ಧಾರವಾಡ ಜಿಲ್ಲೆಯಲ್ಲಿ 144 ನಿಷೇಧಾಜ್ಞೆ.

Source: SO News | By Laxmi Tanaya | Published on 22nd April 2021, 7:34 AM | State News | Don't Miss |

ಧಾರವಾಡ : ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಆದೇಶದನ್ವಯ ಸಾರ್ವಜನಿಕರ ಹಿತದೃಷ್ಟಿಯಿಂದ ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ಕುರಿತು ಹಲವು ಅನುಸರಣಾ ಕ್ರಮಗಳನ್ನು ಪಾಲಿಸುವಂತೆ ಆದೇಶಿಸಿದ್ದಾರೆ.  
 
      ಧಾರವಾಡ ಜಿಲ್ಲೆಯಾದ್ಯಂತ ದಿನಾಂಕ:21-04-2021ರ ರಾತ್ರಿ 09 ಗಂಟೆಯಿಂದ ದಿನಾಂಕ          04-05-2021 ರ ಬೆಳಿಗ್ಗೆ 06 ಗಂಟೆಯವರೆಗೆ ಪ್ರತಿ ರಾತ್ರಿ 09 ಗಂಟೆಯಿಂದ ಬೆಳಿಗ್ಗೆ 06 ಗಂಟೆವರೆಗೆ ಹಾಗೂ ವಾರಾಂತ್ಯದಲ್ಲಿ ಶುಕ್ರವಾರ ರಾತ್ರಿ 09 ಗಂಟೆಯಿಂದ ಸೋಮವಾರ ಬೆಳಿಗ್ಗೆ 06 ಗಂಟೆಯವರೆಗೆ  ನಿಷೇಧಾಜ್ಞೆಯಲ್ಲಿ ನಮೂದಿಸಿದ ಷರತ್ತು ಹಾಗೂ ಸಡಲಿಕೆಗಳಿಗೊಳಪಟ್ಟು ಸಿ.ಆರ್.ಪಿ.ಸಿ. 1973ರ ಕಲಂ 144ರ ಮೇರೆಗೆ ಕಫ್ರ್ಯೂ ಜಾರಿ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿ ನಿತೇಶ್ ಪಾಟೀಲ  ಆದೇಶ ಹೊರಡಿಸಿದ್ದಾರೆ 

ರಾತ್ರಿ ಕರ್ಪ್ಯೂ ಮಾರ್ಗಸೂಚಿಗಳು: 

* ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಅಗತ್ಯ ಚಟುವಟಿಕೆಗಳನ್ನು ಹೊರತು ಪಡಿಸಿ ವ್ಯಕ್ತಿಗಳ ಚಲನೆಯನ್ನು ರಾತ್ರಿ 09.00 ಗಂಟೆಯಿಂದ ಬೆಳಿಗ್ಗೆ 06.00 ಗಂಟೆಯವರೆಗೆ ಕಟ್ಟುನಿಟ್ಟಾಗಿ ನಿಷೇಧಿಸಿದೆ.
* ತುರ್ತು ಚಿಕಿತ್ಸೆಯ ಅಗತ್ಯವಿರುವ ರೋಗಿಗಳು ಹಾಗೂ ಅವರ ಪರಿಚಾರಕರು/ವ್ಯಕ್ತಿಗಳು ಈ ಅವಧಿಯಲ್ಲಿ ಸಂಚರಿಸಬಹುದಾಗಿದೆ.
* ರಾತ್ರಿ ಕಾರ್ಯಾಚರಣೆ ಅಗತ್ಯವಿರುವ ಎಲ್ಲಾ ಕೈಗಾರಿಕೆಗಳು/ಕಂಪನಿಗಳಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಅಂತಹ ಕೈಗಾರಿಕೆಗಳು/ಕಂಪನಿಗಳಲ್ಲಿ ಕಾರ್ಯನಿರ್ವಹಿಸುವ ನೌಕರರು ಆಯಾ ಕೈಗಾರಿಕೆಗಳು/ಕಂಪನಿಯಿಂದ ನೀಡಲ್ಪಟ್ಟಿರುವ ಗುರುತಿನ ಚೀಟಿಯನ್ನು ತೋರಿಸಿ ಕರ್ತವ್ಯಕ್ಕೆ ಹಾಜರಾಗಬಹುದಾಗಿದೆ.
* ಟೆಲಿಕಾಂ ಮತ್ತು ಇಂಟರ್‍ನೆಟ್ ಸೇವೆ ಪೂರೈಕೆದಾರರ ನೌಕರರು ಮತ್ತು ವಾಹನಗಳು ಆಯಾ ಸಂಸ್ಥೆಯಿಂದ ನೀಡಲ್ಪಟ್ಟಿರುವ ಗುರುತಿನ ಚೀಟಿಯನ್ನು ತೋರಿಸಿ ಕರ್ತವ್ಯಕ್ಕೆ ಹಾಜರಾಗಬಹುದಾಗಿದೆ. ಮುಂದುವರೆದು, ಐಟಿ ಮತ್ತು ಐಟಿಇಎಸ್ ಕಂಪನಿ/ಸಂಸ್ಥೆಯ ಅಗತ್ಯ ಸಿಬ್ಬಂದಿಗಳು ಮಾತ್ರ ಕಛೇರಿಯಿಂದ ಕೆಲಸ ನಿರ್ವಹಿಸತಕ್ಕದ್ದು ಹಾಗೂ ಇನ್ನುಳಿದ ಸಿಬ್ಬಂದಿಗಳು ಮನೆಯಿಂದಲೇ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ.

