ಅಕ್ರಮವಾಗಿ ಸಾಗವಾನಿ ತುಂಡುಗಳು ಸಾಗಾಟ ಆರೋಪಿ ಬಂದನ 50 ಸಾವಿರ ಮೌಲ್ಯದ ಕಟ್ಟಿಗೆ ವಶ

Source: sonews | By Staff Correspondent | Published on 15th August 2019, 11:03 PM | Coastal News | Don't Miss |

ಮುಂಡಗೋಡ :  ಅಕ್ರಮವಾಗಿ ಬೈಕ್ ಮೇಲೆ ಸುಮಾರು 50 ಸಾವಿರ ರೂಪಾಯಿ ಬೆಲೆಬಾಳುವ ಸಾಗವಾನಿ ತುಂಡಗಳನ್ನು ಸಾಗಿಸುತ್ತಿದ್ದಾಗ   ಅರಣ್ಯ ಇಲಾಖೆ ಸಿಬ್ಬಂದಿ  ದಾಳಿ ನಡೆಸಿ ಆರೋಪಿ ಸಮೇತ ಸಾಗವಾನಿ ತುಂಡುಗಳನ್ನು ವಶಪಡಿಸಿಕೊಂಡ ಘಟನೆ ಕಾತೂರ ವಲಯದ ನಡೆದಿದೆ.

ಬಂದಿತ ಆರೋಪಿಯನ್ನು ಕೊಡಂಬಿ ಗ್ರಾಮದ ಶಿವಪುತ್ರಯ್ಯ ಕಮ್ಮನ್ನಮಠ ಎಂದು ಹೇಳಲಾಗಿದೆ ಪರಾರಿಯಾದ  ಆರೋಪಿಯನ್ನು ರಾಮಾಪುರ ಗ್ರಾಮದ ರಿಯಾಜ ಡೊಳ್ಳೇಶ್ವರ ಎಂದು ಹೇಳಲಾಗುತ್ತಿದೆ.

ಆರೋಪಿಗಳು ಹುಡೇಲಕೊಪ್ಪ ಗ್ರಾಮದ ಅರಣ್ಯದಲ್ಲಿ ಬುಧವಾರ ಬೆಳಿಗ್ಗೆ ಬೆಲೆಬಾಳುವ ಸಾಗುವಾನಿ ಮರಗಳನ್ನು ಕಡಿದು ತುಂಡಗಳನ್ನು ಮಾಡಿ ಬೈಕ್‍ನಲ್ಲಿ ಸಾಗಿಸುತ್ತಿದ್ದಾಗ   ಖಚಿತ ಮಾಹಿತಿ ಪಡೆದ  ವಲಯ ಅರಣ್ಯಾಧಿಕಾರಿ ಅಜೀತ ನಾಯ್ಕ್ ತಮ್ಮ ಸಿಬ್ಬಂದಿಯೋಡನೆ ರಾಮಾಪುರ ಕೋಡಂಬಿ ರಸ್ತೆಯ ಹತ್ತಿರ ದಾಳಿ ಮಾಡಿ ಸುಮಾರ ಐವತ್ತು ಸಾವಿರ ರೂ ಮೌಲ್ಯದ ಸಾಗವಾನಿ ತುಂಡುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ದ್ವೀಚಕ್ರವಾಹನ ವಶಪಡಿಸಿಕೊಂಡು. ಒಬ್ಬ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ. ಇನ್ನೊಬ್ಬ ಆರೋಪಿ ತಲೆ ಮರಿಸಿಕೊಡಿದ್ದು ಈ ಆರೋಪಿ ಪತ್ತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳು  ಬಲೆ ಬಿಸಿದ್ದಾರೆ. 

ಎಸಿಎಫ್ ಮಾರ್ಗದರ್ಶನದಲ್ಲಿ ಕಾತೂರ ವಲಯ ಅರಣ್ಯಧಿಕಾರಿ ಅಜಯ ನಾಯ್ಕ ನೇತೃತ್ವದಲ್ಲಿ  ಸಹಾಯಕ ವಲಯಅರಣ್ಯಾಧಿಕಾರಿಗಳಾದ ಶ್ರೀಶೈ ಐನಾಪುರ, ನಂದೀಶ ಶೆಟ್ಟಿ, ಮಂಜುನಾಥ ದೊಡ್ಡಣ್ಣನವರ, ಸೇರಿದಂತೆ ಇತರ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು

  

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...