ಭಟ್ಕಳದಲ್ಲಿ ತೌಕ್ತೆಗಿಂತ ವೇಗವಾಗಿ ಕೊರೊನಾ ಅಬ್ಬರ; ಚಿತ್ರಾಪುರ ಸೇರಿದಂತೆ 7 ಧಾರಕ ವಲಯ ಘೋಷಣೆ

Source: S O News service | By I.G. Bhatkali | Published on 16th May 2021, 12:53 PM | Coastal News |

ಭಟ್ಕಳ: ತಾಲೂಕಿನಲ್ಲಿ ತೌಕ್ತೆ ಚಂಡ ಮಾರುತಕ್ಕಿಂತ ವೇಗವಾಗಿ ಕೊರೊನಾ ಸೋಂಕು ಹರಡಲಾರಂಭಿಸಿದ್ದು, ಕೊರೊನಾ ಸೋಂಕು ಹೆಚ್ಚು ಕಂಡು ಬಂದಿರುವ ತಾಲೂಕಿನ 7 ವಿವಿಧ ಪ್ರದೇೀಶಗಳನ್ನು ಧಾರಕ ವಲಯಗಳು (ಕಂಟೇನ್‍ಮೆಂಟ್ ಝೋನ್ ) ಎಂದು ಗುರುತಿಸಿ ತಹಸೀಲ್ದಾರರು ಪ್ರಕಟಣೆ ಹೊರಡಿಸಿದ್ದಾರೆ.

ತಾಲೂಕಿನ ಮಾವಳ್ಳಿ-2 ಗ್ರಾಪಂ ವ್ಯಾಪ್ತಿಯ ಕೊಡ್ಸೂಳ, ಶಿರಾಲಿ ಗ್ರಾಪಂ ವ್ಯಾಪ್ತಿಯ ಚಿತ್ರಾಪುರ ಹಾಗೂ ನೀರಕಂಠ, ಕೈಕಿಣಿ ಗ್ರಾಪಂ ವ್ಯಾಪ್ತಿಯ ಬಸ್ತಿ, ಬಾಕಡಕೇರಿ, ಕುಂಬಾರಕೇರಿ, ಭಟ್ಕಳ ಪುರಸಭಾ ವ್ಯಾಪ್ತಿಯ ಡಿ.ಪಿ.ಕಾಲೋನಿಗಳನ್ನು ಧಾರಕ ವಲಯಗಳ ಪಟ್ಟಿಗೆ ಸೇರಿಸಲಾಗಿದ್ದು, ಈ ಭಾಗದಲ್ಲಿ ಜನರ ಓಡಾಟವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗುತ್ತದೆ, ಅವಶ್ಯಕ ವಸ್ತುಗಳ ಖರೀದಿಗೂ ಇಲ್ಲಿನ ಜನರು ಆ ಪ್ರದೇಶವನ್ನು ಬಿಟ್ಟು ಹೊರಗೆ ಬರಬಾರದು ಎಂದು ಕಟ್ಟಪ್ಪಣೆ ಹೊರಡಿಸಲಾಗಿದೆ. 

ಭಟ್ಕಳದಲ್ಲಿ ಮತ್ತೆ 64 ಪಾಸಿಟಿವ್:
 ತಾಲೂಕಿನಲ್ಲಿ ಶನಿವಾರ ಮತ್ತೆ 64 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ತಾಲೂಕಿನಲ್ಲಿ ಸಕ್ರೀಯ ಕೊರೊನಾ ಸೋಂಕಿತರ ಸಂಖ್ಯೆ 341 ಅಗಿದೆ. ಕಳೆದ ವರ್ಷ ಭಟ್ಕಳ ಪಟ್ಟಣ ಪ್ರದೇಶದಲ್ಲಿ ಜನರು ಕಂಗಾಲಾಗುವಂತೆ ಮಾಡಿದ್ದ ಕೊರೊನಾ ಈ ವರ್ಷ ಗ್ರಾಮೀಣ ಪ್ರಧೇಶದಲ್ಲಿ ಅಟ್ಟಹಾಸವನ್ನು ಮೆರೆಯಲಾರಂಭಿಸಿದೆ. ಕೊರೊನಾ ತಡೆ ಲಾಕ್‍ಡೌನ್ ನಡುವೆಯೂ ತಾಲೂಕಿನಲ್ಲಿ ಹಳ್ಳಿಯ ಜನರಿಗೆ ಊರೂರು ಅಲೆಯಲು ಅವಕಾಶ ಮಾಡಿಕೊಟ್ಟಿರುವುದೇ ಕೊರೊನಾ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ, ಈಗಲಾದರೂ ಗ್ರಾಮೀಣ ಪ್ರದೇಶದ ಜನರು ಎಚ್ಚೆತ್ತುಕೊಳ್ಳದೇ ಹೋದರೆ ಇನ್ನಷ್ಟು ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಮಾತು ಗ್ರಾಮೀಣ ಪ್ರದೇಶಗಳಿಂದ ಕೇಳಿ ಬರುತ್ತಿದೆ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...