ಸೋಂಕು ಹರಡುವಿಕೆ ತಡೆಗಟ್ಟುವಲ್ಲಿ ದಿಟ್ಟ ಹೆಜ್ಜೆಗಳನ್ನಿಟ್ಟ ಜಿಲ್ಲಾಡಳಿತ; ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ

Source: S.O. News Service | By I.G. Bhatkali | Published on 19th April 2020, 12:28 AM | Coastal News | Special Report |

ಕಾರವಾರ: ವಿದೇಶದಿಂದ ಅತಿ ಹೆಚ್ಚು ಜನ ಜಿಲ್ಲೆಗೆ ವಾಪಸ್ಸಾಗಿದ್ದರೂ, ಭಟ್ಕಳದ 10 ಮಂದಿಯಲ್ಲಿ ಮಾತ್ರ ಕೋವಿಡ್- 19 ಸೋಂಕು ಇರುವುದು ದೃಢಪಟ್ಟಿದೆ. ಇದೊಂದೇ ಪಟ್ಟಣದಲ್ಲಿ ಸೋಂಕಿತರಿದ್ದು, ಜಿಲ್ಲೆಯ ಬೇರೆ ಯಾವ ತಾಲ್ಲೂಕಿಗೂ ಸೋಂಕು ಹರಡದಂತೆ ಕಣ್ಗಾವಲಿಟ್ಟು ಕಾಯುವಲ್ಲಿ ಜಿಲ್ಲಾಡಳಿತ ಸದ್ಯದ ಮಟ್ಟಿಗೆ ಯಶಸ್ವಿಯಾಗಿದೆ. ಇದಕ್ಕೆ ಜಿಲ್ಲಾ ಮಟ್ಟದ ‘ತ್ರಿಮೂರ್ತಿ’ಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಮಹಾಮಾರಿ ಕೊರೋನಾಕ್ಕೆ ಇಡೀ ಜಗತ್ತೇ ತಲ್ಲಣಗೊಂಡಿದೆ. ಕೊರೋನಾ ದಾಳಿಯಿಂದಾಗಿ ರಾಜ್ಯ ಕೂಡ ತತ್ತರಿಸಿ ಹೋಗಿದೆ. ಇತ್ತೀಚಿಗಷ್ಟೇ ಕೇಂದ್ರ ಸರ್ಕಾರ ಸೋಂಕಿತರ ಸಂಖ್ಯೆಗಳ ಆಧಾರದ ಮೇಲೆ ಹಾಗೂ ಜಿಲ್ಲೆಗಳಲ್ಲಿ ಸೋಂಕು ನಿಯಂತ್ರಣಕ್ಕಾಗಿ ಕೈಗೊಂಡಿರುವ ಕ್ರಮಗಳ ಆಧಾರದ ಮೇಲೆ ಜಿಲ್ಲೆಗಳನ್ನು ಮೂರು ವಿಧಗಳಲ್ಲಿ ವರ್ಗೀಕರಿಸಲಾಗಿದೆ. ರಾಜ್ಯದಲ್ಲೂ ಎಂಟು ಜಿಲ್ಲೆಗಳು

ಬೆನ್ನೆಲುಬಾದವರು ಇವರು...
ಜಿಲ್ಲಾ ಅಧಿಕಾರಿಗಳು ಯಾವುದೇ ಸೂಚನೆ, ಮಾರ್ಗದರ್ಶನ, ಆದೇಶಗಳನ್ನು ನೀಡಿದರೂ ಅದನ್ನು ಚಾಚೂತಪ್ಪದೆ ಪಾಲಿಸುವವರು ಅಧೀನ ಅಧಿಕಾರಿ, ಸಿಬ್ಬಂದಿ. ಈ ನಿಟ್ಟಿನಲ್ಲಿ ನಮ್ಮ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ ಜಿಲ್ಲಾ ಅಧಿಕಾರಿಗಳಿಗೆ ಬೆನ್ನೆಲುಬಾಗಿ ನಿಂತು ಹಗಲಿರುಳು ಕೊರೋನಾ ತಡೆಗಾಗಿ ಕಾರ್ಯನಿರ್ವಹಿಸಿದ್ದಾರೆ. 
ಜಿಲ್ಲೆಯ ಎಲ್ಲ ವೈದ್ಯಕೀಯ ಸಿಬ್ಬಂದಿ, ಪೆÇಲೀಸರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಉಪವಿಭಾಗ, ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಧಿಕಾರಿಗಳು, ಅಗತ್ಯ ವಸ್ತುಗಳ ಪೂರೈಕೆದಾರರು, ಇನ್ನೂ ಹಲವು ಇಲಾಖೆಯ, ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರು ಕೂಡ ಅಭಿನಂದನಾರ್ಹರು.

