ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ 53 ವಿದ್ಯಾರ್ಥಿಗಳಿಗೆ ವಂಚನೆ:ಪ್ರಕರಣ ದಾಖಲು

Source: so news | By Manju Naik | Published on 22nd May 2019, 1:44 AM | Coastal News | Don't Miss |

 

ಹೊನ್ನಾವರ: ತಾಲೂಕಿನ ಕಾಸರಕೋಡ ಸಮೀಪ ಇರುವ ಕಲ್ಪತರು ಮ್ಯಾನೇಜಮೆಂಟ್ ಸಂಸ್ಥೆ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಒಟ್ಟು 53 ವಿದ್ಯಾರ್ಥಿಗಳನ್ನು ಡೆಲ್ಲಿಗೆ ಕರೆದುಕೊಂಡು ಹೋಗಿ ವಂಚನೆ ಎಸಗಿ ದೆಹಲಿಯ ಹೋಟೆಲ್ ಸನ್‌ ಇಂಟರನ್ಯಾಶನಲ್ನಲ್ಲಿ ಬಿಟ್ಟು ಪರಾರಿಯಾಗಿದ್ದಾಗಿ ಈಗಾಗಲೇ ರಾಜ್ಯಾದಂತ ಸುದ್ದಿಯಾಗಿತ್ತು.
ದೆಹಲಿಯ ಹೋಟೆಲ್ ಸನ್‌ ಇಂಟರ್‌ನ್ಯಾಶನಲ್ನಲ್ಲಿ ಉಳಿದ ಎಲ್ಲಾ ವಿದ್ಯಾರ್ಥಿಗಳು ಸ್ವಂತ ಹಣದಿಂದ ಹೋಟೆಲ್ ಬಿಲ್ಲ್ ಕಟ್ಟಿ ಸುರಕ್ಷಿತ ವಾಪಸ್ಸಾಗಿದ್ದರು. ಎಲ್ಲಾ ವಿದ್ಯಾರ್ಥಿಗಳು ಇಂದು ಕಾಲೇಜಿನ ಎದುರು ಪ್ರತಿಭಟನೆ ಕೈಗೊಂಡು ಸ್ಥಳಕ್ಕೆ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ವಿದ್ಯಾರ್ಥಿಗಳು ದಾಖಲಾತಿ ನೀಡಿದ ಅಂಕಪಟ್ಟಿ, ಟಿಸಿ ಮುಂತಾದ ದಾಖಲೆ ಹಿಂತಿರುಗಿಸುವುದಾಗಿ ಭರವಸೆ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೇ 10 ರಂದು ಹಾಂಗ್‌ಕಾಂಗ್‌ ಕರೆದುಕೊಂಡು ಹೋಗುವುದಾಗಿ ಹೇಳಿ. ಮೇ 8 ರಂದು 53 ವಿದ್ಯಾರ್ಥಿಗಳನ್ನು ಬೆಂಗಳೂರಿಗೆ ಕರೆಸಿಕೊಂಡು, ಇಂಟರ್‌ವ್ಯೂ ಮುಗಿಸಿಕೊಂಡು ಹೋಗಬೇಕೆಂದು ಹೇಳಿ. ಅಲ್ಲಿಂದ ವಿಮಾನದಲ್ಲಿ ದೆಹಲಿಗೆ ಕರೆದುಕೊಂಡು ಹೊಟೇಲ್ ಸನ್‌ ಇಂಟರನ್ಯಾಶನಲ್ನಲ್ಲಿ ವಸತಿ ವ್ಯವಸ್ಥೆ ಮಾಡಿದ್ದರು. ಇಂಟರ್‌ವ್ಯೂ ಮುಗಿದ ನಂತರ ದೆಹಲಿಯಿಂದ ಮೇ 17ಕ್ಕೆ ಹಾಂಗ್‌ಕಾಂಗ್‌ಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದರು. ಮೇ 16ರ ತನಕ ವಿದ್ಯಾರ್ಥಿಗಳ ಜೊತೆ ಹೋಟೆಲ್ನಲ್ಲಿ ಸಂಪರ್ಕದಲ್ಲಿದ್ದು ಮೇ 17ರಂದು ಹೋಟೆಲ್ನವರಿಂದ ವಿಷಯ ತಿಳಿದು ಹಾಂಗ್‌ಕಾಂಗ್‌ ಹೋಗಲು ಕನಸು ಕಾಣುತ್ತಿದ್ದ ಯುವಕರು ಮನೆಗೆ ಮರಳಿ ಬರಲು ಹಣವಿಲ್ಲದೆ ಕಂಗಾಲಾಗಿದ್ದರು. ನಂತರ ವಿಷಯ ಮನೆಗೆ ತಿಳಿಸಿ ಮರಳಿ ಬರಲು ಹಣ ಪಡೆದುಕೊಂಡು ಹೋಟೆಲ್ ಬಿಲ್ ತುಂಬಿ ಹಿಂತಿರುಗಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ರೊಚ್ಚಿಗೆದ್ದ ಪಾಲಕರು, ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಈ ಬಗ್ಗೆ ವಂಚನೆಗೊಳಗಾದ ವಿದ್ಯಾರ್ಥಿ ಜಲವಳ್ಳಿ ನಂದನ ಜಟ್ಟಿ ನಾಯ್ಕ ಸಂಸ್ಥೆಯ ಪ್ರಾರ್ಚಾಯ ಗಂಗಾಧರನ್‌ ವಿರುದ್ಧ ಹೊನ್ನಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇಂದು ಸಹ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ. ಯಾವ ರೀತಿಯಾಗಿ ಪೊಲೀಸರು ನ್ಯಾಯ ಒದಗಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಕಾಲೇಜಿಗೆ ವಿದ್ಯಾರ್ಥಿಗಳು, ಪಾಲಕರು ಜಮಾಯಿಸುತ್ತಿದ್ದಂತೆ ಬಂದೋಬಸ್ತ್ ಏರ್ಪಡಿಸಲಾಗಿದೆ

Read These Next

ಪ್ರಕೃತಿ ರಕ್ಷಣೆಗೆ  ಪ್ರತಿಯೊಬ್ಬರು ಎರಡು ಸಸಿಗಳನ್ನು ನೆಡಬೇಕು: ನೀಲಕಂಠಮಠದ ಮಹಾಸ್ವಾಮಿ

ಜೂನ್ ತಿಂಗಳು ಮುಗಿಯುತ್ತಾ ಬಂತು. ಆದರೆ ಸಮರ್ಪಕವಾದ ಮಳೆ ಮಾತ್ರ ಈವರೆಗೂ ಆಗಿಲ್ಲ. ಇದಕ್ಕೆಲ್ಲ ಅರಣ್ಯ ಸಂಪತ್ತಿನ ನಾಶವೇ ಕಾರಣ. ...