ರೂಪಾಯಿ 50 ಸಾವಿರ ಮೌಲ್ಯದ ವಿಮೆ. ಜಿ. ಶಂಕರ್ ಆರೋಗ್ಯ ಸುರಕ್ಷಾ ಕಾರ್ಡ್ ನೋಂದಣಿಗೆ ನವೆಂಬರ್ 29 ಕೊನೆಯ ದಿನ.

Source: SO News | By Laxmi Tanaya | Published on 25th November 2020, 9:04 PM | Coastal News | Don't Miss |

ಕಾರವಾರ : ಉಡುಪಿಯ‌ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್  ಪ್ರವರ್ತಕರಾದ ನಾಡೋಜ ಡಾ ಜಿ. ಶಂಕರ್ ರವರು ಮಣಿಪಾಲ ಸಿಗ್ನಾ ಹೆಲ್ತ್ ಗ್ರೂಪ್ ಇನ್ಸುರೆನ್ಸ್ ಕಂಪೆನಿ ಇದರ ಸಹಯೋಗದೊಂದಿಗೆ, ಮಾಹೆ ಮಣಿಪಾಲ ಇವರ ಸಂಪೂರ್ಣ ಸಹಕಾರದೊಂದಿಗೆ ಹೊಸದಾಗಿ ಜಿ ಶಂಕರ್ ಆರೋಗ್ಯ ಸುರಕ್ಷಾ ಕಾರ್ಡ್ ಯೋಜನೆಯನ್ನು ಪ್ರಾರಂಭಿಸಿದ್ದಾರೆ.

ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡ  ಪತ್ರಿಕಾಗೋಷ್ಠಿಯಲ್ಲಿ ಜಿ ಶಂಕರ ಟ್ರಸ್ಟ್ ಪ್ರತಿನಿಧಿ ಶಿವರಾಮ ಮೊಗೇರ ಮಾತನಾಡಿದರು.

ಜಾತಿ ಮತ ಬೇದವಿಲ್ಲದೆ ಬಡ ಜನರ ಸ್ವಾಸ್ಥ್ಯಕ್ಕಾಗಿ ಜಿ ಶಂಕರ್ ರವರು ಹಮ್ಮಿಕೊಂಡ ಆರೋಗ್ಯ ವಿಮಾ ಯೋಜನೆ ಇದಾಗಿದ್ದು ಮಣಿಪಾಲ ಸಮೂಹ ಅಸ್ಪತ್ರೆಗಳಿಗೆ ಮಾತ್ರ ಈ ಯೋಜನೆ ಸೀಮಿತವಾಗಿದೆ. ಕಡಿಮೆ ವರಮಾನವಿರುವ ಕುಟುಂಬಗಳಿಗೆ ಈ ಯೋಜನೆ ವರದಾನವಾಗಲಿದ್ದು, ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಹೊರರೋಗಿ ವಿಭಾಗದ ವೈದ್ಯಕೀಯ ಚಿಕಿತ್ಸೆಯಲ್ಲಿ 70%, ಉಡುಪಿ ಟಿ.ಎಂ.ಎ.ಪೈ ಆಸ್ಪತ್ರೆಯ ಆಸ್ಪತ್ರೆಯ ಹೊರರೋಗಿ ವಿಭಾಗದ ವೈದ್ಯಕೀಯ ಚಿಕಿತ್ಸೆಯಲ್ಲಿ 60%, ಮಂಗಳೂರು ಅತ್ತಾವರ ಕೆ.ಎಂ.ಸಿ ಆಸ್ಪತ್ರೆಯ ಹೊರರೋಗಿ ವಿಭಾಗದ ವೈದ್ಯಕೀಯ ಚಿಕಿತ್ಸೆಯಲ್ಲಿ 100. ರಿಯಾಯಿತಿ ಇರುತ್ತದೆ. ಈ ಹಿಂದಿನ ಆರೋಗ್ಯ ಸುರಕ್ಷಾ ಯೋಜನೆಯಲ್ಲಿ ಹಿಸ್ಟಿರೆಕ್ಟೊಮಿ, ಅಪೆಂಡೆಕ್ಟಮಿ, ನಾರ್ಮಲ್ ಡೆಲಿವರಿ, ಡೆಲಿವರಿ ಸಿ-ಸೆಕ್ಷನ್ ಮುಂತಾದ ಶಸ್ತ್ರ ಚಿಕಿತ್ಸೆಗಳಿಗೆ ರೂಪಾಯಿ 25,000/ ಮಾತ್ರ ವಿಮಾ ಕ್ಲೇಮು ಪಡೆಯುವ ಮೀತಿ ಇತ್ತು. ಆದರೆ ಈ ಹೊಸ ಯೋಜನೆಯಲ್ಲಿ   ಯಾವುದೇ ಚಿಕಿತ್ಸೆಗೆ ಪ್ರತ್ಯೇಕ ಮಿತಿ ಇಲ್ಲದೆ 10% ಕೋಪೇಯೊಂದಿಗೆ ರೂಪಾಯಿ 50 ಸಾವಿರ ಕ್ಷೇಮು ಪಡೆಯುವ ಆರೋಗ್ಯ ವಿಮಾ ಯೋಜನೆ ಇದಾಗಿದ್ದು ವಿಮಾ ಕುಟುಂಬದ ಸದಸ್ಯನು ಯಾವುದೇ ರೋಗದ ಚಿಕಿತ್ಸೆಗೆ ಒಳರೋಗಿಯಾಗಿ ದಾಖಲಾದಲ್ಲಿ ನಗದು ರಹಿತವಾಗಿ ಚಿಕಿತ್ಸೆ ಪಡೆಯುವ ಸೌಲಭ್ಯ ಈ ಕಾರ್ಡಿನಲ್ಲಿರುತ್ತದೆ ಎಂದು ತಿಳಿಸಿದರು.

