ಸುರಕ್ಷಿತವಾಗಿ ದುಬೈ ತಲುಪಿದ ಉತ್ತರಕನ್ನಡ ಜಿಲ್ಲೆಯ ೧೮ಮೀನುಗಾರರು

Source: sonews | By Staff Correspondent | Published on 10th January 2019, 12:10 AM | Coastal News | National News | Gulf News | Don't Miss |

•    ತಾಯ್ನಾಡಿಗೆ ಮರಳುವ ತವಕ
 

ಭಟ್ಕಳ: ಅಕ್ರಮ ಗಡಿ ಪ್ರವೇಶದ ಆರೋಪದಡಿ  ಕಳೆದ 8 ತಿಂಗಳ ಹಿಂದೆ ಇರಾನ್ ಸರ್ಕಾರದಿಂದ ಬಂಧಿಸಲ್ಪಟ್ಟು ಅಲ್ಲಿ ಗೃಹಬಂಧನ ಎದುರಿಸುತ್ತಿದ್ದ ಉತ್ತರಕನ್ನಡ ಜಿಲ್ಲೆಯ 18 ಮೀನುಗಾರರು ಸೇರಿದಂತೆ ಭಾರತದ ಒಟ್ಟು 28 ಮೀನುಗಾರರು ಸುರಕ್ಷಿತವಾಗಿ ಬುಧವಾರ ರಾತ್ರಿ ಬೋಟ್ ಮೂಲಕ ದುಬೈನ ಜುಮೈರಾ ಬಂದರ್ ತಲುಪಿದರು.(ಭಾರತೀಯ ಕಾಲಮಾನ ರಾತ್ರಿ 11ಗಂಟೆಗೆ) ತಲುಪಿದ್ದಾಗಿ ಮೀನುಗಾರರ ಕುಟುಂಬದವರು ದೃಢಪಡಿಸಿದ್ದು ದುಬೈಯಿಂದ ಫೋಟೊ ಮತ್ತು ವಿಡಿಯೋ ಬಿಡುಗಡೆಗೊಳಿಸಿದ್ದಾರೆ. 
 

