ಗಣೇಶ ವಿಸರ್ಜನೆ ವೇಳೆ ದುರಂತ; 30 ಮಂದಿ ಸಾವು; ಮಹಾರಾಷ್ಟ್ರ-19, ಹರ್ಯಾಣ-7, ಉ.ಪ್ರ.-3, ತೆಲಂಗಾಣದಲ್ಲಿ 1 ಬಲಿ

Source: Vb | By I.G. Bhatkali | Published on 11th September 2022, 2:13 PM | National News |

ಮುಂಬೈ: ಮಹಾರಾಷ್ಟ್ರ, ಹರ್ಯಾಣ, ಉತ್ತರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಶುಕ್ರವಾರ ಗಣೇಶ ವಿಗ್ರಹಗಳ ವಿಸರ್ಜನೆ ಸಂದರ್ಭದಲ್ಲಿ ಸಂಭವಿಸಿದ ದುರಂತಗಳಲ್ಲಿ ಕನಿಷ್ಠ 30 ಮಂದಿ ಮೃತಪಟ್ಟಿದ್ದಾರೆ.

ಮಹಾರಾಷ್ಟ್ರದಲ್ಲಿ ಗಣೇಶ ವಿಗ್ರಹಗಳ ವಿಸರ್ಜನೆ ವೇಳೆ ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ 14 ಜನರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ನಾಲ್ವರು, ಯಮಾಲ್, ಜಲಗಾಂವ್ ಮತ್ತು ಅಹದ್‌ ನಗರ ಜಿಲ್ಲೆಗಳಲ್ಲಿ ತಲಾ ಇಬ್ಬರು, ಪುಣೆಯ ಗ್ರಾಮೀಣ ಭಾಗ, ಧುಳೆ, ಸತಾರ ಮತ್ತು ಸೊಲ್ಲಾಪುರದಲ್ಲಿ ತಲಾ ಒಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ನಾಗುರದಲ್ಲಿ ಗಣೇಶ ವಿಸರ್ಜನೆ ಸಂದರ್ಭ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದರೆ, ಶುಕ್ರವಾರ ರಾತ್ರಿ ಥಾಣೆ ನಗರದಲ್ಲಿ ಮಳೆಯ ನಡುವೆಯೇ ಗಣೇಶ ಮಂಟಪವೊಂದರ ಮೇಲೆ ಮರ ಬಿದ್ದು 55ರ ಹರೆಯದ ಮಹಿಳೆ ಮೃತಪಟ್ಟಿದ್ದಾರೆ. ಇತರ ನಾಲ್ವರು ಗಾಯಗೊಂಡಿದ್ದಾರೆ.

ರಾಜ್ಯದ ಕೆಲವು ಭಾಗಗಳಲ್ಲಿ ಗಣೇಶ ವಿಗ್ರಹಗಳ ಜಲಸ್ತಂಭನ ಸಂದರ್ಭದಲ್ಲಿ ಕೆಲವು ಕಾನೂನು ಮತ್ತು ಸುವ್ಯವಸ್ಥೆ ಸಂಬಂಧಿತ ಘಟನೆಗಳೂ ನಡೆದಿವೆ. ಅಹದ್ ನಗರ ಜಿಲ್ಲೆಯ ತೋಫಖಾನಾದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂದೆ ಮತ್ತು ಮಾಜಿ ಮುಖ್ಯಮಂತ್ರಿ ಉದ್ದವ ಠಾಣೆ ಅವರ ನೇತೃತ್ವದ ಶಿವಸೇನೆ ಬಣಗಳ ಬೆಂಬಲಿಗರು ಪರಸ್ಪರ ಹೊಡೆದಾಡಿ ಕೊಂಡಿದ್ದರೆ, ಜಲಗಾಂವ್‌ನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಜನರ ಗುಂಪೊಂದು ಮೇಯರ್ ಬಂಗಲೆಯ ಮೇಲೆ ಕಲ್ಲು ತೂರಾಟ ನಡೆಸಿದೆ. ಪುಣೆ ನಗರ, ಗ್ರಾಮೀಣ ಜಿಲ್ಲೆ ಮತ್ತು ಚಂದ್ರಾಪುರದಲ್ಲಿಯೂ ಜನರ ಗುಂಪುಗಳ ನಡುವೆ ಹೊಡೆದಾಟದ ಸಣ್ಣಪುಟ್ಟ ಘಟನೆಗಳು ವರದಿಯಾಗಿವೆ.