ರೆಡ್‍ಝೋನ್‍ನಲ್ಲಿದ್ದು, ಉತ್ತರ ಕನ್ನಡ ಈ ಝೋನ್‍ನಿಂದ ಪಾರಾಗಿ ಆರೆಂಜ್ ಝೋನ್‍ಗೆ ಇಳಿದಿದೆ. ಇದು ಜಿಲ್ಲೆಯ ಜನರಿಗೆ ನೆಮ್ಮದಿಯ ಸುದ್ದಿಯೇ ಆದರೂ, ಇದರ ಹಿಂದೆ ಹಗಲಿರುಳು ದುಡಿದ ಜಿಲ್ಲೆಯ ನೂರಾರು ಅಧಿಕಾರಿಗಳ ಶ್ರಮವೂ ಅಡಗಿದೆ.

ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ರೋಶನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅವರು ಜಿಲ್ಲೆಯ ರಕ್ಷಾ ಕವಚದಂತೆ ಹಗಲಿರುಳು ತಮ್ಮ ಸಿಬ್ಬಂದಿಯೊಂದಿಗೆ ಸೋಂಕು ಹರಡುವಿಕೆ ತಡೆಗಟ್ಟುವ ಹಾಗೂ ಜನರ ಆತಂಕಗಳನ್ನು ದೂರ ಮಾಡುವ ಕಾರ್ಯದಲ್ಲಿ ಶ್ರಮಿಸಿದ್ದಾರೆ. ರಾಜ್ಯದಲ್ಲಿ ಕೊರೋನಾ ಆತಂಕ ಶುರುವಾದಾಗಿನಿಂದಲೇ ಮುಂಜಾಗೃತೆ ವಹಿಸಿದ್ದ ಈ ತ್ರಿಮೂರ್ತಿಗಳ ತಂಡ, ದುಬೈನಿಂದ ಹೆಚ್ಚು ಜನರು ಆಗಮಿಸಿದ್ದ ಭಟ್ಕಳವನ್ನು ಸಂಪೂರ್ಣ ಲಾಕ್‍ಡೌನ್ ಮಾಡಿತ್ತು. ಮೊದಮೊದಲು ಇದು ಅನಗತ್ಯವೆಂದು ಭ್ರಮಿಸಿದ್ದ ಕೆಲವು ಭಟ್ಕಳಿಗರು, ಕ್ರಮೇಣವಾಗಿ ಜಿಲ್ಲಾಡಳಿತದ ಕಾರ್ಯಕ್ಕೆ ಸಹಕಾರ ನೀಡಿ, ಶ್ಲಾಘಿಸಿದರು. 

