ಮಾಹಿತಿ ನೀಡುವ ಬದಲು ಮನರಂಜಿಸುತ್ತಿರುವ ಮಾಧ್ಯಮ ಕೇತ್ರ- ಸಿಬಂಥಿ ಪದ್ಮನಾಭ

Source: sonews | By Staff Correspondent | Published on 13th October 2018, 4:29 PM | Coastal News | State News | Don't Miss |

•    5 ದಿನಗಳ ಮಾಧ್ಯಮ ಕಾರ್ಯಾಗಾರಕ್ಕೆ ಚಾಲನೆ
•    50 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕಾಯಾಗಾರದಲ್ಲಿ ಭಾಗಿ

ಭಟ್ಕಳ: ಮಾಧ್ಯಮಗಳ ಪ್ರಮುಖ ಕೆಲಸ ಮಾಹಿತಿ, ಶಿಕ್ಷಣ, ಮನೋರಂಜನೆಯಾಗಿದ್ದು ಇಂದಿನ ಮಾಧ್ಯಮಗಳು ಮಾಹಿತಿ ನೀಡುವುದನ್ನು ಬಿಟ್ಟು ಕೇವಲ ಮನರಂಜನೆಗೆ ಮಾತ್ರ ಸೀಮಿತಗೊಂಡಿವೆ ಎಂದು ತುಮಕೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಸಿಬಂಥಿ ಪದ್ಮನಾಭ ಹೇಳಿದರು. 

ಅವರು ಶನಿವಾರ ಇಲ್ಲಿನ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯು ಮಂಗಳೂರು ಮಾಧ್ಯಮ ಕೇಂದರ ಸಹಯೋಗದೊಂದಿಗೆ ಆಯೋಜಿಸಿದ್ದ ಐದು ದಿನಗಳ ಪತ್ರಿಕೋದಮ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು. 

ಹೆಚ್ಚಿನ ಮಾಧ್ಯಮಗಳು ದೇಶದ ಪ್ರಮುಖ ಸಮಸ್ಯೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಬದಲು, ಅನಾವಶ್ಯಕ ವಿಷಯಗಳ ಚರ್ಚಿಸಿ ಜನರ ಗಮನವನ್ನು ಬೆರೆಡೆಗೆ ಸೆಳೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕಳೆದ 15ವರ್ಷಗಳಿಂದ ಇದೇ ತೆರನಾದ ಟ್ರೆಂಡ್ ರೂಪಿಸಲಾಗುತ್ತಿದೆ, ಇದರಿಂದಾಗಿ ಮಾಧ್ಯಮ ಕ್ಷೇತ್ರ ಇಂದು ತನ್ನತನವನ್ನು ಕಳೆದುಕೊಳ್ಳುತಲಿದ್ದು ವಿದ್ಯಾರ್ಥಿಗಳು ತಮ್ಮನ್ನು ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಸರಿದಿಸೆಯಲ್ಲಿ ಕೆಲಸ ಮಾಡುವುವಂತೆ ಪ್ರೇರೇಪಿಸಿದರು. 

ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಮುಖ್ಯ ಖಾಜಿ ಮೌಲಾನ ಕ್ವಾಜಾ ಮುಹಿದ್ದೀನ್ ಅಕ್ರಮಿ ನದ್ವಿ ಮದನಿ ಮಾತನಾಡಿ, ಇಸ್ಲಾಮ್ ಧರ್ಮವು ಮಾಧ್ಯಮ ಕ್ಷೇತ್ರಕ್ಕೆ ಪ್ರಮುಖ ಆಧ್ಯತೆ ನೀಡಿದ್ದು ಇಂದಿನ ಯುವ ಸಮೋಹ ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು. 

ಕಾರ್ಯಾಗಾರದ ಸಂಚಾಲಕ ಮಂಗಳೂರು ಮಾಧ್ಯಮ ಕೇಂದ್ರ ನಿದೇರ್ಶಕ ಅಬ್ದುಸ್ಸಲಾಮ್ ಪುತ್ತಿಗೆ ಮಾತನಾಡಿ, ಕಾರ್ಯಾಗಾರದಲ್ಲಿ ಪಾಲಿಸಬೇಕಾದ ನಿಯಮಗಳನ್ನು ವಿವರಿಸಿ ಮಾಧ್ಯಮ ಕ್ಷೇತ್ರದ ಮಹತ್ವದ ಬಗ್ಗೆ ತಿಳಿಸಿದರು. 
ತಂಝೀಮ್ ಸಂಸ್ಥೆಯ ಮಾಧ್ಯಮ ಸಮಿತಿಯ ಸಂಚಾಲಕ ಅಫ್ತಾಬ್ ಹುಸೇನ್ ಕೋಲಾ ಪ್ರಸ್ತಾವಿಕವಾಗಿ ಮಾತನಾಡಿ, ಐದು ದಿನಗಳ ಈ ಕಾರ್ಯಾಗಾರವು ಕೇವಲ ವಿದ್ಯಾರ್ಥಿಗಳನ್ನು ಮಾಧ್ಯಮ ರಂಗವನ್ನು ಪರಿಚಯಿಸುವುದಾಗಿದ. ಇದರ ಮೂಲಕ ತಮ್ಮ ಮುಂದೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ವಿದ್ಯಾರ್ಥಿಗಳು ಮುಂದೆ ಬಂದಲ್ಲಿ ತಂಝೀಮ್ ಸಂಸ್ಥೆ ಅವಶ್ಯಕ ಸಲಹೆ ಹಾಗೂ ಸಹಕಾರ ನೀಡಿ ಉನ್ನತ ವ್ಯಾಸಂಗಕ್ಕಾಗಿ ಸ್ಕಾಲರ್‍ಶಿಪ್ ನೀಡಿ ಪ್ರೋತ್ಸಾಹಿಸಲಾಗುವುದು ಎಂದರು. 

ತಂಝೀಮ್ ಸಂಸ್ಥೆಯ ಅಧ್ಯಕ್ಷ ಮುಝಮ್ಮಿಲ್ ಖಾಝೀಯಾ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 

ವೇದಿಕೆಯಲ್ಲಿ ತಂಝೀಮ್ ಉಪಾಧ್ಯಕ್ಷರಾದ ಇನಾಯತುಲ್ಲಾ ಶಾಬಂದ್ರಿ, ಜಾಫರ್ ಮೊಹತೆಶಮ್, ಇನಾಯತುಲ್ಲಾ ಗವಾಯಿ ಮುಂತಾದವರು ಉಪಸ್ಥಿತರಿದ್ದು.

ಖಾಜಿ ಜಮಾಅತುಲ್ ಮುಸ್ಲಿಮೀನ್ ಮೌಲಾನ ಮುಹಮ್ಮದ್ ಇಖ್ಬಾಲ್ ಮುಲ್ಲಾ ನದ್ವಿ ಪ್ರಾರ್ಥನಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಮೌಲಾನ ಸೈಯ್ಯದ್ ಯಾಸಿರ್ ಬರ್ಮಾವರ್ ನದ್ವಿ ಕಾರ್ಯಕ್ರಮ ನಿರೂಪಿಸಿದರು. 
 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...