ಮುಂಡಗೋಡ: ಇಪ್ಪತ್ತುಸಾವಿರ ರೂ ಮೌಲ್ಯದ ಗಾಂಜಾವಶ : 4 ಆರೋಪಿಗಳ ಬಂಧನ

Source: Nazir Tadapatri | By S O News | Published on 4th August 2021, 2:36 PM | Coastal News |

ಮುಂಡಗೋಡ: ಗಾಂಜಾ ಪ್ರಕರಣಕ್ಕೆ ಸಂಬಂದಪಟ್ಟಂತೆ ಪೊಲೀಸರು 4 ಆರೋಪಿಗಳನ್ನು ಬಂದಿಸಿ ಬಂದಿತರಿಂದ 20000 ರೂ ಮೌಲ್ಯದ ಗಾಂಜಾ ವಶಪಡಿಸಿಕೊಂಡ ಘಟನೆ ತಾಲೂಕಿನ ಸಾಲಗಾಂವ ಗ್ರಾಮದ ಬಸ್ಟ್ಯಾಂಡ್ ಹತ್ತಿರ ಮಂಗಳವಾರ ಸಂಜೆ ನಡೆದಿದೆ.

ಮುಂಡಗೋಡ ತಾಲೂಕ ಸಾಲಗಾಂವ ಗ್ರಾಮದ ಗಂಗಪ್ಪ ಪರಸಣ್ಣವರ, ಹಾನಗಲ್ ತಾಲೂಕಿನ ನವನಗರದ ಇಮ್ರಾನ್ ಬ್ಯಾಡಗಿ, ಹಾನಗಲ್ ತಾಲೂಕಿನ ಅಕ್ಕಿಆಲೂರ ಮಕ್ಬೂಲಿಯಾನಗರದ ಮಹ್ಮದಇರ್ಫಾನ ತಿಮ್ಮಾಪುರ, ಶೇಖಅಹ್ಮದ ಅಶ್ಪಾಕ ಮೂಲತಃ ಕಾಸರಗೋಡ ಹಾಲಿ ವಸ್ತಿ ಅಕ್ಕಿಆಲೂರ ಬಂದಿತ ಆರೋಪಿಗಳಾಗಿದ್ದಾರೆ.

ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿ ಗಂಗಪ್ಪ ಪರಸಣ್ಣವರ ಗೆ ಇತರೆ ಮೂರು ಆರೋಪಿಗಳು ಗಾಂಜಾ ನೀಡುತ್ತಿದ್ದಾಗ ನಾಲ್ಕು ಆರೋಪಿಗಳನ್ನು ಬಂಧಿಸಿ ಇಪ್ಪತ್ತುಸಾವಿರ ರೂ ಮೌಲ್ಯದ 628 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಪಿಎಸ್‍ಐ ಬಸವರಾಜ ಮಬನೂರ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Read These Next

ಕಾರವಾರ: ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೂಚನೆ

ಮುಂದಿನ ಎರಡು ವರ್ಷದೊಳಗಾಗಿ ಜಿಲ್ಲೆಯಲ್ಲಿರುವ ಕುಡಿಯುವ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದ್ದು, ...