಲಯ-1, ಕಚೇರಿಯ ಅಬಕಾರಿ ನಿರೀಕ್ಷಕಿ ಸೀಮಾ, ಅಬಕಾರಿ ಉಪನಿರೀಕ್ಷಕಿ ಪ್ರತಿಭಾ ಜಿ, ಕಮಲ ಹೆಚ್ ಎನ್ ಹಾಗೂ ಸಿಬ್ಬಂದಿಗಳಾದ ಸಂತೋಷ್ ಕುಮಾರ್, ಸುನಿಲ್ ಬೈಂದೂರ್ ಉಮೇಶ್ ಹೆಚ್, ಕುಮಾರ್, ವಿನಿತಾ, ಸಂದೀಪ್ ಕುಮಾರ್ ಮತ್ತು ಮನ್‍ಮೋಹನ್ ರವರ ತಂಡವು ಮಂಗಳೂರು ದಕ್ಷಿಣ ವಲಯ-1ರ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿ ಒಟ್ಟು 1.50 ಗ್ರಾಂ ಎಮ್.ಡಿ.ಎಮ್.ಎ ಡ್ರಗ್ಸ್, 100 ಗ್ರಾಂ ಗಾಂಜಾ ಮತ್ತು ಒಂದು ದ್ವಿಚಕ್ರ  ವಾಹನವನ್ನು ಜಪ್ತಿ  ಮಾಡಿದ್ದಾರೆ.

 ಗಾಂಜಾ ಸೇವನೆ ಮಾಡುತ್ತಿದ್ದ ಆರೋಪಿಗಳಾದ ಅಲನ್, ವಿವೇಕ್, ಅಮೃತಾ ವಾಸ್, ಸಚಿನ್, ರೋಹನ್, ನಭಾ ಎಂಬವರನ್ನು ಬಂಧಿಸಿ ಒಟ್ಟು 7 ಪ್ರಕರಣಗಳನ್ನು ದಾಖಲಿಸಿದ್ದಾರೆಂದು ಮಂಗಳೂರು ದಕ್ಷಿಣ ವಲಯ-1 ರ ಅಬಕಾರಿ ನಿರೀಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...