ವಿಮಾ ಅವಧಿಯಲ್ಲಿ ವಿಮೆ ಮಾಡಿದ ಕುಟುಂಬದ ಯಾವುದೇ ಸದಸ್ಯನು ಅಪಘಾತದಲ್ಲಿ ಮೃತಪಟ್ಟಲ್ಲಿ ರೂಪಾಯಿ 50 ಪರಿಹಾರ ಪಡೆಯಬಹುದಾಗಿದ್ದು, ಪ್ರತಿ ಡಯಾಲಿಸಿಸ್ ಗೆ  1,000/- ಕ್ಲೆಮು ಸಿಗಲಿದ್ದು ವರ್ಷಕ್ಕೆ 50 ಬಾರಿ ಡಯಾಲಿಸಿಸ್‌ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ತಿಳಿಸಿದರು. 

ನವಜಾತ ಶಿಶುವಿನ ಚಿಕಿತ್ಸೆ ಮತ್ತು ಆರೈಕೆಗೂ ಕೂಡಾ ಈ ಯೋಜನೆ ಅನ್ವಯವಾಗಲಿದ್ದು ನಾಳೆಯ ಆರೋಗ್ಯ ರಕ್ಷಣೆಗೆ ಇಂದಿನ ಬುನಾದಿಯಾಗಿರುತ್ತದೆ.

ಯಾವುದೇ ಷರತ್ತುಗಳಿಲ್ಲದೆ ಎಲ್ಲರಿಗೂ ಹೊಸದಾಗಿ ಕಾರ್ಡ್ ಪಡೆಯಲು ಈ ಯೋಜನೆಯಲ್ಲಿ ಅವಕಾಶವಿದ್ದು, ಈ ಹಿಂದೆ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ಹೊಂದಿದ್ದ ಯಾವುದೇ ಕ್ಲಸ್ಟರ್ನ ಸದಸ್ಯರೂ ಜಿ ಶಂಕರ್ ಆರೋಗ್ಯ ಸುರಕ್ಷಾ ಕಾರ್ಡ್ ಪಡೆಯಬಹುದಾಗಿದೆ. ಈ ಹಿಂದೆ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ಹೊಂದಿದ್ದವರು ಹಳೆ ಕಾರ್ಡ್, ಆಧಾರ್ ಕಾರ್ಡ್ ಮತ್ತು ಕುಟುಂಬದ ರೇಷನ್ ಕಾರ್ಡ್ ಪ್ರತಿಯನ್ನು ಹಾಗೂ ಹೊಸದಾಗಿ ಕಾರ್ಡ್ ಮಾಡಲಿಚ್ಚಿಸುವವರು ಆಧಾರ್ ಕಾರ್ಡ್ ಮತ್ತು ಕುಟುಂಬದ ರೇಷನ್ ಕಾರ್ಡ್ ಪ್ರತಿಯನ್ನು ಕೊಟ್ಟು ನವೆಂಬರ್ 29 ನೋಂದಣಿ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ. 

ನೋಂದಣಿಯನ್ನ ಕಾರವಾರ ಬೈತಖೋಲನಲ್ಲಿರುವ ಪರ್ಶಿಯನ್ ಬೋಟ್ ಯುನಿಯನ್ ಇಲ್ಲಿ ಸಂಪರ್ಕಿಸಲು ಕೋರಿದ್ದಾರೆ.
ಸಂಪರ್ಕ ಸಂಖ್ಯೆ ವಾಮನ ಹರಿಕಂತ್ರ 9448136608, ಸಂಜಯ್ ಖಾರ್ವಿ 9448423892.

ಪತ್ರಿಕಾಗೋಷ್ಠಿಯಲ್ಲಿ ಮೀನುಗಾರ ಮುಖಂಡರಾದ ಗಣಪತಿ ಮಾಂಗ್ರೆ, ವಾಮನ ಹರಿಕಂತ್ರ, ಸಂಜಯ್ ತಾಂಡೇಲ ಉಪಸ್ಥಿತರಿದ್ದರು

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...