ಕೂರ್ಮಗಡ ಜಾತ್ರೆಗೆ ತೆರಳಿದ್ದ ದೋಣಿ ಮುಳುಗಿ 8ಮಂದಿ ಸಾವು

Source: sonews | By Staff Correspondent | Published on 21st January 2019, 5:15 PM | Coastal News | State News | Incidents | Don't Miss |

ಕಾರವಾರ: ಕೂರ್ಮಗಡ ಜಾತ್ರೆಗೆ ತೆರಳಿದ್ದ ದೋಣಿ ಸಮುದ್ರದಲ್ಲಿ ಮುಳುಗಿ ಎಂಟು ಮಂದಿ ಮೃತಪಟ್ಟಿದ್ದು ಅವರ ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಕಾರವಾರ ವರ್ಷಕ್ಕೆ ಒಮ್ಮೆ ನಡೆಯುವ ಕುರ್ಮಗಡಜಾತ್ರೆ ಪ್ರಯುಕ್ತ ಕಾರವಾರದ ಹಾಗೂ ಹೊರ ರಾಜ್ಯಗಳಿಂದ ಬಂದ ಭಕ್ತರು ನರಸಿಂಹ ದೇವರ ಜಾತ್ರೆಗೆ ಪ್ರಯಾಣ ಬೆಳೆಸಲು ದೋಣಿ ಸಹಾಯದಿಂದ ದರ್ಶನ ಪಡೆಯಬೇಕು ಆದರೆ ಇಂದು ಭಕ್ತರನ್ನು ತುಂಬಿಕೊಂಡು ದೋಣಿ ಸಾಗುತ್ತಿದ್ದಾಗ ದೋಣಿ ಮುಗುಚಿದೆ ಎಷ್ಟು ಭಕ್ತರು ನೀರುಪಾಲಾಗಿದ್ದಾರ ಎಂದು ಖಚಿತ ಮಾಹಿತಿ ತಿಳಿದು ಬರಬೇಕು

ದೋಣಿಯಲ್ಲಿ ಸುಮಾರು 22 ಜನರಿದ್ದರು ಎನ್ನಲಾಗಿದೆ. ಇವರೆಲ್ಲ ಕೂರ್ಮಗಡ ಜಾತ್ರೆಗೆ ಹೋಗಿ ವಾಪಸ್ ಆಗುತ್ತಿದ್ದಾಗ ಘಟನೆ ನಡೆದಿದೆ. ಉಳಿದವರಿಗಾಗಿ ಶೋಧ ಕಾರ್ಯ ನಡೆದಿದೆ. ಕರಾವಳಿ ಕಾವಲು ಪಡೆ ಮತ್ತು ಸ್ಥಳೀಯ ಮೀನುಗಾರರು ಶೋಧಕಾರ್ಯ ನಡೆಸುತ್ತಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ನಕುಲ್ ಆಗಮಿಸಿದ್ದಾರೆ

ಶಾಸಕಿಯಿಂದ ಆರು ಭಕ್ತರನ್ನು ರಕ್ಷಣೆ:  ದೇವರ ದರ್ಶನ ಕ್ಕೆ ಕಾರವಾರ ಅಂಕೊಲಾ ಶಾಸಕಿ *ರೂಪಾಲಿ ನಾಯ್ಕವರು* ಪ್ರತ್ಯೇಕ ದೋಣಿಯಲ್ಲಿ ಸಾಗಿದರು ಈ ಅವಗಡ ಸಂಭವಿಸಿದ ಕ್ಷಣದಲ್ಲಿ ತಮ್ಮ ದೋಣಿಸಹಾಯದಿಂದ ಆರು ಭಕ್ತರನ್ನು ರಕ್ಷಣೆ ಮಾಡಿದ್ದಾರೆ.


 

Read These Next

ಕಾರ್ಯಸೂಚಿಯಂತೆ ಸದನದ ಕಲಾಪಕ್ಕೆ ಅವಕಾಶ ಕಲ್ಪಿಸಿ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾದ ಸಭಾಧ್ಯಕ್ಷ ಕಾಗೇರಿ

ಬೆಂಗಳೂರು: ಒಂದೆಡೆ ಬರ ಮತ್ತು ಮತ್ತೊಂದೆಡೆ ನೆರೆಯ ಸಮಸ್ಯೆಗೆ ತುತ್ತಾಗಿ ಅರ್ಧ ರಾಜ್ಯವೇ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ...

`ಪಾಕಿಸ್ತಾನಕ್ಕೆ ಕರೆದೊಯ್ಯಲು ಬಂದಿದ್ದ ಆ ಗಾಡಿಯಲ್ಲಿ ನನ್ನ ದೇಹ ಇತ್ತು, ಆದರೆ ಅದಕ್ಕೆ ಜೀವ ಇದ್ದಿರಲಿಲ್ಲ...!'

ಭಾರತ ವಿದೇಶಾಂಗ ಇಲಾಖೆಯ ಆಜ್ಞಾನುಸಾರ ಹಡೆದ 3 ಮಕ್ಕಳನ್ನು ಭಾರತದಲ್ಲಿಯೇ ಬಿಟ್ಟು ಪಾಕಿಸ್ತಾನಕ್ಕೆ ಹೊರಟಿದ್ದ ಭಟ್ಕಳದ ಶಂಕಿತ ...

ಕೂರ್ಮಗಡ ದೋಣಿ ದುರಂತ; ಇದುವರೆಗೆ ೧೪ ಮೃತದೇಹ ಪತ್ತೆ;  ೧೯ ಜನರ ರಕ್ಷಣೆ; ಇಬ್ಬರ ಮೃತದೇಹಕ್ಕಾಗಿ ಶೋಧ

ಕಾರವಾರ: ೨೦೧೯ನೇ ವರ್ಷದ ಆರಂಭದಲ್ಲೇ ಉತ್ತರಕನ್ನಡ ಜಿಲ್ಲೆಯ ಕೂರ್ಮಗಡ ದೋಣಿ ದುರಂತ ಅತ್ಯಂತ ಭಯಾನಕವಾಗಿದ್ದು ೧೬ಮಂದಿಯನ್ನು ...