ಮದುವೆಗೆ 50 ಜ‌ನರಿಗಷ್ಟೆ ಅನುಮತಿ. ನಿಯಮ ಮೀರಿದರೇ ಕ್ರಮ. ಮಂಗಳೂರು ಡಿಸಿ ಮತ್ತು ಪೊಲೀಸ್ ಕಮಿಷನರ್ ಮಾಹಿತಿ.

Source: SO News | By Laxmi Tanaya | Published on 21st April 2021, 7:35 PM | Coastal News | Don't Miss |

ಮಂಗಳೂರು : ರಾಜ್ಯ ಸರ್ಕಾರದಿಂದ ಹೊಸ ಕೋವಿಡ್ ಗೈಡ್ ಲೈನ್ಸ್ ಪ್ರಕಟಗೊಳಿಸಿದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮತ್ತು ಕಮಿಷನರ್ ಶಶಿಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿದರು.

ವೀಕೆಂಡ್ ಕರ್ಫ್ಯೂ ಸಮಯದಲ್ಲಿ ನಿಗದಿಯಾಗಿದ್ದ ಮದುವೆ ನಡೆಸಲು ಅನುಮತಿ ಇದೆ. ಆದರೆ ಕೇವಲ 50 ಜನರು ಮಾತ್ರ ಮದುವೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿದೆ ಎಂದರು.
ಇದಕ್ಕಾಗಿ ಮದುವೆ ಮನೆಯವರು 50 ಜನರ ಪಟ್ಟಿ ತಯಾರಿಸಬೇಕು. ಬಳಿಕ ಆ ಪಟ್ಟಿಯನ್ನು ಸ್ಥಳೀಯಾಡಳಿತಕ್ಕೆ ತೋರಿಸಿ ಅಪ್ರೂವ್ ಮಾಡಿಸಿಕೊಳ್ಳಬೇಕು.  ಆ 50 ಜನರ ಅನುಮತಿ ಪಡೆದ ಪತ್ರ ಮತ್ತು ಮದುವೆ ಆಮಂತ್ರಣ ಪತ್ರಿಕೆ ಹಾಗೂ ಮದುವೆಗೆ ಹೋಗುವವರ ಐಡಿ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ಈ ಮೂರು ದಾಖಲೆಗಳನ್ನು ವಾಟ್ಸ್ ಅಪ್ ನಲ್ಲಿ ಪೊಲೀಸರಿಗೆ ತೋರಿಸಿ ಪ್ರಯಾಣಿಸಬಹುದಾಗಿದೆ. ಆದರೆ ಮದುವೆ ಆಮಂತ್ರಣ ಪತ್ರಿಕೆಯ ನೈಜ ಪ್ರತಿ ಪ್ರಯಾಣದ ವೇಳೆ ಕೈಯ್ಯಲ್ಲಿರಲೇಬೇಕು.

ಮದುವೆಗೆ ಗೆಸ್ಟ್ ಲಿಸ್ಟ್ ನಲ್ಲಿರುವವರ ಐಡಿ ತೋರಿಸಿದರಷ್ಟೇ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುವುದು. ಇನ್ನು ಮದುವೆಗೆ ಹೋಗುವ ಕಾರಿನಲ್ಲಿ ಏಳೆಂಟು ಜನರನ್ನು ತುಂಬಿದ್ರೆ ಪ್ರಯಾಣಿಸಲು ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ದೇವಸ್ಥಾನದಲ್ಲಿ ಮದುವೆ ನಡೆಯುವುದಾದರೆ 50 ಜನರನ್ನು ಸೇರಿಸಿ ಮಾಡಬಹುದು. ಈಗಾಗಲೇ ಮಾಡಿದ ನಿಯಮದಂತೆ ದೇವಸ್ಥಾನಗಳಲ್ಲಿ ‌ಮದುವೆಗೆ ಅನುಮತಿ ನೀಡಲಾಗಿದೆ.
ಮದುವೆ ಫೋಟೋಗ್ರಾಫರ್ಸ್, ಅರ್ಚಕರು ಎಲ್ಲರೂ 50 ಜನರ ಲಿಸ್ಟ್ ನಲ್ಲೇ ಬರುತ್ತಾರೆ ಎಂದು ಮಾಹಿತಿ ನೀಡಿದ ಅವರು,
ದೇವಸ್ಥಾನದ ಧಾರ್ಮಿಕ ಕಾರ್ಯಗಳನ್ನು ಅರ್ಚಕರು ಸೇರಿಕೊಂಡು ಮಾಡಬೇಕೆಂದರು.

ಆದರೆ ಯಾವುದೇ ಸಾರ್ವಜನಿಕರು ಈ ಆಚರಣೆಯಲ್ಲಿ ಭಾಗಿಯಾಗಲು ನಿಷೇಧವಿದೆ. ಈ ಆದೇಶ ಈಗಲೇ ಜಿಲ್ಲೆಯ ಎಲ್ಲಾ ದೇವಸ್ಥಾನಗಳಲ್ಲಿ ಜಾರಿಯಾಗಲಿದೆ.
ಅವಶ್ಯಕ ಪಾಸ್ ಮತ್ತು ಐಡಿ ಕಾರ್ಡ್ ಬಳಸಿ ಕುಟುಂಬದ ಜೊತೆ ಸಂಚರಿಸಲು ಅವಕಾಶವಿಲ್ಲ. ಯಾರ ಹೆಸರಿನಲ್ಲಿ ಪಾಸ್ ಮತ್ತು ಐಡಿ ಕಾರ್ಡ್ ಇದೆ, ಅವರಿಗಷ್ಟೇ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಿದರು.

ವೀಕೆಂಡ್ ‌ಕರ್ಫ್ಯೂ ಸಮಯದಲ್ಲಿ ಬೆಳಿಗ್ಗೆ 6 ರಿಂದ 10ರವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ಇದೆ. ಅದರೆ ಈ ವಸ್ತು ಖರೀದಿ ಅವರ ಮನೆಯ ಅಕ್ಕಪಕ್ಕದಲ್ಲೇ ಖರೀದಿಸಬೇಕು. ವಾಹನ ಬಳಸಿ ಅಗತ್ಯ ವಸ್ತು ಖರೀದಿಗೆ ಹೋಗೋದಾದರೂ ಅದಕ್ಕೆ ಸೂಕ್ತ ಕಾರಣ ಬೇಕು.‌ ಅದನ್ನು ದುರುಪಯೋಗ ಪಡಿಸಿಕೊಂಡರೆ ಅಂಥವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಗತ್ಯ ವಸ್ತುಗಳು ಸಹಜವಾಗಿ ನಡೆದುಕೊಂಡು ಹೋಗುವ ಅಂತರದಲ್ಲೇ ಸಿಗುತ್ತದೆ ಎಂದು ಹೇಳಿದರು.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...