* ಔಷಧಾಲಯಗಳು ಸೇರಿದಂತೆ ವೈದ್ಯಕೀಯ ತುರ್ತು ಮತ್ತು ಅಗತ್ಯ ಸೇವೆಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತವೆ ಹಾಗೂ ಇತರ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.

 ಟ್ರಕ್‍ಗಳು, ಸರಕು ವಾಹನಗಳು ಅಥವಾ ಖಾಲಿ ವಾಹನಗಳು ಸೇರಿದಂತೆ ಎಲ್ಲಾ ರೀತಿಯ ಸರಕುಗಳ ಚಲನೆಗೆ ಯಾವುದೇ ನಿರ್ಬಂಧವಿರುವುದಿಲ್ಲ. ಹೋಮ್ ಡೇಲಿವರಿ ಸರಕುಗಳು ಹಾಗೂ ಇ-ಕಾಮರ್ಸ್ ಕಂಪನಿಗಳ ಕಾರ್ಯಾಚರಣೆಯನ್ನು ಅನುಮತಿಸಲಾಗಿದೆ.
 * ದೂರ ರಾತ್ರಿ ಪ್ರಯಾಣದ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಬಸ್ ಟರ್ಮಿನಲ್ /ನಿಲ್ದಾಣ /ಸ್ಟಾಂಡ್‍ಗಳಲ್ಲಿ ಸಾರ್ವಜನಿಕ ಸಾರಿಗೆ, ಖಾಸಗಿ ವಾಹನ ಮತ್ತು ಟ್ಯಾಕ್ಸಿಗಳ(ಕ್ಯಾಬ್‍ಗಳನ್ನು ಒಳಗೊಂಡಂತೆ) ಮೂಲಕ ಸಂಚರಿಸಲು ಅವಕಾಶವಿರುತ್ತದೆ. ಪ್ರಯಾಣಿಕರು ಪ್ರಯಾಣದ ಸಮಯದಲ್ಲಿ ಅಗತ್ಯ ಪ್ರಯಾಣ ದಾಖಲೆ/ಟಿಕೇಟ್‍ಗಳನ್ನು ಹೊಂದಿರತಕ್ಕದ್ದು ಹಾಗೂ ಪರಿಶೀಲನೆ ವೇಳೆಯಲ್ಲಿ ಹಾಜರ ಪಡಿಸತಕ್ಕದ್ದು.
* ಶವಸಂಸ್ಕಾರ / ಅಂತ್ಯಕ್ರಿಯೆಗಳನ್ನು ಗರಿಷ್ಠ 20 ಜನರೊಂದಿಗೆ ನೆರವೇರಿಸಲು ಅನುಮತಿ ನೀಡಿದೆ.
* ಕೋವಿಡ್-19 ರ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳ ಕಾರ್ಯನಿರ್ವಹಣೆಗೆ ಯಾವುದೇ ನಿರ್ಬಂಧವಿರುವುದಿಲ್ಲ.