ಜುಲೈ 27ರಂದು 28 ಮೀನುಗಾರರು ದುಬೈ ಮೂಲಕ ಮೀನುಗಾರಿಕೆಗೆ ತೆರಳಿದ್ದು ಇರಾನ್ ನೇವಿ ಆಧಿಕಾರಿಗಳು ಅಕ್ರಮ ಗಡಿ ಪ್ರವೇಶದ ಹಿನ್ನೆಲೆಯಲ್ಲಿ ಮೂರು ಪ್ರತ್ಯೇಕ ಬೋಟುಗಳನ್ನು ವಶಕ್ಕೆ ಪಡೆದುಕೊಂಡು ಅದರಲ್ಲಿದ್ದ ಮೀನುಗಾರರನ್ನು ಗೃಹಬಂಧದಲ್ಲಿಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.  ದುಬೈ ಕರ್ನಾಕ ಎನ್.ಅರ್.ಐ ಫೋರಂ ನ ಪ್ರಯತ್ನದಿಂದಾಗಿ ಮಂಗಳವಾರ ಬಿಡುಗಡೆಗೊಂಡಿದ್ದ ಭಟ್ಕಳ ಸೇರಿದಂತೆ ಉತ್ತರಕನ್ನಡ ಜಿಲ್ಲೆಯ 18 ಮೀನುಗಾರರು ಸೇರಿಂದತೆ ಮಹಾರಾಷ್ಟ್ರ ರತ್ನಗಿರಿ ಜಿಲ್ಲೆಯ 5 ಹಾಗೂ 5ಜನ ಬೋಟ ಮಾಲಿಕರು ಸೇರಿದಂತೆ ಒಟ್ಟು 28ಮಂದಿ  ಈಗ ಸುರಕ್ಷಿತವಾಗಿ ದುಬೈ ತಲುಪಿದ್ದಾರೆ. 
ಉತ್ತರಕನ್ನಡ ಜಿಲ್ಲೆಯ 18 ಮೀನುಗಾರರ ವಿವರ: ಭಟ್ಕಳದ ನಿವಾಸಿಗಳಾದ ಮುಹಮ್ಮದ ಷರೀಫ್, ಉಸ್ಮಾನ್ ಬೊಂಬಾಯಿಕರ್, ಅಬ್ದುಲ್ಲಾ ಡಾಂಗಿ, ಅತೀಖುರ್ರಹ್ಮಾನ್ ಘಾರೊ, ಜಾಫರ್ ತಡಲಿಕರ್, ಖಲೀಲ್ ಪಾನಿ ಬುಡ್ಡೋ, ನಯೀಂ ಭಂಡಿ, ಇಬ್ರಹೀಮ್ ಮುಲ್ಲಾ, ಎಂ.ಅನ್ಸಾರ್ ಬಾಬು. ಕುಮಟಾ ತಾಲೂಕಿನ ಯಾಖೂಬ್ ಷಮಾಲಿ, ಇಲ್ಯಾಸ್ ಅಂಬಾಡಿ, ಇನಾಯತ್ ಷಮಾಲಿ, ಇಲ್ಯಾಸ್ ಘಾರೋ, ಅಜ್ಮಲ್ ಷಮಾಲಿ, ಇಬ್ರಾಹೀಂ ಹೂಡೆಕರ್, ಹೊನ್ನಾವರ ತಾಲೂಕಿನ ಮಂಕಿಯ ಮತ್ಲೂಬ್ ಸಾರಂಗ್, ಅಂಕೋಲಾ ತಾಲೂಕಿನ ಖಾಸೀಮ್ ಶೇಖ್ ಮತ್ತು ಶಿರೂರಿನ ಅಬ್ದುಲ್ ಹುಸೇನ್ ಸೇರಿದ್ದಾರೆ.
ಬುಧವಾರ ರಾತ್ರಿ ದುಬೈನ ಜುಮೈರಾ ಬಂದರ್ ತಲುಪಿದ ಇವರನ್ನು ಅವರ ಸಂಬಂಧಿಕರು, ಸ್ನೆಹಿತರು ಹಿತೈಷಿಗಳು ಸಂತೋಷದಿಂದ ಬರಮಾಡಿಕೊಂಡು ಅವರನ್ನು ತಬ್ಬಿಕೊಂಡು ಸಂತೋಷಪಟ್ಟರು. 

 

ತಾಯ್ನಾಡಿಗೆ ಮರಳುವ ತವಕ:

ದುಬೈಯಿಂದ ದೂರವಾಣಿಯಲ್ಲಿ ಮಾತನಾಡಿದ ಉಸ್ಮಾನ್ ಬೊಂಬಾಯಿಕರ್ ತನ್ನ ತಾಯ್ನಾಡಿಗೆ ಆದಷ್ಟು ಬೇಗ ಮರಳುವ ತವಕವನ್ನು ವ್ಯಕ್ತಪಡಿಸಿದ್ದು ಮನೆಯಲ್ಲಿ ತಾಯಿ ಹಾಗೂ ಸಹೋದರರನ್ನು ಕಾಣಬೇಕೆಂದು ಬಹುದಿನಗಳ ಕನಸು ಈಗ ನನಸಾಗುತ್ತಿದೆ. ನಮ್ಮೆಲ್ಲರನ್ನು ಸುರಕ್ಷಿತವಾಗಿ ಮರಳುವಂತೆ ಮಾಡಿದ ಅಲ್ಲಾಹನಿಗೆ ಕೃತಜ್ಞತೆಯನ್ನು ಸಲ್ಲಿಸುವುದಾಗಿ ತಿಳಿಸಿದರು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...