ಮುಂಡಗೋಡ ; ಮಹಾಮಳೆಗೆ 21 ಕೆರೆಗಳು ಹಾನಿ

Source: sonews | By Staff Correspondent | Published on 24th August 2019, 8:24 PM | Coastal News |

ಮುಂಡಗೋಡ ; ಚಿಗಳ್ಳಿಜಲಾಶಯ ಸೇರಿದಂತೆ ಮುಂಡಗೋಡ ತಾಲೂಕಿನ 21ಕೆರೆಗಳು ಧಾರಕಾರ ಸುರಿದ ಮಳೆಗೆ ಕೆರೆಗಳು ಜಖಂಗೊಂಡು  ಅಪಾರ ಹಾನಿಗೆ ಒಳಪಟ್ಟಿವೆ.

ತಾಲೂಕಿಲ್ಲಿ ಇತ್ತಿಚಿಗೆ ಸುರಿದ ಮಳೆ ತಾಲೂಕಿನಲ್ಲಿ ಹಿಂದೆಂದು ಕಂಡರಿಯದ  ಅತಿಹೆಚ್ಚು ಮಳೆ ಸುರಿಯುವ ಮೂಲಕ ಅಪಾರ ಪ್ರಮಾಣದ ಆಸ್ತಿಪಾಸ್ತಿಗೆ ಹಾನಿಸಂಭವಿಸಿದೆ. ಅಲ್ಲದೆ ನೀರಿನ ಒತ್ತಡದಿಂದ ತಾಲೂಕಿನಲ್ಲಿ 20ಕ್ಕೂ ಅಧಿಕ ಕೆರೆಗಳು ಒಡೆದು ಕೆಳಭಾಗದ ಗದ್ದೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ

ಒಡೆದಿರುವ ಕೆರೆಗಳು : ಬ್ಯಾನಳ್ಳಿ ಸರ್ವೇನಂ 17 ರ ಕೆರೆ, ಕೆರೆ ಒಡ್ಡು ಒಡೆದಿದೆ. ಕರವಳ್ಳಿ ಕೆರೆಯ ಒಡ್ಡಿನಲ್ಲಿ ರಂದ್ರಬಿದ್ದು ಹಾನಿ, ತಟ್ಟಿಹಳ್ಳಿಕೆರೆ ಕಾಲುವೆ ಬದುಗಳು ಕುಸಿತ, ಉಗ್ಗಿನಕೆರೆ ಗ್ರಾಮದ ಕೆರೆಯ ಉಬ್ಬು ಮಡಿಗಳ ಕುಸಿತ, ಮೈನಳ್ಳಿ ದೊಡ್ಡಕೆರೆ ಒಡ್ಡು ಕುಸಿತ, ಸಿದ್ದಾಪುರ ಹಳ್ಳಿಕೊಪ್ಪ ಕೆರೆಯ ಬದು ಕುಸಿತ, ಇಂದೂರ ಗ್ರಾಮದ ಕೊಟಗೊಣಸಿ ಕೆರೆ ಏರಿ ಒಡಿದಿದೆ. ಇಂದೂರ ಸೊಲ್ದಿರಪ್ಪ ಕೆರೆ ಏರಿ ಒಡೆದಿದೆ ಓರಲಗಿ ಹಿರೆಕೆರೆ ಒಡ್ಡು ಒಡೆದಿದೆ. ಅಂದಲಗಿ ಜಿಗಳಿಕೆರೆ ಕಾಲೂವೆ ಹಾಗೂ ಒಡ್ಡು ಕುಸಿತ, ಸಾಲಗಾಂವ ಜಿಗಳಿಕಟ್ಟಿ ಕೆರೆ ಒಡ್ಡು ಬದು ಕುಸಿತ, ಹಾಗೂ ಉಬ್ಬು ಮಡಿ ಕುಸಿತ, ಸುಳ್ಳಳ್ಳಿ ಹಳ್ಳಿದೊಡ್ಡಿಕೆರೆ ಒಡ್ಡು ಕುಸಿತ, ನಂದಿಗಟ್ಟಾ ದೊಡ್ಡ ಕೆರೆ ರಂಧ್ರ ಬಿದ್ದು ಉಬ್ಬು ಮಡಿ ಕುಸಿದಿದೆ ನಾಗನೂರ ದೇವರಗುಂಡಿಕೆರೆ ಕಾಲುವೆಗೆ ಹಾನಿ, ಶಿರಗೇರಿ ಕೆರೆ ಒಡ್ಡು ಒಡೆದಿದೆ. ಬ್ಯಾನಳ್ಳಿ ಒಡ್ಡು ಒಡೆದು ಹಾನಿ, ಉಗ್ಗಿನಕೆರೆ ಅಮ್ಮಿನಬಾವಿ ಕೆರೆ ಏರಿ ಒಡೆದಿದೆ.. ಹುನಗುಂದ ನಿಂಗನವನ ಕೆರೆ ಉಬ್ಬು ಮಡಿಕಾಲುವೆ ಕುಸಿತ ದೊಡ್ಡ ಹಾರೋಳ್ಳಿ ದೊಡ್ಡಕೆರೆ ಒಡ್ಡು ಕುಸಿತ, ಕೊಪ್ಪ ಗ್ರಾಮದ ಹಿರಿಕೆರೆ ಒಡ್ಡಿನ ಬದು ಕುಸಿತ, ಅಟ್ಟಣಗಿ ತುಂಬಿಕೆರೆ ಕಾಲುವೆ ಹಾಗೂ ಒಡ್ಡು ಕುಸಿತ, ಹೀಗೆ ಇಪ್ಪತ್ತೊಂದು ಕೆರೆಗಳು ಹಾಗು ಚಿಗಳ್ಳಿಜಲಾಶಯದ ಒಡ್ಡು ಒಡೆದು ತಾಲೂಕಿನಲ್ಲಿ ಕೊಟ್ಯಾಂತರ ರೂ ಹಾನಿ ಸಂಭವಿಸಿದೆ. ಚಿಗಳ್ಳಿ ಜಲಾಶಯದ ಹಾನಿಯನ್ನು ಹೊರತುಪಡಿಸಿ 21 ಕೆರೆಗಳ ಒಡ್ಡು ಕುಸಿತ ಒಡ್ಡು ಒಡೆದಿರುವುದು ಎಲ್ಲ ಕೆರೆಗಳ ದುರಸ್ತಿಗೆ 1.90 ಕೋಟಿ ರು ಅನುದಾನ ಅವಶ್ಯಕತೆ ಇದೆ ಎಂದು ಪಂಚಾಯತ್ ರಾಜ್ ಇಂಜನಿಯರಿಂಗ್ ಇಲಾಖೆಯವರು ಹಿರಿಯ ಅಧಿಕಾರಿಗಳಿಗೆ ವರದಿಸಲ್ಲಿಸಿದ್ದಾರೆ
 

Read These Next