ವಾರಂತ್ಯದ ಕಫ್ರ್ಯೂ ಮಾರ್ಗಸೂಚಿಗಳು :

 ಅಗತ್ಯ ತುರ್ತು ಸೇವೆಗಳನ್ನು ಹೊರತು ಪಡಿಸಿ, ಶುಕ್ರವಾರ ರಾತ್ರಿ 09.00 ಗಂಟೆಯಿಂದ ಸೋಮವಾರ ಬೆಳಿಗ್ಗೆ 06.00 ಗಂಟೆವರೆಗೆ ವ್ಯಕ್ತಿಗಳ ಚಲನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

* ಕೋವಿಡ್-19 ಧಾರಕ ಮತ್ತು ನಿರ್ವಹಣಾ ಕರ್ತವ್ಯಗಳಲ್ಲಿ ಸಕ್ರಿಯವಾಗಿರುವ ಎಲ್ಲಾ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಛೇರಿಗಳು ಮತ್ತು ಅವುಗಳ ಸ್ವಾಯತ್ತ ಸಂಸ್ಥೆಗಳು, ನಿಗಮಗಳ ಅಧಿಕಾರಿಗಳು/ಸಿಬ್ಬಂದಿಗಳಿಗೆ ಅನಿಯಂತ್ರಿತ ಚಲನೆಯನ್ನು ಅನುಮತಿಸಲಾಗಿದೆ. 
* ತುರ್ತು ಮತ್ತು ಅಗತ್ಯ ಸೇವೆಗಳೊಂದಿಗೆ ವ್ಯವಹರಿಸುವ ಮತ್ತು 24x7 ಕಾರ್ಯಾಚರಣೆಗಳ ಅಗತ್ಯವಿರುವ ಎಲ್ಲಾ ಕೈಗಾರಿಕೆಗಳು/ಕಂಪನಿಗಳು/ಸಂಸ್ಥೆಗಳು ಕಾರ್ಯನಿರ್ವಹಿಸಲು ಅನುಮತಿ ನೀಡಿದೆ. ಅಂತಹ ಸಂಸ್ಥೆಗಳ ಉದ್ಯೋಗಿಗಳ ಚಲನೆಯನ್ನು ಅವರ ಸಂಸ್ಥೆಯಿಂದ ನೀಡಲ್ಪಟ್ಟಿರುವ ಅಧಿಕೃತ ಗುರುತಿನ ಚೀಟಿಯನ್ನು ಹಾಜರ ಪಡಿಸಿದಲ್ಲಿ ಅನುಮತಿಸಲಾಗುವುದು. ಅದಾಗ್ಯೂ ಸಾಧ್ಯವಾದಷ್ಟು ಮಟ್ಟಿಗೆ ಅಂತಹ ನೌಕರರನ್ನು ಮನೆಯಿಂದ ಕೆಲಸ ಮಾಡಲು ಪ್ರೋತ್ಸಾಹಿಸಲು ಸೂಚಿಸಿದೆ.
* ಟೆಲಿಕಾಂ ಮತ್ತು ಇಂಟರ್‍ನೆಟ್ ಸೇವೆ ಪೂರೈಕೆದಾರರ ನೌಕರರು ಮತ್ತು ವಾಹನಗಳು ಆಯಾ ಸಂಸ್ಥೆಯಿಂದ ನೀಡಲ್ಪಟ್ಟಿರುವ ಅಧಿಕೃತ ಗುರುತಿನ ಚೀಟಿಯನ್ನು ತೋರಿಸಿ ಕರ್ತವ್ಯಕ್ಕೆ ಹಾಜರಾಗಬಹುದಾಗಿದೆ. ಮುಂದುವರೆದು,ITಮತ್ತು ITeS ಕಂಪನಿ/ಸಂಸ್ಥೆಯ ಅಗತ್ಯ ಸಿಬ್ಬಂದಿಗಳು ಮಾತ್ರ ಕಛೇರಿಯಿಂದ ಕೆಲಸ ನಿರ್ವಹಿಸತಕ್ಕದ್ದು ಹಾಗೂ ಇನ್ನುಳಿದ ಸಿಬ್ಬಂದಿಗಳು ಮನೆಯಿಂದಲೇ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ.