ನಂತರದಲ್ಲಿ ಭಟ್ಕಳದಲ್ಲಿ ಪ್ರಕರಣಗಳು ಹೆಚ್ಚುತ್ತಾ ಹೋದಂತೆ ಜಿಲ್ಲೆಯಲ್ಲೂ ಲಾಕ್‍ಡೌನ್ ಜಾರಿ ಮಾಡಲಾಯಿತು. ವಾಹನಗಳು ರಸ್ತೆಗೆ ಇಳಿಯದಂತೆ ಕಣ್ಗಾವಲಿಡಲು ಶಿವಪ್ರಕಾಶ್ ದೇವರಾಜು ಅವರು ತಮ್ಮ ಅಧೀನ ಅಧಿಕಾರಿಗಳ ಕೈಗೆ ಡ್ರೋಣ್ ಕ್ಯಾಮೆರಾವನ್ನಿತ್ತು ಕಾರ್ಯನಿರ್ವಹಿಸಿದರು. ಸಿಇಒ ರೋಶನ್ ಅವರು ಸೋಂಕಿತ ಪ್ರದೇಶ, ರೆಡ್‍ಝೋನ್ ಎಂದು ಗುರುತಿಸಲ್ಪಟ್ಟಿದ್ದರೂ ಭಟ್ಕಳಕ್ಕೆ ಭೇಟಿ ಮಾಡಿದರು. ಹೆಚ್ಚುತ್ತಿದ್ದ ಸೋಂಕಿತರಿಂದಾಗಿ ಭಯಭೀತರಾಗಿದ್ದ ಅಲ್ಲಿನ ಅಧಿಕಾರಿ, ಸಿಬ್ಬಂದಿಗೆ ಧೈರ್ಯ ತುಂಬಿದರು. ಜನರಲ್ಲಿ ಜಾಗೃತಿ ಮೂಡಿಸಿದರು. ಸೋಂಕಿತರನ್ನು ಭಟ್ಕಳದಲ್ಲೇ ಇರಿಸಿದರೆ ಇನ್ನಷ್ಟು ಅಪಾಯ ಎಂದು ಎಚ್ಚೆತ್ತ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಅವರನ್ನು ಕಾರವಾರದ ನೌಕಾನೆಲೆಯ ಪತಂಜಲಿ ಆಸ್ಪತ್ರೆಯಲ್ಲಿರಿಸಲು ಕ್ರಮವಹಿಸಿದರು. ಸಾಕಷ್ಟು ಪ್ರಯತ್ನಗಳ ಬಳಿಕ ಈ ಆಸ್ಪತ್ರೆಯಲ್ಲಿರುವ ಸೋಂಕಿತರ ಸಂಖ್ಯೆ ಎರಡಕ್ಕೆ ಇಳಿದಿದ್ದು, ಜಿಲ್ಲೆಯ ಜನತೆ ನಿಟ್ಟುಸಿರು ಬಿಡುವಂತಾಗಿದೆ.

ಲಾಕ್‍ಡೌನ್‍ನಿಂದಾಗಿ ಮನೆಯಲ್ಲಿರುವವರಿಗೆ ಅಗತ್ಯ ವಸ್ತುಗಳ ಪೂರೈಕೆ, ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಮನೆಮನೆ ಭೇಟಿ, ವಿದೇಶದಿಂದ ಬಂದವರು ಹಾಗೂ ಜ್ವರ ಸೇರಿದಂತೆ ಇನ್ನಿತರ ಅನಾರೋಗ್ಯಕ್ಕೆ ತುತ್ತಾದವರ ಮಾಹಿತಿ ಸಂಗ್ರಹಿಸುವಿಕೆ ಸೇರಿದಂತೆ ಅನೇಕ ತುರ್ತು ಕಾರ್ಯಯೋಜನೆಗಳನ್ನು ಜಿಲ್ಲಾಡಳಿತ ಅನುಷ್ಠಾನ ಮಾಡಿದ ಪರಿಣಾಮ ಜಿಲ್ಲೆಯಲ್ಲಿ ಕೊರೋನಾ ಹತೋಟಿಗೆ ಬಂದಿದೆ. 

ಇದಕ್ಕಾಗಿ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ಶಿವರಾಮ ಹೆಬ್ಬಾರ್, ಮಾಜಿ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಈ ಮೂವರು ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೂಡ ಜಿಲ್ಲೆಯನ್ನು ಮಾದರಿಯನ್ನಾಗಿ ಪರಿಗಣಿಸಿ, ಇತರ ಜಿಲ್ಲೆಗಳಲ್ಲೂ ಉತ್ತರ ಕನ್ನಡದ ಕಾಯ್ಚಟುವಿಕೆಗಳನ್ನು ಪಾಲಿಸುವಂತೆ ಸೂಚಿಸಿದ್ದರು. ಕೇಂದ್ರ ಸರ್ಕಾರ ಕೂಡ ಸೋಂಕು ತಡೆಗಟ್ಟಲು ಜಿಲ್ಲೆ ಕೈಗೊಂಡ ಕ್ರಮಗಳನ್ನು ಶ್ಲಾಘಿಸಿದೆ.
***

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...