ಭಟ್ಕಳದಲ್ಲಿಂದು 9 ಹೊಸ ಕೋವಿಡ್-19 ಪ್ರಕರಣ ಪತ್ತೆ

Source: sonews | By Staff Correspondent | Published on 5th July 2020, 5:08 PM | Coastal News | Don't Miss |

ಭಟ್ಕಳ: ಭಟ್ಕಳದಲ್ಲಿ 9 ಕೋವಿಡ್-19 ಪ್ರಕರಣಗಳು ಸೇರಿದಂತೆ ಉತ್ತರಕನ್ನಡ ಜಿಲ್ಲೆಯಲ್ಲಿ 23 ಕೊರೋನಾ ಪ್ರಕರಣಗಳು ಭಾನುವಾರ ಬೆಳಕಿಗೆ ಬಂದಿವೆ.  

ಭಟ್ಕಳದಲ್ಲಿ 9, ಕುಮಟಾದಲ್ಲಿ 5, ಮುಂಡಗೋಡ, ಹಳಿಯಾಳದಲ್ಲಿ ತಲಾ 3, ಅಂಕೋಲಾ, ಕಾರವಾರ, ಶಿರಸಿಯಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿದೆ.

ಇಂದಿನ ಹೊಸ ಪ್ರಕರಣಗಳೊಂದಿಗೆ, ಜಿಲ್ಲೆಯಲ್ಲಿ ಕರೋನಾ ಸೋಂಕಿಗೆ ಒಳಗಾದವರ ಸಂಖ್ಯೆ 356 ಕ್ಕೆ ಏರಿದಂತಾಗಿದೆ. ಅವರಲ್ಲಿ ಹೆಚ್ಚಿನವರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಇಂದು ಭಟ್ಕಲ್‌ನಲ್ಲಿ ಬೆಳಕಿಗೆ ಬಂದಿರುವ ಒಂಬತ್ತು ಪ್ರಕರಣಗಳಲ್ಲಿ ಕೇರಳದಿಂದ ಹಿಂದಿರುಗಿದ ಮುರಢೇಶ್ವರದ 26 ವರ್ಷದ ಯುವಕ, ದೀರ್ಘ ಕಾಲದಿಂದ ಹಾಸಿಗೆ ಹಿಡಿದಿದ್ದ 76 ವರ್ಷದ ಮಹಿಳೆ ಸೋಂಕಿತೆ ನರ್ಸ್ ನ ಸಂಪರ್ಕಕ್ಕೆ ಬಂದಿದ್ದರಿಂದ ಅವರ ವರದಿಯೂ ಪಾಸಿಟಿವ್ ಆಗಿದೆ. ಇಬ್ಬರು ಮಹಿಳೆಯರು, ನಾಲ್ಕು ಪುರುಷರು ಮತ್ತು ಒಬ್ಬ ಹುಡುಗ ಇವರು ಇತ್ತಿಚೆಗೆ ಸಾವನ್ನಪಿರುವ ಯುವಕನ ಮದುವೆಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.

ಭಟ್ಕಳದ ಮಹಿಳೆಯೊಬ್ಬರ ವರದಿ ಮಂಗಳೂರಿನಲ್ಲಿ ಪಾಸಿಟಿವ್: ಮೂತ್ರ ಸಂಬಂಧಿಸಿ ರೋಗದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ  ಭಟ್ಕಳ ಮೂಲದ ಮಹಿಳೆಯ ವರದಿಯು ಕರೋನಾ ಪಾಸಿಟಿವ್ ಆಗಿದೆ ಎಂದು ತಿಳಿದುಬಂದಿದೆ. 65 ವರ್ಷದ ಮಹಿಳೆ ಈಗ ಉತ್ತಮ ಮತ್ತು ಆರೋಗ್ಯವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...