* ತುರ್ತು ಚಿಕಿತ್ಸೆಯ ಅಗತ್ಯವಿರುವ ರೋಗಿಗಳು ಹಾಗೂ ಅವರ ಪರಿಚಾರಕರು/ವ್ಯಕ್ತಿಗಳು ಈ ಅವಧಿಯಲ್ಲಿ ಸಂಚರಿಸಬಹುದಾಗಿದೆ ಹಾಗೂ ವ್ಯಾಕ್ಸಿನೇಷನ್ ತೆಗೆದುಕೊಳ್ಳಲು ಉದ್ದೇಶಿಸಿರುವ ಅರ್ಹ ಜನರು ಕನಿಷ್ಠ ಪುರಾವೆಗಳನ್ನು ಹಾಜರ ಪಡಿಸಿದಲ್ಲಿ ಸಂಚಾರವನ್ನು ಅನುಮತಿಸಲಾಗುವುದು.
* ಆಹಾರ, ದಿನಸಿ, ಹಣ್ಣುಗಳು ಮತ್ತು ತರಕಾರಿ ವ್ಯಾಪಾರವನ್ನು ಮಾಡುವ ಅಂಗಡಿಗಳು, ಡೈರಿ, ಹಾಲಿನ ಬೂತ್‍ಗಳು, ಮಾಂಸ ಮತ್ತು ಮೀನು ಮಾರಾಟವನ್ನು ಬೆಳಿಗ್ಗೆ 06.00 ಗಂಟೆಯಿಂದ  ಬೆಳಿಗ್ಗೆ 10.00 ಗಂಟೆಯವರೆಗೆ ಅನುಮತಿಸಲಾಗಿದೆ. ಸಾರ್ವಜನಿಕ ಸಂಚಾರವನ್ನು ಆದಷ್ಟು ಕಡಿಮೆಗೊಳಿಸಲು ಹಾಗೂ ಗುಂಪು ಸೇರುವಿಕೆಯನ್ನು ತಡೆಯಲು ಅಗತ್ಯ ದಿನಬಳಕೆ ವಸ್ತುಗಳ ಪೂರೈಕೆಯನ್ನು ಆದಷ್ಟು ಮನೆ ಮನೆಗೆ ಪೂರೈಸಲು (ಕೋವಿಡ್-19ರ ಎಲ್ಲಾ ಶಿಷ್ಠಾಚಾರಗಳನ್ನು ಪಾಲಿಸುವ ಷರತ್ತಿಗೊಳಪಟ್ಟು) ಕ್ರಮ ಕೈಗೊಳ್ಳತಕ್ಕದ್ದು.
* ಹೊಟೇಲ್, ರೆಸ್ಟೋರಂಟ್ಸ್ ಮತ್ತು ಉಪಹಾರ ಗೃಹಗಳಲ್ಲಿ ಕೇವಲ ಪಾರ್ಸಲ್ ಸೇವೆ ಒದಗಿಸಲು ಅವಕಾಶ ಕಲ್ಪಿಸಿದೆ.
* ದೂರ ಪ್ರಯಾಣದ ರಾತ್ರಿ ಬಸ್ ಸೇವೆಗಳು, ರೈಲುಗಳು ಮತ್ತು ವಿಮಾನ ಪ್ರಯಾಣವನ್ನು ಅನುಮತಿಸಲಾಗಿದೆ. ವಿಮಾನ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮತ್ತು ಬಸ್ ಟರ್ಮಿನಲ್‍ಗಳು/ನಿಲ್ದಾಣಗಳು/ಸ್ಟಾಂಡ್‍ಗಳಲ್ಲಿ ಸಾರ್ವಜನಿಕ ಸಾರಿಗೆ, ಖಾಸಗಿ ವಾಹನಗಳು ಮತ್ತು ಟ್ಯಾಕ್ಸಿಗಳು (ಕ್ಯಾಬ್‍ಗಳನ್ನು ಒಳಗೊಂಡಂತೆ) ರೈಲು, ರಸ್ತೆ ಹಾಗೂ ವಿಮಾನಗಳ ಮೂಲಕ ಸಂಚರಿಸಲು ಕೋವಿಡ್-19 ಸೂಕ್ತ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಅನುಸರಿಸುವ ಷರತ್ತಿಗೊಳಪಟ್ಟು ಅವಕಾಶ ಕಲ್ಪಿಸಲಾಗಿದೆ. ಪ್ರಯಾಣಿಕರು ಪ್ರಯಾಣದ ಸಮಯದಲ್ಲಿ ಅಗತ್ಯ ಪ್ರಯಾಣ ದಾಖಲೆ/ಟಿಕೇಟ್‍ಗಳನ್ನು ಹೊಂದಿರತಕ್ಕದ್ದು ಹಾಗೂ ಪರಿಶೀಲನೆ ವೇಳೆಯಲ್ಲಿ ಹಾಜರ ಪಡಿಸತಕ್ಕದ್ದು.

