ಭಟ್ಕಳದಲ್ಲಿ ವರುಣ ನ ಜೊತೆಯಲ್ಲೇ ಕೊರೋನದ ಅರ್ಭಟ; ಇಂದು 16 ಜನರಿಗೆ ಪಾಸಿಟಿವ್

Source: sonews | By Staff Correspondent | Published on 4th July 2020, 3:04 PM | Coastal News | Don't Miss |

ಭಟ್ಕಳ: ಕಳೆದ ಎರಡು ದಿನಗಳಿಂದ ಭಟ್ಕಳ ತಾಲೂಕಿನಾದ್ಯಂತ ವರುಣನ ಅರ್ಭಟ ಜೋರಾಗಿದ್ದು ರಾತ್ತಿಯಿಡಿ ಮಳೆ ನಿರಂತರವಾಗಿ ಸುರಿಯುತ್ತಿದ್ದರೆ ಇತ್ತ ಕೊರೋನ ಸೋಂಕು ಕೂಡ ಅರ್ಭಟಿಸುತ್ತ ಭಟ್ಕಳಕ್ಕೆ ಮತ್ತೆ ವಕ್ಕರಿಸುತ್ತಿದೆ. ಕಳೆದ ಎರಡು ದಿನಗಳಿಂದ ನಿರಂತರವಾಗಿ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿದ್ದು ಶನಿವಾರ ದುಬೈ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದಿಂದ ಬಂದ 16 ಜನರಲ್ಲಿ ಕೊರೋನ ಕಾಣಿಸಿಕೊಂಡಿದೆ.

ತಾಲೂಕಿನ ಮದೀನಾ ಕಾಲೋನಿಯ 6 ಮಂದಿ , ಬಂದರ ರೋಡಿನ 1 ,ಹೌಸಿಂಗ್ ಬೋರ್ಡ್ 1, ಮಸ್ಕತ್ ಕಾಲೋನಿಯ 1, ಆಜಾದ್ ನಗರ 1, ಶಾದಲಿ ಸ್ಟ್ರೀಟ್ 2, ಬೆಳಲಖಂಡ ಗುಲ್ಮಿಯಲ್ಲಿ 4, ಒಟ್ಟು 16 ಪ್ರಕರಣ ಪತ್ತೆಯಾಗಿದ್ದು ಇವರೆಲ್ಲ ಬೇರೆ ಸ್ಥಳಗಳಿಂದ ಬಂದು ಕ್ವಾರಂಟೈನಲ್ಲಿದ್ದವರಾಗಿದ್ದಾರೆ ಎನ್ನಲಾಗಿದೆ.

ಮದೀನಾ ಕಾಲೋನಿ: 6 ಪ್ರಕರಣ ವಿಜಯವಾಡ ರಿಟನ್ ತಾಲೂಕಿನ ತಾಲೂಕಿನ ಮದೀನಾ ಕಾಲೋನಿಯ ನಿವಾಸಿಗಳಾದ 28 ವರ್ಷದ ಪುರುಷ, 15 ಹಾಗೂ 4 ವರ್ಷದ ಬಾಲಕ, 2 ವರ್ಷದ ಮಗು, 13 ಹಾಗೂ 25 ವರ್ಷದ ಯುವತಿ ಬೆಳಲಖಂಡ ಗುಲ್ಮಿ: 4 ಪ್ರಕರಣ ಮುಂಬೈ ಹಾಗೂ ವಿಜಯವಾಡ ರಿಟನ್ 47 ಹಾಗೂ 35 ವರ್ಷದ ಪುರುಷ , 18 ಹಾಗೂ 22 ವರ್ಷದ ಯುವಕ,

ಶಾದಲಿ ಸ್ಟ್ರೀಟ್: 2 ಪ್ರಕರಣ ವಿಜಯವಾಡ ರಿಟನ್ 2 ಹಾಗೂ 8 ವರ್ಷದ ಮಗು ಬಂದರ ರೋಡ್ : 1 ಪ್ರಕರಣ ದುಬೈ ರಿಟನ್ 33 ವರ್ಷದ ಪುರುಷ, ಆಜಾದ್ ನಗರ: 1 ಪ್ರಕರಣ ವಿಜಯವಾಡ 36 ವರ್ಷದ ಮಹಿಳೆ

ಮಸ್ಕತ್ ಕಾಲೋನಿ: 1 ಪ್ರಕರಣ ದುಬೈ ರಿಟನ್ 42 ವರ್ಷದ ಮಹಿಳೆ.

ಹೌಸಿಂಗ್ ಬೋರ್ಡ್: 1 ಪ್ರಕರಣ ದುಬೈ ರಿಟನ್ ಒಟ್ಟು ಸೇರಿ 16 ಪ್ರಕರಣ ಪತ್ತೆಯಾಗಿದ್ದು ಇವರೆಲ್ಲ ದುಬೈ ,ವಿಜಯವಾಡ ಹಾಗೂ ಮುಂಬೈನಿಂದ ಬಂದವರಾಗಿದ್ದಾರೆ.

200 ಜನರ ಗಂಟಲು ದ್ರವ ಪರೀಕ್ಷೆಗೆ ರವಾನೆ: ಇತ್ತೀಚೆಗೆ ಭಟ್ಕಳದಲ್ಲಿ ನವ ವಿವಾಹಿತ ಯುವಕ ಮೃತಪಟ್ಟಿದ್ದು ಆತನ ವರದಿಯು ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಯುವಕನ ಸಂಪರ್ಕಕ್ಕೆ ಬಂದವರೆನ್ನಲಾದ ಸುಮಾರು 200 ಜನರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದು ಅದರ ವರದಿಯು ಬಂದ ನಂತರ ಭಟ್ಕಳದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗುವ ಸಂಭವವಿದೆ ಎನ್ನಲಾಗಿದ್ದು ಶನಿವಾರ ಸಂಜೆ ವೇಳೆಗೆ ವರದಿ ಬರುವ ನಿರೀಕ್ಷೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮುಂಬರುವ ದಿನಗಳಲ್ಲಿ ಭಟ್ಕಳದಲ್ಲಿ ಕೊರೋನ ಪೀಡಿತರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಇಲ್ಲಿನ ವುಮೆನ್ಸ್ ಸೆಂಟರ್ ನ್ನು ಕೋವಿಡ್-19 ಕೇಂದ್ರವನ್ನಾಗಿ ಮಾರ್ಪಡಿಸಿದ್ದು ತಂಝೀಮ್ ಸಂಸ್ಥೆಯು ಇಲ್ಲಿ 80 ಹಾಸಿಗೆಯ ಬೆಡ್ ನ ವ್ಯವಸ್ಥೆಯನ್ನು ಮಾಡಿದ್ದು ಕಾರವಾರದ ಸರ್ಕಾರಿ ಆಸ್ಪತ್ರೆಯಿಂದ ಇನ್ನಷ್ಟು ಹಾಸಿಗೆಗಳನ್ನು ಪಡೆದು ಹೆಬಳೆ ಪಂಚಾಯತ್ ವ್ಯಾಪ್ತಿಯ ಭಟ್ಕಳ ವುಮೆನ್ಸ್ ಸೆಂಟರ್  100 ಹಾಸಿಗೆಯುಳ್ಳ ಕೊವಿಡ್ -19 ಕೇಂದ್ರವಾಗಿ ರೂಪಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...