ಮುಂಬೈನಲ್ಲಿ ಹೆಚ್ಚಿನ ಗಣೇಶ ವಿಗ್ರಹಗಳನ್ನು ಗಿರ್ಗಾಂವ್ ಚೌಪಾಟಿಯ ಸಮುದ್ರದಲ್ಲಿ ವಿಸರ್ಜಿಸಲಾಗಿದೆ. ಶಿವಾಜಿ ಪಾರ್ಕ್, ಬಾಂದ್ರಾ, ಜುಹು ಮತ್ತು ಮಲಾಡ್ ಸೇರಿದಂತೆ ಇತರ ಹಲವಾರು ಬೀಚ್‌ಗಳಲ್ಲಿಯೂ ಗಣೇಶ ವಿಗ್ರಹಗಳನ್ನು ವಿಸರ್ಜಿಸಲಾಗಿದೆ.

ಕೋವಿಡ್ ನಿರ್ಬಂಧಗಳಿಂದಾಗಿ ಕಳೆದೆರಡು ವರ್ಷಗಳಿಂದ ಕಳೆಗುಂದಿದ್ದ ಗಣೇಶೋತ್ಸವವನ್ನು ಈ ಬಾರಿ ಭಾರೀ ಸಂಭ್ರಮದೊಂದಿಗೆ ಆಚರಿಸಲಾಗಿದೆ.

ಶನಿವಾರ ಬೆಳಗ್ಗೆವರೆಗೆ ಮುಂಬೈನಾದ್ಯಂತ 6,647 ಸಾರ್ವಜನಿಕ ಗಣೇಶ ಸೇರಿದಂತೆ 38,000ಕ್ಕೂ ಅಧಿಕ ಗಣೇಶ ವಿಗ್ರಹಗಳ ಜಲಸ್ತಂಭನ ನಡೆದಿದ್ದರೆ, ನಗರದ ಇನ್ನೂ ಹಲವು ಭಾಗಗಳಲ್ಲಿ ಗಣೇಶ ವಿಸರ್ಜನೆ ಮೆರ ವಣಿಗೆಗಳು ನಡೆಯುತ್ತಲೇ ಇದ್ದವು.ಗಣೇಶ ವಿಗ್ರಹಗಳ ಶೋಭಾಯಾತ್ರೆಗಳ ಸಂದರ್ಭ ಯಾವುದೇ ಅಹಿತಕರ ಘಟನೆಗಳು ವರದಿ ಯಾಗಿಲ್ಲ ಎಂದು ಬೃಹನ್ಮುಂಬೈ ಮಹಾ ನಗರಪಾಲಿಕೆ (ಬಿಎಂಸಿ)ಯ ಅಧಿಕಾರಿಯೋ ರ್ವರು ತಿಳಿಸಿದರು.


ಹರ್ಯಾಣದಲ್ಲಿ ಏಳು ಜನರ ಸಾವು:
ಅತ್ತ ಹರ್ಯಾಣದಲ್ಲಿ ಶುಕ್ರವಾರ ಗಣೇಶ ಎಗ್ರಹಗಳ ವಿಸರ್ಜನೆಸಂದರ್ಭ ಸೋನಿಪತ್‌ ನಲ್ಲಿ ಮೂವರು ಮತ್ತು ಮಹೇಂದ್ರಗಡದಲ್ಲಿ ನಾಲ್ವರು ಸೇರಿದಂತೆ ಏಳು ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ರಾಯಗಡ ಜಿಲ್ಲೆಯ ಪನ್ವೆಲ್ ನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ವಿದ್ಯುತ್ ಜನರೇಟನ ಕೇಬಲ್ ತುಂಡಾದ ಪರಿಣಾಮ ನಾಲ್ವರು ಮಕ್ಕಳು ಸೇರಿದಂತೆ ಕನಿಷ್ಠ 11 ಜನರು ವಿದ್ಯುದಾಘಾತದಿಂದ ಗಾಯಗೊಂಡಿದ್ದಾರೆ.

ಉ.ಪ್ರ.ದಲ್ಲಿ ಮೂವರು, ತೆಲಂಗಾಣದಲ್ಲಿ ಓರ್ವ ಬಲಿ:
ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯ ಸಫಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪರಿಯಾರ್ ಗ್ರಾಮದಲ್ಲಿ ಶುಕ್ರವಾರ ಗಣೇಶ ವಿಸರ್ಜನೆ ಸಂದರ್ಭ ಇಬ್ಬರು ಮಕ್ಕಳು ಸೇರಿದಂತೆ ಮೂವರು ಗಂಗಾನದಿಯಲ್ಲಿ ಮುಳುಗಿ ಮೃತಪಟ್ಟಿದ್ದರೆ, ತೆಲಂಗಾಣದ ಹೈದರಾಬಾದ್ ನಲ್ಲಿ 20ರ ಹರೆಯದ ವಿದ್ಯಾರ್ಥಿಯೋರ್ವ ಗಣೇಶ ವಿಗ್ರಹವನ್ನು ಹೊತ್ತಿದ್ದ ಲಾರಿಯ ಹಿಂದಿನ ಚಕ್ರದಡಿ ಸಿಲುಕಿ ಸಾವನ್ನಪ್ಪಿದ್ದಾನೆ.

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...