* ಮದುವೆ ಸಮಾರಂಭಗಳಿಗೆ ಕೋವಿಡ್-19 ಸೂಕ್ತ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಅನುಸರಿಸುವ ಷರತ್ತಿಗೆಳಪಟ್ಟು 50 ಜನ ಮೀರದಂತೆ ಅನುಮತಿ ನೀಡಲಾಗಿದೆ.
* ಶವಸಂಸ್ಕಾರ / ಅಂತ್ಯಕ್ರಿಯೆಗಳನ್ನು ಗರಿಷ್ಠ 20 ಜನರೊಂದಿಗೆ ನೆರವೇರಿಸಲು ಅನುಮತಿ ನೀಡಿದೆ.
* ಎಲ್ಲಾ ಸಿನಿಮಾ ಹಾಲ್‍ಗಳು, ಶಾಪಿಂಗ್ ಮಾಲ್‍ಗಳು, ಜಿಮ್‍ಗಳು, ಕ್ರೀಡಾ ಸಂಕೀರ್ಣಗಳು, ಸ್ಟೇಡಿಯಂ, ಈಜುಕೊಳಗಳು, ಮನರಂಜನಾ ಉದ್ಯಾನವನಗಳು, ಚಿತ್ರಮಂದಿರಗಳು, ಬಾರ್‍ಗಳು ಮತ್ತು ಸಭಾಂಗಣಗಳು, ಅಸೆಂಬ್ಲಿ ಹಾಲ್‍ಗಳು ಹಾಗೂ ಇಂತಹ ಯಾವುದೇ ಪ್ರದೇಶ/ಸ್ಥಳಗಳು ಕಡ್ಡಾಯವಾಗಿ ಮುಚ್ಚತಕ್ಕದ್ದು.
* ಎಲ್ಲಾ ಸಾಮಾಜಿಕ/ರಾಜಕೀಯ/ಕ್ರೀಡೆ/ಮನರಂಜನೆ/ಶೈಕ್ಷಣಿಕ/ಸಾಂಸ್ಕøತಿಕ/ಧಾರ್ಮಿಕ ಸಭೆ/ ಇತರೆ ಕೂಟಗಳು ಮತ್ತು ದೊಡ್ಡ ಸಭೆಗಳನ್ನು ನಿಷೇಧಿಸಲಾಗಿದೆ.
* ಎಲ್ಲಾ ಧಾರ್ಮಿಕ ಸ್ಥಳಗಳು/ಪೂಜಾ ಸ್ಥಳಗಳಲ್ಲಿ ಸಾರ್ವಜನಿಕ ಪ್ರವೇಸವನ್ನು ನಿಷೇಧಿಸಿದೆ ಹಾಗೂ ಪೂಜಾ ಸ್ಥಳದಲ್ಲಿ ದೈನಂದಿನ ಧಾರ್ಮಿಕ ವಿಧಿ ವಿಧಾನಗಳನ್ನು ನೇರವೇರಿಸುವ ಅಧಿಕೃತ ವ್ಯಕ್ತಿಗಳು ದೈನಂದಿನ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲು ಅನುಮತಿಸಲಾಗಿದೆ.
* ಯಾವುದೇ ನಿರ್ಮಾಣ ಚಟುವಟಿಕೆಗಳನ್ನು ಅನುಮತಿಸಲಾಗುವುದಿಲ್ಲ.
* ಕೋವಿಡ್-19 ರ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳ ಕಾರ್ಯನಿರ್ವಹಣೆಗೆ ಯಾವುದೇ ನಿರ್ಬಂಧವಿರುವುದಿಲ್ಲ.
               
 ಸದರಿ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 188 ರ ಪ್ರಕಾರ ಕ್ರಮವನ್ನು ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ. 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...